ETV Bharat / state

ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ಕರುನಾಡ ಕುಡಿ - ವಿಜ್ಞಾನಿ ಮಹದೇಶ ಪ್ರಸಾದ್

ಜರ್ಮನಿಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದ ಯುವಕ ಕೊರೊನಾ ಸೋಂಕಿಗೆ ಔಷಧಿ ಕಂಡು ಹಿಡಿಯುವ ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

Karnataka scientist in 'The European Task Force for Corona virus'
ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೋನ ವೈರಸ್ ತಂಡದಲ್ಲಿ ಕರುನಾಡಿನ ಕುಡಿ
author img

By

Published : Mar 16, 2020, 2:49 PM IST

Updated : Mar 16, 2020, 3:23 PM IST

ಹಾಸನ: ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿಯುವ ಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹಾಸನ ಮೂಲದ ವಿಜ್ಞಾನಿಯೋರ್ವರು ಔಷಧಿ ತಯಾರಿಸುತ್ತಿರುವ ವಿಜ್ಞಾನಿಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ಮೂಲದ ವಿಜ್ಞಾನಿ ಮಹದೇಶ ಪ್ರಸಾದ್ ಜರ್ಮನಿಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುರೋಪಿಯನ್ ಟಾಸ್ಕ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲಿ ನಮ್ಮ ಕರುನಾಡಿನ ಯುವಕ ಮಹದೇಶ್ ಪ್ರಸಾದ್ ಸೇರಿರುವುದು ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

ಮಹದೇಶ ಪ್ರಸಾದ್ ಕಳೆದ ಒಂದು ವರ್ಷದಿಂದ ಸಂಶೋಧನೆ ಸಲುವಾಗಿ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ. ಇದೀಗ ಯುರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೊನಾ ವ್ಯಾಕ್ಸಿನ್ ಕಂಡು ಹಿಡಿಯಲು ರಚನೆಯಾಗಿರುವ ಹತ್ತು ತಂಡಗಳಲ್ಲಿ ಮಹದೇಶ ಸ್ಥಾನ ಪಡೆದಿದ್ದಕ್ಕೆ ಹಾಸನ ಜಿಲ್ಲೆಯ ಜನರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

Last Updated : Mar 16, 2020, 3:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.