ಹಾಸನ : ರಮೇಶ್ ಜಾರಕಿಹೊಳಿ ಸಿಡಿ ವಿಚಾರವನ್ನ ಎರಡು ರಾಷ್ಟ್ರೀಯ ಪಕ್ಷಗಳು ದೊಡ್ಡದಂತೆ ಪರಿಗಣಿಸಿ ಹೊಡೆದಾಡುತ್ತಿದ್ದಾರೆ ಅವರುಗಳ ವಿಚಾರ ನಮಗ್ಯಾಕೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ವಿಚಾರ ದೊಡ್ಡವರ ವಿಚಾರ.. ನಮಗ್ಯಾಕೆ.. ಅದೇನೋ ಗಾದೆ ಇದೆಯಲ್ಲ ಬಡವ ನೀನು ಮಡಗ್ದಂಗೆ ಇರು ಅಂತಾರಲ್ಲ, ಹಾಗೆ ಅವರ ವಿಚಾರ ನಮ್ಮ ಕಣ್ಣಿಗೆ ಕಂಡರೂ ಕಾಣದಂಗೆ ಇರೋದೇ ಒಳ್ಳೆಯದು ಎಂದರು.
ನಮ್ಮ ಕ್ಷೇತ್ರದ ಜನರಿಗೆ ಕುಡಿಯೋಕೆ ನೀರಿಲ್ಲ ಬೋರ್ವೆಲ್ ಕೊರೆಯಿರಿ ಎಂದರೆ ಕೇಳೋರಿಲ್ಲ. ಜನ ನಮ್ಮನ್ನು ಆಯ್ಕೆ ಮಾಡುವುದು ಕಳುಹಿಸಿರುವುದು ಜನಸೇವೆ ಮಾಡಲು ಅದನ್ನು ನಾನು ಮಾಡುತ್ತಿದ್ದೇನೆ ಎಂದರು. ಹಾಸನದಲ್ಲಿರುವ ಸಾಕಷ್ಟು ಸಮಸ್ಯೆಗಳಿಗೆ ನಾವು ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಸಿಡಿ ಕೇಸ್ ಹಿಡಿದುಕೊಂಡು ಸಭೆಯನ್ನು ಹಾಳು ಮಾಡುವುದು ತರವಲ್ಲ. ಸಿಡಿ ಬಿಡುಗಡೆಯಾದ ಎರಡು ದಿನದ ಬಳಿಕ ವಿಧಾನಸಭೆಯಲ್ಲಿ ಒಂದು ದಿನ ಇದಕ್ಕೆ ಮೀಸಲಿಟ್ಟು ಇತ್ಯರ್ಥ ಮಾಡಿಕೊಳ್ಳಬಹುದಿತ್ತು. ಇದರ ಜೊತೆಗೆ ಜನರನ್ನು ಸಮಸ್ಯೆಗಳನ್ನು ಕೂಡ ಪ್ರಸ್ತಾಪಿಸಬೇಕಿತ್ತು ಎಂದು ಬೇಸರದಿಂದಲೇ ಮಾತನಾಡಿದರು.