ETV Bharat / state

ಸ್ವಾತಂತ್ರದ ದಿನಗಳನ್ನು ನೆನಪಿಸುವ ಅರಸಿಕೆರೆಯ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ - ಅರಸಿಕೆರೆಯ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್

ಮೈಸೂರು-ಅರಸೀಕೆರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆಯಲ್ಲಿ, ಗಾಂಧೀಜಿಯವರ ಹೋರಾಟದ ದಿನಗಳನ್ನ ಚಿತ್ರ ಮತ್ತು ಮೂರ್ತಿಗಳ ಮೂಲಕ ನಿರ್ಮಿಸಲಾಗಿದೆ.

ಸ್ವಾತಂತ್ರದ ದಿನಗಳನ್ನು ನೆನಪಿಸುವ ಅರಸಿಕೆರೆಯ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್
author img

By

Published : Aug 15, 2019, 5:32 AM IST

ಹಾಸನ : ಜಿಲ್ಲೆಯ ಅರಸೀಕೆರೆಯಲ್ಲಿ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ ಇದೆ. ಇಲ್ಲಿ 1997ರ ಸ್ವಾಂತತ್ರ್ಯದ ಹೋರಾಟದ ಬದುಕು ಕಣ್ಣಿಗೆ ಕಟ್ಟುವಂತೆ ಕೆಲವೊಂದು ಶಿಲ್ಪಗಳನ್ನು ಕೆತ್ತಲಾಗಿದೆ. ಅಲ್ಲದೆ ಇಲ್ಲಿ ಮಕ್ಕಳ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಹಲವು ಕೆಲಸಗಳನ್ನು ಮಾಡಲಾಗಿದೆ.

ಮೈಸೂರು-ಅರಸೀಕೆರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆಯಲ್ಲಿ, ಗಾಂಧೀಜಿಯವರ ಹೋರಾಟದ ದಿನಗಳನ್ನ ಚಿತ್ರದ ಮೂಲಕ ಮತ್ತು ಮೂರ್ತಿಗಳ ಮೂಲಕ ನಿರ್ಮಿಸಲಾಗಿದೆ.

ಸ್ವಾತಂತ್ರದ ದಿನಗಳನ್ನು ನೆನಪಿಸುವ ಅರಸಿಕೆರೆಯ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್

ಇನ್ನು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮಗಾಂಧೀಜಿಯವರ ಅನುಯಾಯಿಗಳಲ್ಲಿ ಒಬ್ಬರಾದ ಹಾಸನದ ಮಾಜಿ ಸಚಿವೆ ದಿ.ಯಶೋಧರಮ್ಮ ದಾಸಪ್ಪರ ಪ್ರಯತ್ನದ ಫಲವಾಗಿ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆ 1945ರಲ್ಲಿ ಹುಟ್ಟಿಕೊಂಡಿತು. ಇದು 80 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿದೆ. ಕಸ್ತೂರಬಾ ಸಂಸ್ಥೆಗೆ ಸರ್ಕಾರ ನೀಡಿರುವ 85.21 ಎಕರೆ ಜಮೀನಿನಲ್ಲಿ ನೂರಾರು ತೆಂಗಿನ ಮರಗಳಿವೆ.

ಇಲ್ಲಿ ಮಹಿಳೆಯರಿಗೆ ಹೊಲಿಗೆ, ಕಸೂತಿ, ಉಪಕಸುಬು ಹಾಗೂ ಗುಡಿಕೈಗಾರಿಕಾ ಕಲಿಕೆಯ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಗೋ ಶಾಲೆಯನ್ನ ತೆರೆಯುವ ಮೂಲಕ ಮೂಕ ಪ್ರಾಣಿಕಗಳ ಸೇವೆ ಕೂಡಾ ಆರಂಭವಾಗಿದೆ. 1990 ರಿಂದ 2004ರ ತನಕ ಸರಕಾರದ ನಾನಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ನೌಕರರ ಅಧ್ಯಕ್ಷತೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಮಹಿಳೆಯರಿಗೆ ಇಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿತ್ತು.

Intro:ಹಾಸನ: ದೇಶದ ಜನರಿಗೆ ನಾಳೆ ಸ್ವಾತಂತ್ರ್ಯ ಬಂದು 73ನೇ ಸಂಭ್ರಮ ದಿನ. ಅಲ್ಲದೇ ದೇಶವೇ ಗೌರವಿಸುವಂತಹ, ದೇಶಕ್ಕೆ ಸ್ವಾತಂತ್ರ್ಯವನ್ನ ತಂದುಕೊಟ್ಟ ಮಹಾತ್ಮಗಾಂಧಿ ನಾಮಸ್ಮರಣೆ ಮಾಡುವಂತಹ ದಿನ. ಈ ಆಶ್ರಮದಲ್ಲಿ ಮಾತ್ರ ವರ್ಷ ಪೂರ್ತಿ ಗಾಂಧಿ ನಾಮಸ್ಮರಣೆ ನಡೆಯುತ್ತೆ. ಅದು ಎಲ್ಲಿ ಯಾವ ಊರು ಅಂತೀರಾ ನೀವೇ ನೋಡಿ...

ಗಾಂಧೀಜಿಯವರ ಕಾಲವಾದ ಬಳಿಕ ಅವರ ಚಿತಾಭಸ್ಮವನ್ನ ದೇಶದ ಹಲವೆಡೆಗೆ ನೀಡಲಾಯಿತು ಎನ್ನಲಾಗಿದೆ. ಅಂತಹ ಚಿತಭಸ್ಮದಿಂದ ಸ್ಥಾಪಿತವಾದ ಗಾಂಧಿ ಸ್ಮಾರಕಗಳು ದೇಶದ 15 ಕಡೆಗಳಲ್ಲಿ ಇವೆ ಎನ್ನಲಾಗಿವೆ. ಅದ್ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿಯೂ ಕೂಡಾ ಗಾಂಧಿಸ್ಮಾರಕವಿದೆ. ಚಿತಭಸ್ಮದೊಂದಿಗೆ ಸಮಾಧಿಯಿರುವ ಸ್ಮಾರಕಗಳಲ್ಲಿ ಇದು ಕೂಡಾ ಒಂದು.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕು ಎಂದ್ರೆ ಅದು ಮಿನಿ ಕಲ್ಪತರು ನಾಡು ಎಂದೆ ಬಿಂಬಿತವಾಗಿತ್ತು. ಆದ್ರೆ ಸದ್ಯ ಬರದ ನಾಡಾಗಿದೆ. ನಾವು ಹೇಳೋಕೆ ಹೊರಡಿರೋ ವಿಚಾರವೇಂದ್ರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬಗ್ಗೆ. ಗಾಂಧಿ ಕಾಲಾನಂತ್ರ ಅವರ ಚಿತಾಭಸ್ಮವನ್ನ ಕರ್ನಾಟಕದ ಅರಸೀಕೆರೆಗೂ ತರಲಾಯ್ತು. ಮತ್ತೊಂದನ್ನ ಮೈಸೂರು ಸಂಸ್ಥಾನದ ಅಂದಿನ ಮುಖ್ಯಮಂತ್ರಿಗಳಾಗಿದ್ದ, ಚಂಗಲರಾಯರೆಡ್ಡಿಯವರು ಶ್ರೀರಂಗಪಟ್ಟಣದ ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ಚಿತಾಭಸ್ಮವನ್ನ ವಿಸರ್ಜಿಸಿದ್ದಾರೆ.

ಚಿತಾಭಸ್ಮವಿರುವ ಕಡೆ ದೇಶಪ್ರೇಮ, ಭಕ್ತಿ ಪೂರ್ವಕ ನಮನ, ಗಾಂಧೀಜಿ ಗುಣಗಾನ ನಡೆಯುವುದು ಸಾಮಾನ್ಯ. ಅದೇ ರೀತಿ ಇಲ್ಲಿಯೂ ಕೂಡಾ ಪ್ರತಿನಿತ್ಯ ಗುಣಗಾನ ಮೇಳೈಸುತ್ತಿರುತ್ತದೆ. ಅರಸೀಕೆರೆಯಲ್ಲಿರುವ ಗಾಂಧಿ ಚಿತಾಭಸ್ಮ ಸಮಾಧಿಗೆ ಪ್ರತಿದಿನ ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ ಒಳಗೆ ಪ್ರವೇಶ ಮಾಡಿದ್ರೆ, 1997ರ ಸ್ವಾಂತತ್ರ್ಯದ ಹೋರಾಟದ ಬದುಕು ಕಣ್ಣಿಗೆ ಕಟ್ಟುವಂತೆ ಮಾಡುವುದಲ್ಲದೇ, ನೆನಪಿನಾಳದಲ್ಲಿ ಅಚ್ಚಳಿಯುವಂತೆ ಮಾಡುತ್ತೆ ಇಲ್ಲಿನ ವಾತಾವರಣ.

ಮೈಸೂರು-ಅರಸೀಕೆರೆ ರಾಜ್ಯ ಹೆದ್ದಾರಿಗೆ ಹೊಂದುಕೊಂಡಂತಿದೆ ಈ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆ. ಇಲ್ಲಿ ನಿರ್ಮಿತವಾಗಿರುವ ಗಾಂಧಿಜೀಯವರ ಹೋರಾಟದ ದಿನಗಳನ್ನ ನನೆಪಿಸುವ ಶಿಲ್ಪಕಲಾಕೃತಿಗಳು ರಸ್ತೆಯಲ್ಲಿ ಓಡಾಡುವ ಮಂದಿಯನ್ನ, ಪ್ರವಾಸಿಗರನ್ನ ತನ್ನತ್ತ ಸೂಚಿಗಲ್ಲಿನಂತೆ ಸೆಳೆಯುತ್ತದೆ. ರಸ್ತೆಯ ಮಾರ್ಗವಾಗಿ ಓಡಾಡುವ ಕೆಲ ವಾಹನಗಳ ಸವಾರರು ಒಂದು ನಿಮಿಷ ನಿಲ್ಲಿಸಿ ಸ್ಮಾರಕದ ಬಳಿ ಬಂದು ಕಣ್ತುಂಬಿಕೊಂಡು ಹೋಗುತ್ತಾರೆ. ಹೋರಾಟದ ಶಿಲ್ಪಕಲಾಕೃತಿಗಳ ನಡುವೆ ನಿಂತು ಕೆಲವರು ಸೇಲ್ಪಿ ತೆಗೆದುಕೊಂಡು ಭಾವಪರವಶರಾಗುತ್ತಾರೆ.

ಗ್ರಾಫೀಕ್ಸ್ : ಯಶೋಧರಮ್ಮನವರ ಶ್ರಮದಿಂದ ನಿರ್ಮಾಣವಾಯ್ತು ಕಸ್ತೂರಾ ಬಾ ಗಾಂಧಿ ಸ್ಮಾರಕ :

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾತ್ಮಗಾಂಧಿಜೀಯವರ ಅನುಯಾಯಿಯಾಯಿಗಳಲ್ಲಿ ಒಬ್ಬರು ಹಾಸನದ ಮಾಜಿ ಸಚಿವೆ ದಿ.ಯಶೋಧರಮ್ಮ ದಾಸಪ್ಪ. ಅವರ ಪ್ರಯತ್ನದ ಫಲವಾಗಿ ಈ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆ 1945ರಲ್ಲಿ ಹುಟ್ಟಿಕೊಂಡಿತು. ಆದ್ರೆ ಅದು ಪ್ರಾರಂಭವಾಗಿದ್ದು 1947ರಲ್ಲಿ. ಸ್ವತಃ ಗಾಂಧಿಜೀಯವರಿಂದಲೇ ಸ್ಥಾಪಿತವಾಯ್ತು ಅನ್ನೋದು ಮತ್ತೊಂದು ಹೆಗ್ಗಳಿಕೆ. ಅರಸೀಕೆರೆಯ ಹೊರವಲಯದ ರೈಲ್ವೆಗೇಟ್ ಸಮೀಪದಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪಿಸಲಾಗಿದೆ. ನಾತೂರಾಮ ಗೂಡ್ಸೆಯಿಂದ ಸಾವನ್ನಪ್ಪಿದ ಗಾಂಧಿಯವರ ಚಿತಭಸ್ಮವನ್ನ ಹಾಸನಕ್ಕೆ ತರಬೇಕೆಂದು ಶ್ರಮಿಸಿದವರಲ್ಲಿ ಯಶೋಧರಮ್ಮ ದಾಸಪ್ಪ ಒಬ್ಬರು.

ಗಾಂಧಿ ಕಾಲನಂತ್ರ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಅಂದ್ರೆ ಫೆ.12, 1948ರಂದು ಕರ್ನಾಟಕಕ್ಕೆ ಚಿತಾಭಸ್ಮವನ್ನ ತಂದು ಅರಸೀಕೆರೆಯೊಂದರಲ್ಲಿ ಸಮಾಧಿ ಮಾಡುವ ಮೂಲಕ ಸ್ಮಾರಕ ನಿರ್ಮಾಣ ಮಾಡಲಾಯ್ತು. ಆ ಮೂಲಕ ಗಾಂಧೀಜಿ ಗ್ರಾಮ ಸ್ವರಾಜ್ಯ ಕಲ್ಪನೆಯ ಸಾಕಾರಕ್ಕಾಗಿಯೇ ಜನ್ಮ ತಾಳಿದ ಈ ಟ್ರಸ್ಟ್, ಹಲವು ವರ್ಷಗಳ ಕಾಲ ಮಹಿಳೆಯರಿಗೆ ಹೊಲಿಗೆ, ಕಸೂತಿ, ಉಪಕಸುಬು ಹಾಗೂ ಗುಡಿಕೈಗಾರಿಕಾ ಕಲಿಕೆಯ ತರಬೇತಿ ನೀಡುವ ಕೇಂದ್ರವಾಗಿತ್ತು. ಇಂದು ಇದ್ರ ಜೊತೆಗೆ ಗೋ-ಶಾಲೆಯನ್ನ ತೆರೆಯುವ ಮೂಲಕ ಮೂಕ ಪ್ರಾಣಿಕಗಳ ಸೇವೆ ಕೂಡಾ ಆರಂಭವಾಗಿದೆ.

ಬೈಟ್: ಮೇರಿ, ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆ ಮೇಲ್ಚಿಚಾರಕಿ

1990 ರಿಂದ 2004ರ ತನಕ ಸರಕಾರದ ನಾನಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ನೌಕರರ ಅಧ್ಯಕ್ಷತೆಯೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಮಹಿಳೆಯರಿಗೆ ಇಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿತ್ತು. ಆದರೆ ಇದೀಗ ಅಂತಹ ಚಟುವಟಿಕೆಗಳು ನಿಂತು ದಶಕಗಳೇ ಕಳೆದಿವೆ. ಈ ಕೇಂದ್ರದ ಮೇಲೆ ನಿಯಂತ್ರಣ ಹೊಂದಿರುವ ಮೂಲ ಟ್ರಸ್ಟ್ ಮಧ್ಯಪ್ರದೇಶದ ಇಂದೋರಿನಲ್ಲಿದೆ. ಆ ಟ್ರಸ್ಟ್ ಮೂಲಕವೇ ನೇಮಕಗೊಳ್ಳುವ ಮಹಿಳಾ ಪ್ರತಿನಿಧಿಗಳು ಅರಸೀಕೆರೆ ಕಸ್ತೂರ ಬಾ ಸಂಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾ ಬಂದಿದ್ದಾರೆ. ಕಳೆದ 10 ವರ್ಷಗಳಿಂದ ಮೇರಿ ಎಂಬುವರು ಈ ಸಂಸ್ಥೆಯನ್ನ ನೋಡಿಕೊಳ್ಳುತ್ತಿದ್ದಾರೆ. ಕಸ್ತೂರಬಾ ಸಂಸ್ಥೆಗೆ ಸರ್ಕಾರ ನೀಡಿರುವ 85.21 ಎಕರೆ ಜಮೀನಿನಲ್ಲಿ ನೂರಾರು ತೆಂಗಿನ ಮರಗಳಿವೆ. ಬರದ ನಡುವೆ ಈಗಾಗಲೇ ಆ ಮರಗಳು ನೆಲಕಚ್ಚಲು ಮುಂದಾಗಿವೆ. ಮಳೆಯನ್ನ ನಂಬಿ ಬೇಸಾಯ ಮಾಡಿ ಅದರಿಂದ ಬರುವ ಆದಾಯದಲ್ಲೇ ಸದ್ಯ ಈ ಶಿಬಿರ ನಡೆಯುತ್ತಿದೆ.

ಬೈಟ್: ಮೇರಿ, ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆ ಮೇಲ್ಚಿಚಾರಕಿ

ಪ್ರತಿನಿತ್ಯ ಇಲ್ಲಿ ಗಾಂಧಿ ಸ್ಮರಣೆ ನಡೆಯುತ್ತೆ. ಅದ್ರ ಜೊತೆಗೆ ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರಮುಖ ದಿನಗಳಂದು ಗಾಂಧಿ ಸ್ಮಾರಕಕ್ಕೆ ವಿಶೇಷ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಾ ಬಂದಿದೆ. ಸ್ಥಳೀಯ ಜನಪ್ರತಿನಿಧಿಗಳನ್ನ ಹೊರತುಪಡಿಸಿದ್ರೆ, ರಾಜ್ಯದ, ರಾಷ್ಟ್ರದ ನಾಯಕರುಗಳು ಇತ್ತ ಬರುವ ಮನಸ್ಸು ಮಾಡಿಲ್ಲ. ಇನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಗಾಂಧಿ ಪಾರಂಪರಿಕ ಸ್ಥಳಗಳ ಪ್ರಚಾರ ಯೋಜನೆಯಡಿ ಗಾಂಧಿ ಚಿತಾಭಸ್ಮ ಸ್ಮಾರಕ ಸೇರಿದಂತೆ ದೇಶಾದ್ಯಂತ ಅವರು ಭೇಟಿ ನೀಡಿದ ಎರಡು ಸಾವಿರಕ್ಕೂ ಹೆಚ್ಚು ಸ್ಥಳಗಳನ್ನು ರಕ್ಷಿಸುವುದಾಗಿ ಹಿಂದೆಯೇ ಪ್ರಕಟಣೆ ಹೊರಡಿಸಿತ್ತು. ಪ್ರಕಟಣೆ-ಪ್ರಕಟಣೆಗಷ್ಟೆ ಸೀಮಿತವಾಗಿ ಭರವಸೆಯಾಗಿಯೇ ಉಳಿದಿದೆ.

ಒಟ್ಟಾರೆ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ನಮ್ಮ ಗಾಂಧಿ ತಾತನನ್ನು ಗೂಡ್ಸೆ ಎಂಬ ದೇಶದ್ರೋಹಿ ಪ್ರಾರ್ಥನೆಗೆ ತೆರಳುವ ಸಂಧರ್ಭದಲ್ಲಿ ಗುಂಡಿಕ್ಕಿ ಕೊಂದ. ಆದ್ರೆ ಇವತ್ತು ಗಾಂಧಿವಾದಿಗಳು ಎಂದೆನಿಸಿಕೊಂಡ ಕೆಲವರು ಅವರ ತತ್ವ, ಚಿಂತನೆಗಳನ್ನು ಕೊಲ್ಲುತ್ತಿದ್ದಾರೆ. ಸರ್ಕಾರ ಈಗಾಲಾದ್ರು ಎಚ್ಚೆತ್ತುಕೊಂಡು ಶಾಶ್ವತವಾಗಿ ಸ್ಮಾರಕಗಳನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ಕೇವಲ ಸ್ವಾತಂತ್ರ್ಯ ದಿನ, ಗಾಂಧಿ ಪುಣ್ಯತಿಥಿ, ಗಾಂಧಿ ಜಯಂತಿಯಂದು ಕ್ವಿಟ್ ಇಂಡಿಯಾ ಚಳುವಳಿ ನಾಟಕ ಮಾಡಿಸುವ ಮೂಲಕ ನಾಟಕ ಮಾಡುವ ಬದಲು ಇಂತಹ ಸ್ಮಾರಕಗಳನ್ನ ರಕ್ಷಿಸುವ ಕಾರ್ಯ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ.

•         ಸುನೀಲ್ ಕುಂಭೇನಹಳ್ಳಿ, ಈ ಟಿವಿ ನ್ಯೂಸ್, ಹಾಸನ.

Body:0

Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.