ETV Bharat / state

ದಲಿತರ ವಿಚಾರಗಳ ಮುಖಾಂತರ ಜೆಡಿಎಸ್​​​​​​​​​​​​​​ ಮತಬೇಟೆ: ಮಾಜಿ ಸಚಿವ

author img

By

Published : Apr 12, 2019, 6:29 PM IST

ಮಾಜಿ ಸಚಿವ ಹೆಚ್.ಎಂ.ವಿಶ್ವನಾಥ್ ಅವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ದಲಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಜೆಡಿಎಸ್​ ಮತಬೇಟೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೆಚ್​.ಎಂ.ವಿಶ್ವನಾಥ್ ಅವರು ಜೆಡಿಎಸ್​ ವಿರುದ್ಧಆರೋಪ ಮಾಡಿದರು

ಹಾಸನ: ದಲಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಇದೀಗ ಜೆಡಿಎಸ್​ ಮತಬೇಟೆಗೆ ಮುಂದಾಗಿದೆ. ಆದರೆ ದಲಿತರಿಗೆ ಜೆಡಿಎಸ್​ ಏನು ನೀಡಿದೆ ಎಂದು ಮಾಜಿ ಸಚಿವ ಹೆಚ್.ಎಂ.ವಿಶ್ವನಾಥ್ ಪ್ರಶ್ನಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸನಸಭೆಗೆ ಆರು ಬಾರಿ ಆಯ್ಕೆಯಾಗಿದ್ದರೂ ಹೆಚ್.ಕೆ.ಕುಮಾರಸ್ವಾಮಿಯವರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿಲ್ಲ ಎಂದು ಹೇಳಿದರು.

ಅಷ್ಟೇ ಅಲ್ಲದೆ, ಧಾರ್ಮಿಕ ಹಿನ್ನೆಲೆಯಿಂದ ದೇಶದಲ್ಲಿ ಮೌಢ್ಯತೆ ಹೆಚ್ಚುತ್ತಿದೆ. ಮಾಟ-ಮಂತ್ರಕ್ಕೆ ಕೆಲವರು ಹೆದರುತ್ತಿದ್ದಾರೆ. ಕಾಂಗ್ರೆಸ್​ನ ದೊಡ್ಡ ದೊಡ್ಡ‌ ಮುಖಂಡರು ಕೈ ಕಟ್ಟಿ ಕುಳಿತಿದ್ದಾರೆ. ಆದರೆ ಯಾರು ಕೂಡ ಜೆಡಿಎಸ್​ನ ಗೊಡ್ಡು ಬೆದರಿಕೆಗೆ ಹೆದರುವ ಅಗತ್ಯವಿಲ್ಲ. ಚುನಾವಣಾ ಆಯೋಗಕ್ಕೆ ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ಕ್ಷೇತ್ರಗಳಲ್ಲಿ ಬಂದೋಬಸ್ತ್ ನೀಡುವಂತೆ ಕೇಳುತ್ತೇವೆ ಎಂದರು.

ಹೆಚ್.ಎಂ.ವಿಶ್ವನಾಥ್

ಇನ್ನು, 2003ರಲ್ಲಿ ಶ್ರೀಕೃಷ್ಣ ದೇವಾಲಯ ಉದ್ಘಾಟನೆ ವೇಳೆ ದಲಿತರು ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವೇಗೌಡ್ರು ದೊಡ್ಡ ಕಣ್ಣಿನಿಂದ ನೋಡಿದ್ದರು ಎಂದರು. ಜೆಡಿಎಸ್​ಗೆ ದಲಿತರು ಮತ್ತು ಮುಸ್ಲಿಂ ಸಮುದಾಯದ ಮತಗಳನ್ನು ಕೇಳುವ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆಲುವು ನಿಶ್ಚಿತ. ದಲಿತರು ಮಾತ್ರವಲ್ಲ‌ ಒಕ್ಕಲಿಗರಲ್ಲೂ ಕ್ರಾಂತಿ ಆಗಲಿದೆ. ಸೂಟ್​ಕೇಸ್ ಹಿಡಿದುಕೊಂಡು ಮುಖಂಡರನ್ನ ಭೇಟಿ ಮಾಡುತ್ತಿದ್ದಾರೆ. ನಿಮಗೆ ತಾಕತ್ತಿದ್ದರೆ ಒಕ್ಕಲಿಗ ಸಮುದಾಯದ ಸುಪ್ರದೀಪ್ ಯಜಮಾನ ಹಾಗೂ ಆಲೂರಿನ ಮಂಜುನಾಥ್ ಅವರನ್ನ ಈಗಲೇ ವಿಧಾನ ಪರಿಷತ್ ಸದಸ್ಯರೆಂದು ಘೋಷಿಸಿ ಎಂದು ಸವಾಲು ಹಾಕಿದರು‌.

Intro:ಮೈತ್ರಿ ಅಭ್ಯರ್ಥಿ ಗೆದ್ದರೆ ಎಲ್ಲರಿಗೂ ನೋಟೀಸ್: ವಿಶ್ವನಾಥ್ 

ಹಾಸನ: ಜಿಲ್ಲೆಯಲ್ಲಿ ಮೂರನೆ ತಲೆಮಾರಿನ 
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಗೆದ್ದರೆ ಎಲ್ಲರಿಗೂ ಹೀಗೆ ನೋಟಿಸ್ ಬರುತ್ತಲೇ ಇರುತ್ತವೆ ಎಂದು ಮಾಜಿ ಸಚಿವ ಹೆಚ್.ಎಂ.ವಿಶ್ವನಾಥ್ ಹೇಳಿದರು.
ರೇವಣ್ಣರ ಅಣತಿ ಮೇರೆಗೆ ಚುನಾವಣಾಧಿಕಾರಿ ನೀಡಿರುವ ನೋಟಿಸ್ ಗೆ ಉತ್ತರಿಸಲ್ಲ. ಮತದಾರರಿಗೆ ತೊಂದರೆ ಆಗಿದ್ದರೆ ಜಿಲ್ಲಾಡಳಿತ ಸುಮೋಟೊ ಪ್ರಕರಣ ದಾಖಲಿಸಬಹುದಿತ್ತು
ಎಂದು ಪ್ರಶ್ನಿಸಿದರು.
ದಲಿತರ ಪ್ರಶ್ನೆ ಎತ್ತಿಕೊಂಡು ಜೆಡಿಎಸ್ ದಲಿತರ ಭೇಟೆಗೆ ಮುಂದಾಗಿದೆ.ದಲಿತರಿಗೆ ನಿಮ್ಮ ಕೊಡುಗೆ ಏನು?. ಶಾಸನ ಸಭೆಗೆ ಆರುಭಾರಿ ಆಯ್ಕೆಯಾಗಿದ್ದರೂ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ.ಮಂತ್ರಿ ಸ್ಥಾನಗಳು ಎರಡು ಖಾಲಿ ಇದ್ದರೂ ಕೊಟ್ಟಿಲ್ಲ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಧಾರ್ಮಿಕ ಹಿನ್ನಲೆ ಹೊಂದಿರುವ ದೇಶದಲ್ಲಿ ಮೌಢ್ಯತೆ ಹೆಚ್ಚುತ್ತಿದೆ. ನಿಂಬೆಹಣ್ಣು, ಮಾಟ-ಮಂತ್ರಕ್ಕೆ ಕೆಲವರು ಹೆದರುತ್ತಿದ್ದಾರೆ. ಕಾಂಗ್ರೆಸ್ ದೊಡ್ಡ,ದೊಡ್ಡ‌ ಮುಖಂಡರು ಕೈ ಕಟ್ಟಿ ನಿಲ್ಲುತ್ತಿದ್ದಾರೆ. ಯಾರೂ ಜೆಡಿಎಸ್ ಗೊಡ್ಡು ಬೆದರಿಕೆಗೆ ಹೆದರುವ ಅಗತ್ಯವಿಲ್ಲ.ಈಗಾಗಲೇ ಚುನಾವಣಾ ಆಯೋಗಕ್ಕೆ ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ಕ್ಷೇತ್ರಗಳಲ್ಲಿ ಚುನಾವಣೆಗೆ ಬಂದೋಬಸ್ತ್ ನೀಡುವಂತೆ ಕೇಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಎಷ್ಟು ಜನರಿಗೆ ಭೂಮಿ ಕೊಟ್ಟಿದ್ದೀರಿ. 2003 ರಲ್ಲಿ ಕ್ಷೇತ್ರದಲ್ಲಿ ಶ್ರೀಕೃಷ್ಣ ದೇವಾಲಯ ಉದ್ಟಾಟನೆ ವೇಳೆ ದಲಿತರು ಬಂದಿದ್ದಾಗ ದೇವೇಗೌಡ್ರು ದೊಡ್ಡ ಕಣ್ಣಿನಿಂದ ನೋಡಿದ್ದರು.ಸಂಸತ್ತಿನಲ್ಲಿ ಮೀಸಲಿಟ್ಟ ಅನುದಾನ ವಾಪಸ್ಸಾಗುತ್ತಿದೆ. ದಲಿತರು ಮತ್ತು ಮುಸ್ಲಿಂ ಸಮುದಾಯದ ಮತಗಳನ್ನು ಕೇಳುವ ನೈತಿಕ ಹಕ್ಕು ನಿಮಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಗೆಲುವು ನಿಶ್ಚಿತ.ದಲಿತರು ಮಾತ್ರವಲ್ಲ‌
ಒಕ್ಕಲಿಗರಲ್ಲೂ ಕ್ರಾಂತಿ ಆಗಲಿದೆ. ಸೂಟ್ ಕೇಸ್ ಹಿಡಿದುಕೊಂಡು ಮುಖಂಡರನ್ನ ಭೇಟಿ ಮಾಡುತ್ತಿದ್ದಾರೆ.ನಿಮಗೆ ತಾಕತ್ತಿದ್ದರೆ, ಒಕ್ಕಲಿಗ ಸಮುದಾಯದ ಸುಪ್ರದೀಪ್ ಯಜಮಾನ ಹಾಗೂ ಆಲೂರಿನ ಮಂಜುನಾಥ್ ಅವರನ್ನ ಈಗಲೇ ವಿಧಾನ ಪರಿಷತ್ ಸದಸ್ಯರೆಂದು ಘೋಷಿಸಲಿ ಎಂದು ಸವಾಲು ಹಾಕಿದರು‌.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಹಾಸನ.

Body:0

Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.