ETV Bharat / state

ಕೋವಿಡ್​​ ಭೀತಿ.. ಈ ವರ್ಷ ಹಾಸನಾಂಬೆ ದರ್ಶನಕ್ಕಿಲ್ಲ ಅವಕಾಶ - ಹಾಸನ ಲೆಟೆಸ್ಟ್ ನ್ಯೂಸ್

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬ ದೇವಾಲಯ ಈ ವರ್ಷ ನವೆಂಬರ್ 5 ರಿಂದ 16ರ ವರೆಗೆ ಬಾಗಿಲು ತೆರೆಯಲಿದೆ. ದೇವಾಲಯದ ಬಾಗಿಲು ತೆರೆಯುವ ಮೊದಲ ದಿನ ಮತ್ತು ಕೊನೆಯ ದಿನ‌ದಂದು ಆಹ್ವಾನಿತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಸಾರ್ವಜನಿಕರಿಗಾಗಿ ದೇವರ ಪೂಜೆ ವೀಕ್ಷಿಸಲು ಹಾಸನ ನಗರದ 10 ಕಡೆ ಎಲ್‌‌ಇಡಿ ಪರದೆ ಅಳವಡಿಕೆ ಮಾಡಲಾಗಿದೆ..

In this year there is no chance to see hasanamba devi
ಕೋವಿಡ್​​ ಭೀತಿ: ಈ ವರ್ಷ ಹಾಸನಾಂಬೆ ದರ್ಶನಕ್ಕಿಲ್ಲ ಅವಕಾಶ
author img

By

Published : Nov 4, 2020, 1:40 PM IST

ಹಾಸನ : ಕೋವಿಡ್​​ ಭೀತಿ ಹಿನ್ನೆಲೆ ಈ ಬಾರಿ ಹಾಸನನಾಂಬ ದೇವಿ ದರ್ಶನ ಮಾಡಲು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬ ದೇವಾಲಯ ಈ ವರ್ಷ ನವೆಂಬರ್ 5 ರಿಂದ 16ರವರೆಗೆ ಬಾಗಿಲು ತೆರೆಯಲಿದೆ. ದೇವಾಲಯದ ಬಾಗಿಲು ತೆರೆಯುವ ಮೊದಲ ದಿನ ಮತ್ತು ಕೊನೆಯ ದಿನ‌ದಂದು ಆಹ್ವಾನಿತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು.

ಉಳಿದಂತೆ ಹಾಸನಾಂಬ ದೇವರ ದರ್ಶನಕ್ಕೆ ಯಾರಿಗೂ ಅವಕಾಶವಿಲ್ಲ. ಸಾರ್ವಜನಿಕರಿಗಾಗಿ ದೇವರ ಪೂಜೆ ವೀಕ್ಷಿಸಲು ಹಾಸನ ನಗರದ 10 ಕಡೆ ಎಲ್‌‌ಇಡಿ ಪರದೆ ಅಳವಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ''hasanambalive2020'' ಎಂದು ಸರ್ಚ್ ಮಾಡುವ ಮೂಲಕ ಯೂಟ್ಯೂಬ್‌ನಿಂದ ಪೂಜೆಯ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ‌. ಈ ಬಾರಿ ಪ್ರಸಾದದ ವ್ಯವಸ್ಥೆ ಕೂಡ ಇರುವುದಿಲ್ಲ.

ಕಳೆದ ವರ್ಷ ಸುಮಾರು 5 ಲಕ್ಷ ಭಕ್ತರು ನೇರವಾಗಿ ಹಾಸನಾಂಬೆ ದರ್ಶನ ಪಡೆದಿದ್ದರು. ಅಂದರೆ ಪ್ರತಿ ದಿನ‌ ಸುಮಾರು 50 ಸಾವಿರ ಭಕ್ತರು ದೇವರ ದರ್ಶನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚು ಜನ ಬಂದರೆ ನಿಯಂತ್ರಿಸುವುದು ಕಷ್ಟ ಸಾಧ್ಯ. ಅಲ್ಲದೇ ಕೋವಿಡ್​ ಭೀತಿಯೂ ಇರುವುದರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು‌.

ಹಾಸನನಾಂಬ ದೇವಾಲಯದ ಬಾಗಿಲು ವರ್ಷಕ್ಕೊಮ್ಮೆ ತೆಗೆದರೂ ಹಲವಾರು ಪವಾಡಕ್ಕೆ ಹೆಸರುವಾಸಿಯಾಗಿದೆ. ದೇವಾಲಯದ ಬಾಗಿಲು ಹಾಕುವಾಗ ಹಚ್ಚಿದ ದೀಪ ಮುಂದಿನ‌ವರ್ಷ ಬಾಗಿಲು ತೆರೆದಾಗಲೂ ಆರಿರುವುದಿಲ್ಲ. ದೇವರಿಗೆ ಮುಡಿಸಿದ ಹೂವು ಬಾಡಿರುವುದಿಲ್ಲ.

ದೇವರ ನೈವೇದ್ಯಕ್ಕೆ ಇಟ್ಟ ಅನ್ನ ಹಳಸಿರುವುದಿಲ್ಲ ಎಂಬ ನಂಬಿಕೆ ಇದೆ‌. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಭಕ್ತರು ದರ್ಶನ ಪಡೆಯುತ್ತಾರೆ ಎಂದು ಹಾಸನಾಂಬೆ ಮಹಿಮೆ ಕುರಿತು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.