ETV Bharat / state

ಹಾಲು ಉತ್ಪಾದಕರಿಗೆ 15 ಕೋಟಿ, ಸರ್ಕಾರಿ ಕಾಲೇಜುಗಳಿಗೆ 100 ಕಂಪ್ಯೂಟರ್  ವಿತರಣೆ : ಹೆಚ್​ಡಿ ರೇವಣ್ಣ - ಹೆಚ್​​ಡಿ ರೇವಣ್ಣ ಲೇಟೆಸ್ಟ್ ನ್ಯೂಸ್

ಮಾಜಿ ಸಚಿವ ರೇವಣ್ಣ, ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ 15 ಕೋಟಿ ರೂ.ಗಳನ್ನು ಒಕ್ಕೂಟದ ಹಾಲು ಉತ್ಪಾದಕರಿಗೆ ವಾಪಸ್ ನೀಡುವುದಾಗಿ ತಿಳಿಸಿದರು.

ಹೆಚ್​ಡಿ ರೇವಣ್ಣ
HD Revanna
author img

By

Published : Jan 20, 2021, 8:40 AM IST

ಹಾಸನ: ಮಾರ್ಚ್ ಅಂತ್ಯದ ವೇಳೆಗೆ ಹಾಸನ ಹಾಲು ಒಕ್ಕೂಟ ಸುಮಾರು 20 ಕೋಟಿ ರೂ.ಗಳ ಲಾಭಾಂಶ ಗಳಿಸಲಿದ್ದು, ಸದ್ಯ 15 ಕೋಟಿ ರೂ.ಗಳನ್ನು ಒಕ್ಕೂಟದ ಹಾಲು ಉತ್ಪಾದಕರಿಗೆ ವಾಪಸ್ ನೀಡುವುದಾಗಿ ಮಾಚಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದರು.

ಮಾಚಿ ಸಚಿವ ಹೆಚ್.ಡಿ.ರೇವಣ್ಣ

ನಗರದಲ್ಲಿರುವ ಹಾಲು ಒಕ್ಕೂಟದ ಸಮಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ.31ರ ಅಂತ್ಯಕ್ಕೆ ಹಾಲು ಒಕ್ಕೂಟವು ಸುಮಾರು 20 ಕೋಟಿ ರೂ.ಲಾಭ ಗಳಿಸುವ ನಿರೀಕ್ಷೆ ಇದ್ದು, ಇದರಲ್ಲಿ ಸುಮಾರು 15ರೂ. ಕೋಟಿ ಲಾಭ ಉತ್ಪಾದಕರಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ.

ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ ಮತ್ತು ಮಾರುಕಟ್ಟೆ ದರ ಕುಸಿತದಿಂದಾಗಿ ಹಾಸನ ಹಾಲು ಒಕ್ಕೂಟವು ಸೆಪ್ಟೆಂಬರ್​ ಅಂತ್ಯಕ್ಕೆ ಸುಮಾರು 50 ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು. ನಂತರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ ಚೇತರಿಕೆ ಕಂಡ ಪರಿಣಾಮ ಡಿಸಂಬರ್ ಅಂತ್ಯಕ್ಕೆ ಒಕ್ಕೂಟವು ನಷ್ಟವನ್ನು ಸರಿದೂಗಿಸಿಕೊಂಡು ಲಾಭಾಂಶದತ್ತ ದಾಪುಗಾಲು ಹಾಕುತ್ತಿದ್ದು, ಹಾಲು ಉತ್ಪಾದಕರಿಗೆ ಪಾವತಿಸುತ್ತಿದ್ದ ಖರೀದಿ ದರವನ್ನೂ 1 ರೂ. ಹೆಚ್ಚಿಸಲಾಗಿದೆ ಎಂದರು.

ಒಕ್ಕೂಟದಲ್ಲಿ ಸ್ಥಾಪನೆ ಮಾಡುತ್ತಿರುವ ಉದ್ದೇಶಿತ ಯುಎಚ್​​​ಟಿ ಪ್ಲಾಟ್ ಹಾಲಿನ ಪೆಟ್ ಬಾಟಲ್ ಫಟಕದ ಯಂತ್ರೋಪಕರಣಗಳ ಅಳವಡಿಕೆಗೆ ಇಟಲಿಯಿಂದ ತಂತ್ರಜ್ಞರು ಆಗಮಿಸಿದ್ದು, ಮಾಚ್ .31ರ ವೇಳೆಗೆ ಉತ್ಪಾದನೆ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಪ್ರತಿವರ್ಷ ಒಕ್ಕೂಟದ ನಿಧಿಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಕಾಲೇಜುಗಳಿಗೆ ಕಂಪ್ಯೂಟರ್ ಪಠ್ಯ ಬೋಧನಗೆ ಅಗತ್ಯವಿರುವ ಕಂಪ್ಯೂಟರ್ ಮತ್ತು ಇತರ ವಸ್ತುಗಳನ್ನು ಒದಗಿಸುತ್ತ ಬಂದಿದ್ದು, ಈ ಬಾರಿಯೂ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ 100 ಗಣಕಯಂತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಜೊತಗೆ ಸಹಕಾರ ಶಿಕ್ಷಣ ನಿಧಿಗೆ ಜಿಲ್ಲಾ ಸಹಕಾರ ಯೂನಿಯನ್​​ಗೆ 1 ಲಕ್ಷ ದೇಣಿಗೆ ನೀಡುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.