ETV Bharat / state

ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ: ಕೋಡಿಮಠ ಶ್ರೀ ಭವಿಷ್ಯ

author img

By

Published : Sep 20, 2019, 10:16 PM IST

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ. ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕೋಡಿಮಠ ಶ್ರೀ

ಹಾಸನ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ. ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕನಕಪೀಠ ಹಾಗೂ ಸಮುದಾಯ ಭವನ ಉದ್ಘಾಟನಾ ಸಮಾರಂಭ

ಗಂಡಸಿ ಹೋಬಳಿಯ ಗಂಗೆ ಮಡುವಿನ ಗೊಲ್ಲರಹಳ್ಳಿಯಲ್ಲಿ ಕನಕಪೀಠ ಹಾಗೂ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬಹಿರಂಗವಾಗಿ ಕೋಡಿಮಠ ಶ್ರೀಗಳು ಸಿದ್ದರಾಮಯ್ಯ ಅವರಿಗೆ ಶುಭದಿನ ಇದೆ ಎಂದರು.

ನಾನು ಹಿಂದೆ ಸಿದ್ದರಾಮಯ್ಯ ಅವರಿಗೆ ಭವಿಷ್ಯ ಇದೆ ಎಂದು ಹೇಳಿದ್ದೆ. ಅಂಬಲಿ ಹಳಸಿತು ಕಂಬಳಿ ಹಾಸಿತು ಎಂದಿದ್ದೆ, ಅದರಂತೆ ಅವರು ಮುಖ್ಯಮಂತ್ರಿ ಆಗಿದ್ದರು. ಕಳೆದ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಸ್ವಾಮೀಜಿಗಳು ಮನೆಮನೆಗೆ ಹೋಗಿ ಪ್ರಚಾರ ಮಾಡಿದರು. ಆದರೂ ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆದ್ದರು.

ಕರ್ನಾಟಕ ಬಿಡ್ರಿ, ದೆಹಲಿ ಕಡೆ ನೋಡ್ರಿ. ನಿಮಗೆ ರಾಜ್ಯ ರಾಜಕಾರಣಕ್ಕಿಂತ ರಾಷ್ಟ್ರ ರಾಜಕಾರಣದಲ್ಲಿ ಒಳ್ಳೆ ಭವಿಷ್ಯ ಇದೆ ಎಂದು ಸಿದ್ದರಾಮಯ್ಯ ಅವರಿಗೆ ಶ್ರೀಗಳು ಸಭೆಯಲ್ಲಿ ಕಿವಿಮಾತು ಹೇಳಿದರು.

ಈ ವೇಳೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆ ನೆರವೇರಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಎಲ್ಲಾ ವರ್ಗಗಳ ದಾರ್ಶನಿಕ ಜಯಂತಿಗಳನ್ನು ಆರಂಭಿಸಿದ್ದು ನಾನು. ಕೇವಲ ಒಂದು ಜಾತಿಗೆ ಸೀಮಿತವಾಗದೇ, ಕೇವಲ ಬಸವಾದಿ ಶರಣರ ವಚನಗಳನ್ನು ಕೇವಲ ಬಾಯಲ್ಲಿ ಹೇಳಿಕೊಂಡು ಸಾಮಾಜಿಕವಾಗಿ ಅದನ್ನು ಜಾರಿಗೆ ತರುವಲ್ಲಿ ಜನರು ವಿಫಲರಾಗಿದ್ದಾರೆ. ನನ್ನನ್ನು ಬೇರೆ ಜಾತಿಗಳ ವಿರೋಧಿ ಅಂತಾರೆ. ಆದರೆ ಬಸವಣ್ಣನವರ ಜಯಂತಿಯಂದು ನಾನು ಪ್ರಮಾಣವಚನ ಸ್ವೀಕರಿಸಿದ್ದೆ ಎಂದರು.

ಇವತ್ತೇನಾದರೂ ಅರಸೀಕೆರೆಗೆ ಎತ್ತಿನಹೊಳೆ ಯೋಜನೆ, ಕುಡಿಯಲು ಹೇಮಾವತಿ ನೀರಿನ ಯೋಜನೆ ಆಗಿದೆ ಎಂದರೆ ಅದು ನನ್ನ ನೇತೃತ್ವದ ಸರ್ಕಾರದ ಕೊಡುಗೆ. ಆದ್ರೆ ಅರಸೀಕೆರೆಗೆ ನೀರು ಬಂದಿದ್ದನ್ನು ಹೇಳಿಕೊಂಡು ಜೆಡಿಎಸ್​ನ ಶಿವಲಿಂಗೇಗೌಡ ಚುನಾವಣೆಯಲ್ಲಿ ಗೆಲ್ಲುವುದು ಎಂದು ಹಾಸ್ಯಾಸ್ಪದವಾಗಿ ನುಡಿದು ಇದರಲ್ಲಿ ಅವನ ಪಾತ್ರವೂ ಇದೆ ಎಂದು ಸಿದ್ದರಾಮಯ್ಯ ಹೇಳಿದ್ರು.

Intro:ಹಾಸನ : ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ಹೇಳಿದ್ದಾರೆ.

ಗಂಡಸಿ ಹೋಬಳಿಯ ಗಂಗೆ ಮಡುವಿನ ಗೊಲ್ಲರಹಳ್ಳಿ ಎಲ್ಲಿ ಕನಕಪೀಠ ಹಾಗೂ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಬಹಿರಂಗವಾಗಿ ಕೋಡಿಮಠ ಶ್ರೀಗಳು ಸಿದ್ದರಾಮಯ್ಯ ಅವರಿಗೆ ಶುಭದಿನ ಇದೆ ಎಂದರು.

ನಾನು ಹಿಂದೆ ಸಿದ್ದರಾಮಯ್ಯ ಅವರಿಗೆ ಭವಿಷ್ಯ ಹೇಳಿದ್ದೆ ಅಂಬಲಿ ಹಳಸಿತು ಕಂಬಳಿ ಹಾಸಿತು ಎಂದಿದೆ ಅದರಂತೆ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ಕಳೆದ ಚುನಾವಣೆಯಲ್ಲಿ ಅವರು ಸೋಲಿಸಲು ಸ್ವಾಮೀಜಿಗಳು ಮನೆಮನೆಗೆ ಹೋಗಿ ಪ್ರಚಾರ ಮಾಡಿದರು ಆದರೂ ಸಿದ್ದರಾಮಯ್ಯ ಸಿದ್ದರಾಮಯ್ಯ ಸ್ವಾಮೀಜಿಗಳು ಹೊಗಳಿದರು.

ರಾಜ್ಯ ರಾಜಕಾರಣಕ್ಕಿಂತ ರಾಷ್ಟ್ರರಾಜಕಾರಣದಲ್ಲಿ ಭವಿಷ್ಯ ಇದೆ ಎಂದು ತಿಳಿಸಿದ ಅವರು ಈ ಗಂಗೆ ಮಡುವಿನ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಆಗಲಿ ಎಂದು ತಿಳಿಸಿದರು.

ಬೈಟ್ 1: ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು, ಕೋಡಿಮಠ.

- ಅರಕೆರೆ ಮೋಹನಕುಮಾರ ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.