ETV Bharat / state

ನಡುರಸ್ತೆಯಲ್ಲೇ ಯುವತಿಯ ಕೊಂದು ತೋಟದಲ್ಲಿ ನೇಣಿಗೆ ಶರಣಾದ ಯುವಕ - ಹುಡುಗಿ ಕೊಲೆ

ಮನೆಯಿಂದ ಹೊರಬಂದು ಬೇರೆಡೆ ತೆರಳುತ್ತಿದ್ದ ಯುವತಿಯನ್ನು ಕಂಡ ಆರೋಪಿ ಹೇಮಂತ್, ಮಾರಕಾಸ್ತ್ರದಿಂದ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಮನೆಗೆ ಆಗಮಿಸಿ ಕಾಫಿ ತೋಟದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಡುರಸ್ತೆಯಲ್ಲೇ ಪ್ರೇಯಸಿಯ ಕೊಂದು ತೋಟದಲ್ಲಿ ನೇಣಿಗೆ ಶರಣಾದ ಪಾಗಲ್​​ ಪ್ರೇಮಿ
author img

By

Published : Jan 28, 2021, 6:41 PM IST

ಹಾಸನ: ಪ್ರೀತಿಸಿದವಳನ್ನು ಕೊಂದ ಯುವಕ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸದ್ದಕ್ಕೆ ಹೇಮಂತ್ ಮಧ್ಯಾಹ್ನ ಆಕೆಯನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ವೇಳೆ ಆರೋಪಿ ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆದರೆ ಅದೃಷ್ಟವಶಾತ್ ಬದುಕುಳಿದಿದ್ದ. ಬಳಿಕ ಗ್ರಾಮಸ್ಥರು ಆತನನ್ನು ಹಿಡಿಯಲು ಮುಂದಾದರು. ಈ ಸಂದರ್ಭದಲ್ಲಿ ತನ್ನನ್ನು ಹಿಡಿದು ಸಾಯಿಸುತ್ತಾರೆ ಎಂಬ ಭಯದಿಂದ ಮನೆಯ ಪಕ್ಕದ ಕಾಫಿ ತೋಟದಲ್ಲಿ ನೇಣಿಗೆ ಶರಣಾಗಿದ್ದಾನೆ.

5 ವರ್ಷದಿಂದ ಪ್ರೀತಿಸುತ್ತಿದ್ದಾಕೆ ವಿವಾಹಕ್ಕೆ ಒಪ್ಪಲಿಲ್ಲ ಎಂದು ಕೊಲೆ ಮಾಡಿದ್ದಲ್ಲದೆ, ತಾನು ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡುಕೊಂಡಿದ್ದಾನೆ.

ಇದನ್ನೂ ಓದಿ: ಹಾಸನ: ಪ್ರೀತಿ ನಿರಾಕರಿಸಿದ ಯುವತಿ, ರಸ್ತೆಯಲ್ಲೇ ಕೊಚ್ಚಿ ಕೊಂದ ಪಾಗಲ್ ಪ್ರೇಮಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.