ETV Bharat / state

ಆಸ್ತಿಗಾಗಿ ಅಪಘಾತ ಮಾಡಿಸಿ ಹತ್ಯೆ: 6 ವರ್ಷದ ಬಳಿಕ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಆಸ್ತಿಗಾಗಿ ಪತ್ನಿಯ ಅಕ್ಕ ಮತ್ತು ಭಾವನನ್ನು ಅಪಘಾತ ಮಾಡಿಸಿ ಕೊಲೆಗೈದ ಅಪರಾಧಿಗಳಿಗೆ ಚನ್ನರಾಯಪಟ್ಟಣದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.

hassan
ಆರು ವರ್ಷದ ಪ್ರಕರಣಕ್ಕೆ ತೀರ್ಪು ಘೋಷಣೆ
author img

By

Published : Aug 26, 2021, 11:02 AM IST

ಹಾಸನ: ಪತ್ನಿಯ ಅಕ್ಕ ಮತ್ತು ಭಾವನ ಆಸ್ತಿಯನ್ನು ಕಬಳಿಸಲೆಂದು ಅಪಘಾತ ಮಾಡಿಸಿ ಅವರನ್ನು ನಿರ್ದಯವಾಗಿ ಕೊಲೆಗೈದ ನಾಲ್ವರು ಕಿರಾತಕರಿಗೆ ಚನ್ನರಾಯಪಟ್ಟಣದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ನಾಗರಾಜ್​ ಎಂಬಾತ ತನ್ನ ಪತ್ನಿಯ ಅಕ್ಕ ಮತ್ತು ಭಾವನನ್ನು ಜಗದೀಶ್, ಲತೇಶ್ ಹಾಗೂ ದೀಪಕ್ ಜೊತೆ ಸೇರಿ ಅಪಘಾತ ಮಾಡಿಸುವ ಮೂಲಕ ಹತ್ಯೆಗೈದಿದ್ದ.

Hassan murder case accused
ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು

ಏನಿದು ಪ್ರಕರಣ?: 2015ರ ಜೂನ್ 17 ರಂದು ಮೋಹನ್ ಕುಮಾರ್ ಮತ್ತು ಪವಿತ್ರ ಸ್ವಗ್ರಾಮ ಬ್ಯಾಡರಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಟಾಟಾ ಸುಮೋ ವಾಹನ ಉದಯಪುರ ಸಮೀಪದ ಊಪಿನಹಳ್ಳಿ ಗೇಟ್ ಬಳಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಸ್ಥಳದಲ್ಲಿಯೇ ಪತಿ-ಪತ್ನಿ ಸಾವಿಗೀಡಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಇದು ಉದ್ದೇಶಪೂರ್ವಕವಾಗಿ ಮಾಡಿರುವ ಅಪಘಾತ ಎಂಬುದು ತಿಳಿದುಬಂದಿತ್ತು. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು, ನಾಲ್ಕು ಮಂದಿ ಆರೋಪಿಗಳನ್ನು ಪಟ್ಟಣದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪಡೆದಿದ್ದರು. ಈ ವೇಳೆ ಆಸ್ತಿ ಆಸೆಗಾಗಿ ಅಪಘಾತ ಮಾಡಿ ಕೊಲೆಗೈದಿರುವುದು ಬಹಿರಂಗವಾಗಿದೆ. ಈ ವಿಚಾರ ಕೇಳಿದ ಕುಟುಂಬಕ್ಕೆ ದಿಗ್ಭ್ರಾಂತವಾಗಿತ್ತು.

ಆರು ವರ್ಷದ ಪ್ರಕರಣಕ್ಕೆ ತೀರ್ಪು ಘೋಷಣೆ

ಇದೀಗ ನಾಲ್ವರು ಆರೋಪಿಗಳಿಗೆ ಚನ್ನರಾಯಪಟ್ಟಣದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸಂಶಿ ಜೀವಾವಧಿ ಶಿಕ್ಷೆ ವಿಧಿಸಿ, ತಲಾ 25 ಸಾವಿರ ದಂಡದ ಶಿಕ್ಷೆ ನೀಡಿದ್ದಾರೆ. ದಂಡ ಪಾವತಿಸದೇ ಇದ್ದಲ್ಲಿ ಮತ್ತೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವಂತೆ ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ ನಾಗರಾಜ್ ನಕಲಿ ಚೆಕ್ ನೀಡಿ ವಂಚಿಸಿದ ಹಿನ್ನೆಲೆಯಲ್ಲಿ ಆತನಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಹಾಗೂ ರೂ.20,000 ಹೆಚ್ಚುವರಿ ದಂಡ ವಿಧಿಸಿ, ಪಾವತಿಸದೇ ಇದ್ದಲ್ಲಿ ಮತ್ತೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಪವಿತ್ರ ಮತ್ತು ಮೋಹನ್ ಕುಮಾರ್​ ಅವರ ಅಪ್ರಾಪ್ತ ಮಕ್ಕಳಿಗೆ 35 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.