ಹಾಸನ : ಕೊನೆಯ ಕಾರ್ತಿಕ ಸೋಮವಾರವಾದ ಇಂದು ಭಕ್ತರು ಜಿಲ್ಲೆಯ ವಿವಿಧ ದೇವಾಲಯಗಳಿಗೆ ತೆರಳಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಬೇಲೂರು ತಾಲ್ಲೂಕು ಪುಪ್ಪಗಿರಿಯ ಮಠದಲ್ಲಿ ಇಂದು ದೀಪಾಲಂಕಾರ ಮಾಡಿದ್ದರಿಂದ ಭಕ್ತರ ಸಂಖ್ಯೆ ಕೂಡಾ ಹೆಚ್ಚಾಗಿತ್ತು. 108 ಶಿವಲಿಂಗ ದರ್ಶನಕ್ಕೆ ಭಕ್ತರ ದಂಡು ಆಗಮಿಸಿತ್ತು. ಪುಷ್ಪಗಿರಿ ಬೆಟ್ಟ ಹಾಗೂ ಮಠದ ಅವರನ್ನ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.
ಅರಸೀಕೆರೆಯ ಶಿವಾಲಯ ದೇವಾಲಯ, ಚನ್ನರಾಯಪಟ್ಟಣದ ಡಿ ಕಾಡಿನ ಹಳ್ಳಿಯಲ್ಲಿರುವ ಗದ್ದ ರಾಮೇಶ್ವರ ದೇವಾಲಯ ಸೇರಿದಂತೆ ಸೇರಿದಂತೆ ನಗರದ ನಗರದ ಪ್ರಮುಖ ದೇವಾಲಯಗಳಲ್ಲಿ ದೇವರ ಪೂಜೆ ಬಹಳ ವಿಜೃಂಭಣೆಯಿಂದ ಜರುಗಿತು.
ಇದಲ್ಲದೆ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ಕೊನೆಯ ಕಾರ್ತಿಕ ಸೋಮವಾರ ವನ್ನು ವೈಭವದಿಂದ ಆಚರಣೆ ಮಾಡಿದರು. ಮನೆಯ ಮುಂದೆ ರಂಗೋಲೆ ಮೂಲಕ ವಿವಿಧ ಚಿತ್ತಾರಗಳನ್ನು ಬಿಡಿಸಿ ಭಕ್ತಿಭಾವ ಮೆರೆದರು.