ಹಾಸನ: ಸಾರಿಗೆ ಬಸ್‌ನ್ನು ಚಾಲನೆಯಲ್ಲಿಯೇ ನಿಲ್ಲಿಸಿದ್ದೀಯ ಎಂದು ಆರೋಪಿಸಿ ಹಾಸನದಿಂದ ದಾಸಕೊಪ್ಪಲು ಮಾರ್ಗ ಮಧ್ಯೆ ಮೂವರು ಯುವಕರ ತಂಡ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ.
ಯೋಗಾರಾಜ್ (40) ಹಲ್ಲೆಗೊಳಗಾಗಿರುವ ಕೆಎಸ್ಆರ್ಟಿಸಿ ಬಸ್ ಚಾಲಕ. ಫೆ.10 ರ ಸೋಮವಾರ ಎಂದಿನಂತೆ ಬೆಳಿಗ್ಗೆ ಬಸ್ ನಗರದಿಂದ ದಾಸರಕೊಪ್ಪಲಿಗೆ ಸಂಚರಿಸುತ್ತಿದ್ದು, ಚಾಲಕ ಯೋಗರಾಜ್ ದಾಸರಕೊಪ್ಪಲಿನ ಸೊಸೈಟಿ ಬಳಿ ಚಾಲನೆಯಲ್ಲಿಯೇ ನಿಲ್ಲಿಸಿದ್ದಕ್ಕೆ ಪ್ರಶ್ನಿಸಿ ಮೂರು ಜನ ಯುವಕರು ಚಾಲಕನ್ನು ಕೆಳಗಿಳಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯಿಂದ ಚಾಲಕನಿಗೆ ತೀವ್ರ ಪೆಟ್ಟಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚಾಲಕ ಯೋಗಾರಾಜ್, ಕಳೆದ ಐದಾರು ವರ್ಷಗಳಿಂದ ದಾಸರಕೊಪ್ಪಲು ಮಾರ್ಗವಾಗಿ ಸಿಟಿ ಬಸ್ ಚಾಲನೆ ಮಾಡುತ್ತಿದ್ದೇನೆ. ಬಸ್ ಸಮಸ್ಯೆ ಇದ್ದುದರಿಂದ ದಾಸರಕೊಪ್ಪಲ ಸೊಸೈಟಿ ಬಳಿ ಪ್ರಯಾಣಿಕರು ಇಳಿಯುವವರೆಗೆ ಬಸ್ ಅನ್ನು ಚಾಲನೆಯಲ್ಲಿ ನಿಲ್ಲಿಸಿಕೊಂಡಿದ್ದೆ. ಆದರೆ ದಾಸರಕೊಪ್ಪಲಿನ ಛೇರ್ಮನ್ ರಾಮಚಂದ್ರ ಅವರ ಮಕ್ಕಳಾದ ರಾಹುಲ್, ನಕುಲ್ ಹಾಗೂ ಈತನ ಜೊತೆಯಲ್ಲಿದ್ದ ಗುರು ಮತ್ತಿತರು ನನ್ನ ಮೇಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.