ETV Bharat / state

ಜನ ಮೋದಿ ಆಡಳಿತದತ್ತ ನೋಡ್ತಿದ್ದರೆ, ಕಾಂಗ್ರೆಸ್​ ಅಧಿಕಾರಕ್ಕೇರುವ ಭ್ರಮೆಯಲ್ಲಿದೆ : ಶೋಭಾ ಕರಂದ್ಲಾಜೆ - ಜನತೆ ಮೋದಿ ಆಡಳಿತ ನೋಡುತ್ತಿದ್ದರೆ

ಹಾಸನ ತಾಲೂಕಿನ ಕಾರೆಕೆರೆ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ್​ ಭಾಗವಹಿಸಿದರು.

Shobha byte
ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಿಲಯದ ಉದ್ಘಾಟನೆ
author img

By

Published : Jul 4, 2022, 5:45 PM IST

ಹಾಸನ : ಕಾಂಗ್ರೆಸ್​ ಸಮೀಕ್ಷೆಯಲ್ಲಿ ಮುಂದಿನ ಚುನಾವನೆಯಲ್ಲಿ ಗೆಲ್ಲುವ ಭರವಸೆ ಇದೆ ಎಂಬ ವಿಚಾರಕ್ಕೆ, ಪೆನ್ನು ಪೇಪರ್ ಎರಡು ಕೂಡ ಅವರದ್ದೇ ಹೀಗಾಗಿ ಅವರಿಗೆ ಎಷ್ಟು ಬೇಕೋ ಅಷ್ಟು ಬರೆದುಕೊಳ್ಳುತ್ತಾರೆ. ಅವರ ಪಕ್ಷದಲ್ಲೇ ಒಡಕಿದೆ. ಕೆಲವರು 125, 150 ಎಂದು ಅವರವರ ಇಷ್ಟದಂತೆ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಲೂಕಿನ ಕಾರೆಕೆರೆ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಸಚಿವ ಬಿಸಿ ಪಾಟೀಲ್​ ಭಾಗವಹಿಸಿದರು.

ಪೆನ್ನು ಪೇಪರ್ ಎರಡು ಕೂಡ ಅವರದ್ದೇ ಹೀಗಾಗಿ ಅವರಿಗೆ ಎಷ್ಟು ಬೇಕೋ ಅಷ್ಟು ಬರೆದುಕೊಳ್ಳುತ್ತಾರೆ

ಉದ್ಘಾಟನೆಯ ನಂತರ ಮಾದ್ಯಮಗಳೊಂದಿದೆ ಮಾತನಾಡಿದ ಕೇಂದ್ರ ಸಚಿವೆ, ದೇಶದ ಜನತೆ ಮೋದಿಯ ಆಡಳಿತದತ್ತ ನೋಡುತ್ತಿದ್ದಾರೆ. ಕೋವಿಡ್​ ಸಂಕಷ್ಟದಲ್ಲಿ ಅವರ ಆಡಳಿತ ಮತ್ತು ಎಂಟು ವರ್ಷದ ಸಾಧನೆ ಗುರುತಿಸಿದ್ದಾರೆ. ಕಾಂಗ್ರೆಸ್​ ಭ್ರಮೆಯಲ್ಲಿದೆ. ಅವರ ನಡುವೆಯೇ ಒಡಕಿದೆ. ಮುಂದಿನ ಬಾರಿಯೂ ಬಿಜೆಪಿ ಬರುವುದರಲ್ಲಿ ಅನುಮಾನವಿಲ್ಲ ಎಂದರು.

ಮುಖ್ಯಮಂತ್ರಿಗಳ ಪರಮಾಧಿಕಾರ: ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಬಿ ಸಿ ಪಾಟೀಲ್ ಮಾತನಾಡಿ, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಸಂಪುಟ ವಿಸ್ತರಣೆ ಮಾಡುವ ಬಗ್ಗೆ ನಾನು ಮಾತನಾಡುವುದು ಸಮಂಜಸವಲ್ಲ. ಮುಖ್ಯಮಂತ್ರಿಗಳು ಸರಿಯಾದ ಸಮಯದಲ್ಲಿ ಇದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ

ಸಂದರ್ಭ ಬಂದಾಗ ವಿಭಾಗ ಆಗಬಹುದು: ಉಮೇಶ್ ಕತ್ತಿಯವರ ಕರ್ನಾಟಕ ವಿಭಜನೆ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಉಮೇಶ್ ಕತ್ತಿ ಅವರ ಹೇಳಿಕೆಗೆ ಎಲ್ಲರೂ ಪ್ರತಿಕ್ರಿಯೆ ಕೊಡಬೇಕು, ಮನ್ನಣೆ ಕೊಡಬೇಕು ಎಂದೇನೂ ಇಲ್ಲ. ಸಮಯ ಸಂದರ್ಭ ಬಂದಾಗ ಏನು ಬೇಕು ಅದು ಆಗುತ್ತದೆ. ಕಾಲಾಯ ತಸ್ಮೈ ನಮಃ ಎಂಬ ಮಾತಿದೆ. ಕೆಲವು ಆಗುವುದಿಲ್ಲ ಎಂದು ನಾನು ಹೇಳುವುದಿಲ್ಲ ಆದರೆ, ಅವರ ಹೇಳಿಕೆ ಈಗ ಪ್ರಸ್ತುತ ಅಲ್ಲ ಎಂದರು.

ಅವರ ಸಮೀಕ್ಷೆ ಅವರ ಅಂಕಿ ಅಂಶ: ಕಾಂಗ್ರೆಸ್​ನವರೇ ಸರ್ವೆ ಮಾಡಿಕೊಂಡು 120 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಆದರೆ, ಜನರ ತೀರ್ಮಾನದ ಮುಂದೆ ಎಲ್ಲಾ ಸರ್ವೆಗಳು ಶೂನ್ಯ. ಆದರೆ, ನಮ್ಮ ಬಿಜೆಪಿ ಸರ್ವೇ ಪ್ರಕಾರ ನಾವು 150ಕ್ಕೂ ಹೆಚ್ಚು ಸ್ಥಾನ ಪಡೆಯುತ್ತೇವೆ. ಮತ್ತೆ ಆಡಳಿತಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಿನ್ನಮತ: ಸಿದ್ದರಾಮಯ್ಯ ಬಣ ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡುತ್ತಿದೆ. ಡಿಕೆ ಶಿವಕುಮಾರ್ ಬಣ ಸಾಮೂಹಿಕ ನಾಯಕತ್ವ ಎಂಬ ಹೇಳಿಕೆ ನೀಡುತ್ತಿದೆ. ಅವರ ಬಣ ರಾಜಕೀಯವನ್ನು ಹೆಚ್ಚು ತೋರಿಸುತ್ತಿದೆ. ಆದರೆ, ಅದು ವೈಯಕ್ತಿಕ ವಿಚಾರ ನಮಗೆ ಬೇಡವಾದ್ದದ್ದು. ಮಹಾರಾಷ್ಟ್ರದಲ್ಲಿ ಕೂಡ ಸರ್ಕಾರ ಪತನವಾಗಿದೆ ಪಂಜಾಬ್ ರಾಜ್ಯದಲ್ಲಿಯೂ ಕಾಂಗ್ರೆಸ್ ನಿರ್ನಾಮವಾಗಿದೆ. ಆದರೆ, ಕರ್ನಾಟಕದಲ್ಲಿ ನಾವು ಉಳಿಯುತ್ತೇವೆ ಎಂಬ ಭ್ರಮಾ ಲೋಕದಲ್ಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಸೀತಾರಾಂ ನಿಮ್ಮ ಜೊತೆ ಇರ್ತೇನೆ ಸರ್ ಅಂತಿದ್ದಾರೆ, ಕಾಂಗ್ರೆಸ್​ನಲ್ಲಿ ಇರ್ತೇನೆ ಅಂತ ಹೇಳುತ್ತಿಲ್ಲ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.