ETV Bharat / state

ಪಠ್ಯಪುಸ್ತಕಗಳನ್ನು ಕನ್ನಡೀಕರಣ ಮಾಡಿ.. ಕರ್ನಾಟಕ ನವನಿರ್ಮಾಣ ಸೇನೆ ಆಗ್ರಹ

​ರಾಜ ಮನೆತನಗಳ ಇತಿಹಾಸ ನೋಡುವುದಾದ್ರೆ ನಮ್ಮ ನಾಡಿನ ಮಕ್ಕಳಿಗೆ ನಮ್ಮ ನಾಡಿನ ರಾಜ ಮನೆತನಗಳ ಇತಿಹಾಸವೇ ಗೊತ್ತಿಲ್ಲ. ಪಠ್ಯಪುಸ್ತಕಗಳನ್ನು ಕನ್ನಡೀಕರಣ ಮಾಡಬೇಕೆಂದು ಕರ್ನಾಟಕ ನವನಿರ್ಮಾಣ ಸೇನೆ ಒತ್ತಾಯಿಸಿದೆ..

author img

By

Published : Jul 4, 2020, 9:00 PM IST

sdd
ಕರ್ನಾಟಕ ನವನಿರ್ಮಾಣ ಸೇನೆ

ಹಾಸನ : ಪಠ್ಯಪುಸ್ತಕಗಳನ್ನು ಕನ್ನಡೀಕರಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆಯಿಂದ ಜಿಲ್ಲಾಧಿಕಾರಿಗಳಿ​ಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ನವನಿರ್ಮಾಣ ಸೇನೆ

ಕರ್ನಾಟಕ ಏಕೀಕರಣವಾಗಿ 75 ವರ್ಷಗಳು ಕಳೆಯುತ್ತಾ ಬಂದರೂ ರಾಜ್ಯದ ಇತಿಹಾಸ ಪಠ್ಯಪುಸ್ತಕಗಳು ಕನ್ನಡೀಕರಣವಾಗಿಲ್ಲ. ಸರ್ಕಾರವು ನಾಡ ದ್ರೋಹ ಪಠ್ಯಪುಸ್ತಕಗಳ ರಚನೆ ಮಾಡಿ ಕರ್ನಾಟಕದ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅಧಿಕಾರಕ್ಕೆ ಬರುವ ಸರ್ಕಾರಗಳು ನಿಮಗೆ ಬೇಕಾದ ಹಾಗೆ ಪಠ್ಯಪುಸ್ತಕಗಳ ಬದಲಾವಣೆ ಮಾಡಿಕೊಂಡು ಅವರ ಪಕ್ಷದ ಸಿದ್ಧಾಂತ ಒಪ್ಪುವ ವ್ಯಕ್ತಿಗಳ ಹೆಸರು ಪಠ್ಯಪುಸ್ತಕಗಳಲ್ಲಿ ಸೇರಿಸುವ ವ್ಯವಸ್ಥಿತ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

8ನೇ ತರಗತಿ ಇತಿಹಾಸ ಪುಸ್ತಕದಲ್ಲಿ ಮಹಾರಾಷ್ಟ್ರ ರಾಜ್ಯದ ಉದಯ ಎನ್ನುವ ಹೆಸರು ಪಠ್ಯವಾಗಿದೆ. ಆದರೆ, ಕರ್ನಾಟಕದ ಮಕ್ಕಳಿಗೆ ರಾಜ್ಯದ ಉದಯದ ಇತಿಹಾಸ ತಿಳಿದಿಲ್ಲ. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರು ರಾಜಕೀಯ ಪಕ್ಷಗಳ ಏಜೆಂಟರ್ ರೀತಿ ಕೆಲಸ ಮಾಡುತ್ತಿರುವುದು ನಿಜಕ್ಕೂ ರ್ದುದೈವ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.