ETV Bharat / state

ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತರಿಂದ ದೇವಿಗೆ ಹಲವು ಬೇಡಿಕೆಗಳ ವಿಭಿನ್ನ ಪತ್ರಗಳು! - Hassan News

ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಸ್ಥಾನದ ಬಾಗಿಲು 12 ದಿನಗಳು ತೆರೆದಿದ್ದರೂ ಸಹ ಕೊನೆಯ 2 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ನೀಡಿ ಈಗಾಗಲೇ ಬಾಗಿಲಿಗೆ ಬೀಗ ಹಾಕಲಾಗಿದೆ.

Many letters from devotees who came to Hasanamba temple Visitors
ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತರಿಂದ ದೇವಿಗೆ ಹಲವು ಬೇಡಿಕೆ ಪತ್ರಗಳು
author img

By

Published : Nov 17, 2020, 9:32 PM IST

ಹಾಸನ: ಹಾಸನಾಂಬೆ ದೇವಿ ದರ್ಶನ ಮಾಡುವಾಗ ಕೆಲ ಭಕ್ತರು ಕಾಣಿಕೆಯಾಗಿ ಹಣ, ಚಿನ್ನ, ಬೆಳ್ಳಿ ಹಾಕಿದರೆ, ಇನ್ನು ಕೆಲವರು ವರ ನೀಡುವಂತೆ ಮನವಿ ಮಾಡಿರುವ ಬೇಡಿಕೆಯ ಪತ್ರಗಳು ಕಾಣಿಕೆ ಹುಂಡಿಗಳಲ್ಲಿ ಹಾಕಿರುವುದು ಹಣ ಏಣಿಕೆ ವೇಳೆ ಕಂಡು ಬಂದಿವೆ.

ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತರಿಂದ ದೇವಿಗೆ ಹಲವು ಬೇಡಿಕೆ ಪತ್ರಗಳು

ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಸ್ಥಾನದ ಬಾಗಿಲು 12 ದಿನಗಳು ತೆರೆದಿದ್ದರೂ ಸಹ ಕೊನೆ 2 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ನೀಡಿ ಈಗಾಗಲೇ ಬಾಗಿಲಿಗೆ ಬೀಗ ಹಾಕಲಾಗಿದೆ. ಈ ವೇಳೆ ಭಕ್ತರಿಂದ ಬೇಡಿಕೆ ಈಡೇರಿಸಲು ಬಂದ ವಿಭಿನ್ನ ಪತ್ರಗಳು ನೂರಾರು ಇದ್ದವು. ಅನೇಕ ಪತ್ರಗಳಲ್ಲಿ ಬರೆದವರ ಹೆಸರು ಹಾಕಿದ್ದರೆ, ಉಳಿದ ಪತ್ರಗಳಲ್ಲಿ ಹೆಸರು ಇಲ್ಲದೆ ಬೇಡಿಕೆ ಮಾತ್ರ ಕಂಡುಬಂದವು.

ನನಗೆ ನನ್ನ ಹೆಂಡತಿ ಮಕ್ಕಳು ಬೇಕು,. ನಾನು ಕುಡಿಯುವುದಿಲ್ಲ,. ಸಂಜೆ ಸ್ವಲ್ಪ ಸ್ವಲ್ಪ ಅಷ್ಟೇ ತೆಗೆದುಕೊಳ್ಳುತ್ತೇನೆ,. ಕೆಲಸ ಪರ್ಮೆಂಟ್ ಆಗಲಿ ತಾಯಿ,. ನನಗೆ ಮದುವೆ ಆಗಬೇಕು ಅಮ್ಮ,. ಹಾಗೆಯೇ ಕೊರೊನಾ ಎಂದು ಹೇಳಿ ತಮಗೆ ಬೇಕಾದವರಿಗೆ ಪಾಸ್ ಕೊಟ್ಟು ದೇವರ ದರ್ಶನ ಮಾಡಿಸಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧವೇ ದೂರಿನ ಪತ್ರ ಬರೆದಿದ್ದಾರೆ.

ದೊಡ್ಡ ಮೊತ್ತದ ಲಾಟರಿ ಹೊಡೆಸು ತಾಯಿ, ಕುಟುಂಬದವರನ್ನು ಕಾಪಾಡು ತಾಯಿ,. ಪ್ರಾಣಿ ಪಕ್ಷಿಗಳನ್ನು ಕಾಪಾಡು ತಾಯಿ,. ಅಮ್ಮ ನನಗೆ ಒಳ್ಳೆ ವರ ಕೊಡಮ್ಮ, ಆಮೇಲೆ ನನಗೆ ಮದುವೆ ಆಗಬೇಕು ಅಮ್ಮ ಎಂದು ಭಕ್ತರೊಬ್ಬರು ಪತ್ರ ಬರೆದಿದ್ದಾರೆ.

ಕೌಟುಂಬಿಕ ‌ಸಮಸ್ಯೆ, ಸಾಲ ತೀರಿಸು, ಹಣಕಾಸು ಸಮಸ್ಯೆ ಬಗೆಹರಿಸು ತಾಯೆ, ಒಳ್ಳೆ ಕೆಲಸ ಕೊಡಿಸು ಹಾಸನಾಂಬೆ. ಕೊರೊನಾ ಹೋಗಲಾಡಿಸು ಎಂದು ಕೆಲವರು‌ ಕೇಳಿಕೊಂಡರೆ, ಮತ್ತೆ ಕೆಲವರು ಪತ್ನಿ ಮಕ್ಕಳ ಒಂದು‌ ಮಾಡು, ನನ್ನ ಗಂಡ ಕುಡಿಯುವುದನ್ನು ಬಿಡಿಸು ಎಂದು ಪತ್ರದ ಮೂಲಕ ನಿವೇದನೆ‌ ಮಾಡಿಕೊಂಡಿದ್ದರು.

ಹಾಸನಾಂಬೆ ‌ಪಾಸ್ ವಿತರಣೆ ತಾರತಮ್ಯದ ವಿರುದ್ಧ ಪತ್ರದ ಮೂಲಕ ಕೆಲವರು ಅಸಮಾಧಾನ ಹೊರಹಾಕಿದ್ದರು. ಪತ್ರಿ ವರ್ಷ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಬರುತ್ತಿದ್ದ ಆದಾಯ ಇಳಿಕೆ ಕಂಡಿದ್ದು, ಈ‌ ಬಾರಿ‌ ಸಾರ್ವಜನಿಕ ದರ್ಶನ ನಿಷೇಧದಿಂದ ಆದಾಯ ಕಡಿಮೆಯಾಗಿದೆ.

40 ಸಾವಿರ ಭಕ್ತರಿಂದ ದರ್ಶನ:

ಈ ಬಾರಿ ಕೇವಲ ಎರಡು ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 40 ಸಾವಿರ ಭಕ್ತರು ದರ್ಶನ ಪಡೆದಿದ್ದಾರೆ.‌ ಆದರೆ ಕಳೆದ ಬಾರಿ 5 ಲಕ್ಷ ಭಕ್ತರು ದರ್ಶನ ಭಾಗ್ಯ ಪಡೆದಿದ್ದಾರೆ. ಅಲ್ಲದೆ ಆನ್​ಲೈನ್​ನಲ್ಲಿ 8.80 ಲಕ್ಷ ಮಂದಿ ದರ್ಶನ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.