ETV Bharat / state

₹16 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ

author img

By

Published : Mar 14, 2021, 10:36 PM IST

ಕ್ಷೇತ್ರದ ಶಾಸಕರು ಈಗಾಗಲೇ ಹಿಂದಿನ ಸರಕಾರವಿದ್ದಾಗ ಬಹುದೊಡ್ಡ ಮೊತ್ತದ ನೀರಾವರಿ ಯೋಜನೆಯನ್ನು ತಾಲೂಕಿಗೆ ತಂದು ಜನರಿಗೆ ನೀರನ್ನು ಒದಗಿಸಿದ್ದಾರೆ. ಅರಸೀಕೆರೆ ತಾಲ್ಲೂಕು ನೀರಾವರಿ ಕ್ಷೇತ್ರ ಒಂದನ್ನು ಬಿಟ್ಟು ಇನ್ನುಳಿದ ವಿಚಾರದಲ್ಲಿ ಮುಂದೆ ಸಾಗುತ್ತಿದೆ..

inauguration-of-indira-gandhi-residential-school-built-at-a-cost-of-rs-16-crore
ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ

ಹಾಸನ/ಅರಸೀಕೆರೆ : ಪೋಷಕರು ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ನೋಡುವುದಕ್ಕಿಂತ ವಿದ್ಯೆ ಕೊಟ್ಟು ನೋಡಿದಾಗ ದೇಶದ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದರು.

ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಮೇನಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡವನ್ನು ಉದ್ಘಾಟನೆ ಮಾಡಿ ಬಳಿಕ ಅವರು ಮಾತನಾಡಿದರು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಬೇಕು.

ಪೋಷಕರು ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ನೋಡುವುದಕ್ಕಿಂತ ವಿದ್ಯೆ ಕೊಟ್ಟು ನೋಡಿದಾಗ ದೇಶದ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಅರಸೀಕೆರೆ ತಾಲೂಕಿಗೆ ಇನ್ನು ಮೂರು ವಸತಿ ಶಾಲೆ ನೀಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

₹16 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ

ಯಡಿಯೂರಪ್ಪನವರು ಸಿಎಂ ಆದ ಬಳಿಕ ನಮ್ಮ ಸರ್ಕಾರ ಸಾಕಷ್ಟು ಸಂಕಷ್ಟವನ್ನು ಎದುರಿಸಿದೆ. ಕೊರೊನಾ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿ ವಿಚಾರದಲ್ಲಿ ಸ್ವಲ್ಪ ಹಿಂದುಳಿದಿದ್ದೇವೆ. ಆದರೂ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಉತ್ತಮ ಚಿಂತನೆ ಮಾಡಿ ಅವರಿಗೆ ಬೇಕಾದಂತಹ ಮೂಲಸೌಕರ್ಯ ಸೇರಿ ಗುಣಮಟ್ಟದ ಕಟ್ಟಡಗಳನ್ನು ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾಗಿದೆ ಎಂದರು.

ಸುಮಾರು ₹16 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇವತ್ತು ನಮ್ಮ ಸರ್ಕಾರ ಇಂತಹ ಬೃಹತ್ ಕಟ್ಟಡಗಳ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ ಎಂದರು.

ಕ್ಷೇತ್ರದ ಶಾಸಕರು ಈಗಾಗಲೇ ಹಿಂದಿನ ಸರಕಾರವಿದ್ದಾಗ ಬಹುದೊಡ್ಡ ಮೊತ್ತದ ನೀರಾವರಿ ಯೋಜನೆಯನ್ನು ತಾಲೂಕಿಗೆ ತಂದು ಜನರಿಗೆ ನೀರನ್ನು ಒದಗಿಸಿದ್ದಾರೆ. ಅರಸೀಕೆರೆ ತಾಲ್ಲೂಕು ನೀರಾವರಿ ಕ್ಷೇತ್ರ ಒಂದನ್ನು ಬಿಟ್ಟು ಇನ್ನುಳಿದ ವಿಚಾರದಲ್ಲಿ ಮುಂದೆ ಸಾಗುತ್ತಿದೆ.

ಈಗ ಎತ್ತಿನಹೊಳೆ ಕೆಲವೇ ತಿಂಗಳಲ್ಲಿ ಮೊದಲ ಹಂತ ಪೂರ್ಣಗೊಳ್ಳುವ ಸಾಧ್ಯತೆಗಳಿದ್ದು ಸಕಲೇಶಪುರದಿಂದ ನೀರನ್ನು ಮೇಲಕ್ಕೆತ್ತಿದರೆ ಮೊದಲು ಬೇಲೂರಿಗೆ ಅರಸೀಕೆರೆಗೆ ನೀಡುವಂತಹ ಕೆಲಸ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಸೌಧದ ಮಹಡಿಗಳನ್ನು ಸುತ್ತಿ ನನ್ನ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ

ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ವಿರೋಧ ಪಕ್ಷದಿಂದಲೇ ನಾನು ಎಲ್ಲರ ಮನೆಗೆ ಹೋಗಿದ್ದೇನೆ. ನನ್ನ ಕ್ಷೇತ್ರಕ್ಕೆ ಬೇಕಾದಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಎಲ್ಲಾ ಮಂತ್ರಿಮಹೋದಯರುಗಳ ಬಳಿ ಬೇಡಿ ನಾನು ನನ್ನ ಕ್ಷೇತ್ರವನ್ನು ಅಭಿವೃದ್ದಿ ಮಾಡಿದ್ದೇನೆ. ಆದ್ರೆ ಕಣಕಟ್ಟೆ ಮತ್ತು ಬಾಣವಾರ ಹೋಬಳಿಯ 28 ಕೆರೆಗಳಿಗೆ ಭದ್ರ ಮೇಲ್ದಂಡೆ ನೀರು ಕೊಡಬೇಕಿತ್ತು ಅದನ್ನು ಚಿಕ್ಕಮಗಳೂರಿಗೆ ಕೊಟ್ಟಿದ್ದಾರೆ. ದಯಮಾಡಿ ಅವರಿಗೂ ಕೊಡಿ. ನಾನು ಬೇಡ ಎನ್ನುವುದಿಲ್ಲ. ನಮಗೆ ಅನ್ಯಾಯ ಮಾಡದಂತೆ ನನಗೂ ಭದ್ರ ಮೇಲ್ದಂಡೆ ನೀರು ಕೊಡಿ ಎಂದು ಮನವಿ ಮಾಡಿದ ಶಾಸಕ, ನೀರು ಕೊಡದಿದ್ದರೇ ವಿರೋದಿ ಪಕ್ಷದ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

ವಸತಿ ಶಾಲೆ ಮೈಸೂರಿನ ವಿಶ್ವವಿದ್ಯಾಲಯ ನೋಡಿದಂತೆ ಕಾಣುತ್ತಿದೆ

ನನ್ನ ಕ್ಷೇತ್ರದಲ್ಲಿ ಈಗಾಗಲೇ ಏಳು ವಸತಿ ಶಾಲೆ ನಿರ್ಮಾಣ ಮಾಡಿದ್ದು 5000ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದರೆ ಇಂದು ಪ್ರತಿ ವಿದ್ಯಾರ್ಥಿಗೆ ಉತ್ತಮ ಗುಣಮಟ್ಟದ ಸೌಕರ್ಯಗಳೊಂದಿಗೆ ಕಟ್ಟಡದ ನಿರ್ಮಾಣ ಕೂಡ ಸರ್ಕಾರ ಮಾಡುತ್ತಿದೆ. ಇಂದು ಉದ್ಘಾಟನೆಯಾದ ಅಂತಹ ವಸತಿ ಶಾಲೆ ನೋಡಿದ್ರೆ ಮೈಸೂರಿನ ವಿಶ್ವವಿದ್ಯಾಲಯ ನೋಡಿದಂತೆ ಕಾಣುತ್ತಿದೆ ಎಂದು ಸರ್ಕಾರದ ಸಾಧನೆಯನ್ನ ಕೊಂಡಾಡಿದರು.

ಏಕಲವ್ಯ ಶಾಲೆ ತೆರೆಯಲು 20 ಎಕರೆ ಭೂಮಿ ಮೀಸಲು

ಪರಿಶಿಷ್ಟ ಪಂಗಡಕ್ಕೆ ಈಗಾಗಲೇ ಏಕಲವ್ಯ ಶಾಲೆ ತೆರೆಯಲು 20 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ ಆದರೆ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಏಕಲವ್ಯ ಶಾಲೆ ಸಿಗುವುದು ಬಹಳ ಕಷ್ಟ ವಾಜಪೇಯಿ ವಸತಿ ಶಾಲೆ ಮಂಜೂರು ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು.

ಶ್ರೀರಾಮುಲುಗೆ ಮುಂದಿನ ದಿನದಲ್ಲಿಯೂ ಭವಿಷ್ಯವಿದೆ

ಶ್ರೀರಾಮುಲು ಆರೋಗ್ಯ ಮಂತ್ರಿಯಾಗಿ ಸಾಕಷ್ಟು ನಿರ್ವಹಣೆ ಮಾಡಿದ್ದಾರೆ. ತಾಳ್ಮೆ ಎಂಬುದು ಇದ್ದರೇ ಅದು ಶ್ರೀರಾಮುಲುಗಿದೆ. ಶ್ರೀರಾಮುಲುಗೆ ಮುಂದಿನ ದಿನದಲ್ಲಿಯೂ ಭವಿಷ್ಯವಿದೆ. ಮುಂದೆಯೂ ಅವರು ಹೀಗೆ ಇರಲಿ. ಎಂದು ಹಾಡಿ ಹೊಗಳಿದ ಶಾಸಕ ಶಿವಲಿಂಗೇಗೌಡ, ಈ ಭಾಗದಲ್ಲಿ ಈಗ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ ಗುಡ್ಡಗಾಡು ಪ್ರದೇಶದಲ್ಲಿರುವ ವಸತಿ ನಿಲಯಗಳಿಗೆ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ನವರಿಗೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.