ETV Bharat / state

ನನಗೆ ಬೇಡ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಿರಿಯರಿಗೆ ನೀಡಿ; ಪ್ರೀತಂ ಗೌಡ ಅಚ್ಚರಿ ಹೇಳಿಕೆ

author img

By

Published : Jul 27, 2020, 8:44 PM IST

ನಾನು ಯಡಿಯೂರಪ್ಪನವರ ಅಂಧಾಭಿಮಾನಿ. ಮೊದಲ ಬಾರಿ ಗೆದ್ದವನು, ನನಗೆ ಯಾವ ಆಸೆಯೂ ಇಲ್ಲ. ಮಂತ್ರಿ ಸ್ಥಾನ ಬೇಕಾದರೆ ನಾನು ನೇರವಾಗಿ ಕೇಳ್ತೀನಿ. ಸುತ್ತಿ ಬಳಸಿ ಕೇಳುವನು ನಾನಲ್ಲ. ಅದೆಲ್ಲಾ ಸೂಕ್ತ ಸಮಯದಲ್ಲಿ ನಮ್ಮ ಕೆಲಸ ಗುರುತಿಸಿ ಸಿಗುತ್ತದೆ. ನನಗೆ ಇನ್ನೂ ಕಾಲಾವಕಾಶ ಇದೆ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

Preetham Gowda
ಪ್ರೀತಂಗೌಡ

ಹಾಸನ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನನ್ನ ಬದಲು ಪಕ್ಷದಲ್ಲಿ ಬೇರೆ ಹಿರಿಯರಿಗೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಗಮ ಮಂಡಳಿ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ನನಗೆ ಈ ಸ್ಥಾನ ನೀಡಿದ್ದಕ್ಕೆ ಸಿಎಂಗೆ ಧನ್ಯವಾದ. ನನ್ನ ಬದಲು ಬೇರೆ ಆಕಾಂಕ್ಷಿ ಅಥವಾ ಹಿರಿಯರಿಗೆ ಈ ಸ್ಥಾನ ನೀಡಲಿ. ನಾನು ಯಡಿಯೂರಪ್ಪನವರ ಅಂಧಾಭಿಮಾನಿ. ನಾನು ಮೊದಲ ಬಾರಿ ಗೆದ್ದವನು, ನನಗೆ ಯಾವ ಆಸೆಯೂ ಇಲ್ಲ. ಮಂತ್ರಿ ಸ್ಥಾನ ಬೇಕಾದರೆ ನಾನು ನೇರವಾಗಿ ಕೇಳ್ತೀನಿ. ಸುತ್ತಿ ಬಳಸಿ ಕೇಳುವವನು ನಾನಲ್ಲ. ಅದೆಲ್ಲಾ ಸೂಕ್ತ ಸಮಯದಲ್ಲಿ ನಮ್ಮ ಕೆಲಸ ಗುರುತಿಸಿ ಸಿಗುತ್ತದೆ. ನನಗೆ ಇನ್ನೂ ಕಾಲಾವಕಾಶ ಇದೆ ಎಂದರು.

ಪ್ರೀತಂಗೌಡ ಅಚ್ಚರಿ ಹೇಳಿಕೆ

ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದವನನ್ನು ಶಾಸಕನನ್ನಾಗಿ ಮಾಡಿದ್ದು ಯಡಿಯೂರಪ್ಪ. ನಾನು ಯಡಿಯೂರಪ್ಪ ಹಾಕಿದ ಗೆರೆ ದಾಟಲ್ಲ. ಸರ್ಕಾರ ಇನ್ನೂ ಮೂರು ವರ್ಷ ಸುಭದ್ರವಾಗಿರಬೇಕು. ನನಗಿನ್ನೂ 38-39 ವರ್ಷ, ಇನ್ನೂ 49 ವರ್ಷದ ತನಕ ರಾಜಕಾರಣ ಮಾಡಬೇಕು ಎಂದು ಶಾಸಕ ಪ್ರೀತಂಗೌಡ ಹೇಳಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.