ಹಾಸನ: ೧೫ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಬಿಜೆಪಿಯವರು ಕೆ.ಆರ್.ಪೇಟೆ, ಹುಣಸೂರು ಕ್ಷೇತ್ರದಲ್ಲಿ ದುಡ್ಡಿನ ಹೊಳೆ ಹರಿಸುತ್ತಿದ್ದು, ಸರ್ಕಲ್ ಇನ್ಸ್‌ಪೆಕ್ಟರ್ ಅವರೇ ಹಣ ಹಂಚಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಅಡಿಷನಲ್ ಚಾರ್ಜ್ ಐಜಿ ನೇತೃತ್ವದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್‌ರವರು ಕೆ.ಆರ್.ಪೇಟೆ ಸಮೀಪ ದಡದಹಳ್ಳಿ ತೋಟದಲ್ಲಿ ವಾಸ್ತವಮಾಡಿ, ನೇರವಾಗಿ ಪೊಲೀಸರಿಂದ ಹಣ ಹಂಚಿಸುತಿರುವುದಾಗಿ ಆರೋಪಿಸಿದರು. ಡಿಸಿಎಂಗೆ ಹೆದರಿ ಪೊಲೀಸರು ಹಣ ಹಂಚುತ್ತಿದ್ದಾರೆ, ಅಲ್ಲದೇ ಬೆಂಗಳೂರಿನಿಂದ ಕಾರ್ಪೊರೇಟರ್ಗಳನ್ನು ಕರೆಸಿದ್ದಾರೆ ಎಂದು ದೂರಿದರು.
ಐಜಿ ಕೆಲಸ ಮಾಡುವ ಬದಲು ಗುಲಾಮನ ಕೆಲಸ ಮಾಡಲಿ, ಬಿಜೆಪಿ ಆಫೀಸಿನಲ್ಲಿ ಹೋಗಿ ಏಜೆಂಟ್ ಕೆಲಸ ಮಾಡಲಿ ಎಂದರು. ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ನನ್ನ ಮಗನನ್ನು ಮೊದಲನೇ ಆರೋಪಿಯನ್ನಾಗಿ ಮಾಡಬೇಕಾದರೆ ಆತ ಸ್ಥಳ ದಲ್ಲಿರಬೇಕು, ಸೂರಜ್ ಅಲ್ಲಿರಲಿಲ್ಲ ಎಂದು ಕಿಡಿಕಾರಿದರು.