ETV Bharat / state

ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯ: ಶಾಸಕ ಲಿಂಗೇಶ್ - ಹಾಸನ ನಗರಾಭಿವೃದ್ಧಿ ಕೋಶ

ಪ್ರಧಾನ ಮಂತ್ರಿ ಅವಾಸ ಯೋಜನೆ ಅಂಗೀಕಾರ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸನ ಶಾಸಕ ಕೆ.ಎಸ್. ಲಿಂಗೇಶ್, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯವಾದದ್ದು ಎಂದರು.

ಶಾಸಕ ಕೆ.ಎಸ್. ಲಿಂಗೇಶ್
author img

By

Published : Oct 3, 2019, 9:51 AM IST

ಹಾಸನ: ಜಿಲ್ಲೆಯ ಬೇಲೂರು ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭಾ ಕಾರ್ಯಾಲಯ ಹಾಗೂ ಹಾಸನ ನಗರಾಭಿವೃದ್ಧಿ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಂಗೀಕಾರ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಧಾನ ಮಂತ್ರಿ ಅವಾಸ ಯೋಜನೆ ಅಂಗೀಕಾರ ಆಂದೋಲನ ಕಾರ್ಯಕ್ರಮ

ಈ ವೇಳೆ ಮಾತನಾಡಿದ ಶಾಸಕ ಕೆ.ಎಸ್. ಲಿಂಗೇಶ್, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯವಾದದ್ದು. ಈಗಾಗಲೇ ಪುರಸಭೆ ವತಿಯಿಂದ 80 ಜನರು ಆಯ್ಕೆಯಾಗಿ ಸಾಮಾನ್ಯ ವರ್ಗದ ಕುಟುಂಬಗಳಿಗೆ 2 ಲಕ್ಷದ 20 ಸಾವಿರ ಹಾಗೂ ಅಂಬೇಡ್ಕರ್ ಯೋಜನೆಯಡಿ 3 ಲಕ್ಷದ 30 ಸಾವಿರ ನೀಡಿ ಮನೆ ಕಟ್ಟಿಕೊಡಲಾಗಿದೆ. ಕೇವಲ ಮನೆ ನಿರ್ಮಾಣ ಮಾತ್ರವಲ್ಲದೆ ಮನೆಗೆ ಬೇಕಾದ ಗ್ಯಾಸ್ ಲೈಟ್​​ಗಳನ್ನು ಕೂಡ ನೀಡಲಾಗುತ್ತಿದೆ ಎಂದರು.

ಬಳಿಕ ಫಲಾನುಭವಿಗಳಿಗೆ ಕಸ ಸಂಗ್ರಹಣೆಗೆ ಡಸ್ಟ್ ಬಿನ್ ವಿತರಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಟೇಶ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಮುಖ್ಯಾಧಿಕಾರಿ ಎಸ್ ಎಸ್ ಮಂಜುನಾಥ್, ಯೋಜನಾಧಿಕಾರಿ ಶಶಿಕಲಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Intro:ಹಾಸನ : ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ನೆಲ-ಜಲ ಕಾಪಾಡುವಲ್ಲಿ ಎಲ್ಲರ ಜವಾಬ್ದಾರಿ ಅಗತ್ಯವಾದದ್ದು ಎಂದು ಶಾಸಕ ಕೆ.ಎಸ್. ಲಿಂಗೇಶ್ ಹೇಳಿದರು
ಬೇಲೂರು ಪಟ್ಟಣದ ಪುರಸಭಾ ಆವರಣದಲ್ಲಿ ಪುರಸಭಾ ಕಾರ್ಯಾಲಯ ಹಾಗೂ ನಗರಾಭಿವೃದ್ಧಿ ಕೋಶ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಪ್ರಧಾನಮಂತ್ರಿ ಅವಾಸ ಯೋಜನೆ ಅಂಗೀಕಾರ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ ಈಗಾಗಲೇ ಪುರಸಭೆ ವತಿಯಿಂದ ೮೦ ಜನರು ಆಯ್ಕೆಯಾಗಿ ಸಾಮಾನ್ಯ ವರ್ಗದ ಕುಟುಂಬಗಳಿಗೆ ಎರಡು ಲಕ್ಷದ ಎಪ್ಪತ್ತು ಸಾವಿರ ಹಾಗೂ ಅಂಬೇಡ್ಕರ್ ಯೋಜನೆಯಡಿ ಮೂರು ಲಕ್ಷದ ಮೂವತ್ತು ಸಾವಿರ ನೀಡಿ ಮನೆ ಕಟ್ಟಿಕೊಡಲಾಗಿದೆ ಜೊತೆಗೆ ಕೇವಲ ಮನೆ ನಿರ್ಮಾಣ ಮಾತ್ರವಲ್ಲದೆ ಮನೆಗೆ ಬೇಕಾದ ಗ್ಯಾಸ್ ಲೈಟ್ ಗಳನ್ನು ಕೂಡ ನೀಡಲಾಗುತ್ತಿದೆ ಎಂದರು.
ಬೈಟ್-೧ : ಲಿಂಗೇಶ್, ಶಾಸಕ.

ನಂತರ ಫಲಾನುಭವಿಗಳಿಗೆ ಕಸ ಸಂಗ್ರಹಣೆಗೆ ಡಸ್ಟ್ ಬಿನ್ ವಿತರಿಸಿದರು. ಕಾರ್ಯಕ್ರಮದಲ್ಲಿ ತಹಸಿಲ್ದಾರ್ ನಟೇಶ್ ತಾಲೂಕು ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಮುಖ್ಯಾಧಿಕಾರಿ ಎಸ್ ಎಸ್ ಮಂಜುನಾಥ್, ಯೋಜನಾಧಿಕಾರಿ ಶಶಿಕಲಾ , ಸಿಬ್ಬಂದಿಗಳಾದ ಜಯಪ್ರಕಾಶ್, ರೂಪ ,ಮಧುಸೂದನ್ ,ಹರೀಶ್ ಇನ್ನಿತರರು ಹಾಜರಿದ್ರು.
Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.