ETV Bharat / state

ನಮ್ಮ ಪಕ್ಷದವರು ತಪ್ಪು ಮಾಡಿದರೆ ಜೈಲಿಗೆ ಹಾಕಲಿ, ನಾನು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲಿ: ರೇವಣ್ಣ

ಹಾಸನ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಂಘದ ಕಚೇರಿ ಬದಲಾವಣೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ನಮ್ಮ ಹಾಲಿನ ಒಕ್ಕೂಟಕ್ಕೆ ಕಾರ್ಯದರ್ಶಿ ಬಂದು ಹಾಲನ್ನ ನೀಡಬೇಕು. ಅದನ್ನು ಬಿಟ್ಟು 50-60 ಮಂದಿ ಒಕ್ಕೂಟದ ಮುಂದೆ ಪ್ರತಿಭಟನೆ ಮಾಡಿ ಹಾಲು ಖರೀದಿಸಬೇಕು ಎಂದು ಹೇಳಿದಾಗ ನಾನು ನಿರಾಕರಿಸಿದ್ದು ಸತ್ಯ ಎಂದು ಹೆಚ್​.ಡಿ.ರೇವಣ್ಣ ಹೇಳಿದ್ದಾರೆ.

HD Revanna
ಮಾಜಿ ಸಚಿವ ಎಚ್​.ಡಿ ರೇವಣ್ಣ
author img

By

Published : Mar 12, 2021, 8:05 PM IST

ಹಾಸನ: ಡೈರಿ ವಿಚಾರದಲ್ಲಿ ನನ್ನ ಪಾತ್ರವಿದ್ದರೆ ಕಾನೂನಿನಡಿ ಕ್ರಮ ಜರುಗಿಸಲು ಅಥವಾ ನಮ್ಮ ಪಕ್ಷದವರು ತಪ್ಪುಮಾಡಿದ್ದರೆ ಮುಲಾಜಿಲ್ಲದೆ ಜೈಲಿಗೆ ಹಾಕಲಿ ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹಾಸನ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಂಘದ ಕಚೇರಿ ಬದಲಾವಣೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ನಮ್ಮ ಹಾಲಿನ ಒಕ್ಕೂಟಕ್ಕೆ ಕಾರ್ಯದರ್ಶಿ ಬಂದು ಹಾಲನ್ನ ನೀಡಬೇಕು. ಅದನ್ನು ಬಿಟ್ಟು 50-60 ಮಂದಿ ಒಕ್ಕೂಟದ ಮುಂದೆ ಪ್ರತಿಭಟನೆ ಮಾಡಿ ಹಾಲು ಖರೀದಿಸಬೇಕು ಎಂದು ಹೇಳಿದಾಗ ನಾನು ನಿರಾಕರಿಸಿದ್ದು ಸತ್ಯ ಎಂದರು.

ಮಾಜಿ ಸಚಿವ ಹೆಚ್​.ಡಿ.ರೇವಣ್ಣ

ಅಲ್ಲದೇ ಇಂತಹ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಬೇಕು ಎಂದೇ ಹಾಲಿನ ಕ್ಯಾನ್​ಗೆ ವಿಷ ಹಾಕಿ ಡೈರಿಗೆ ನೀಡಬಹುದು. ಇಂತಹ ಸಂದರ್ಭದಲ್ಲಿ ಸಾವು ನೋವು ಸಂಭವಿಸಿದ್ರೆ ಯಾರನ್ನ ಹೊಣೆ ಮಾಡುವುದು? ಹಾಗಾಗಿ ನಾನು ನಿರಾಕರಿಸಿದೆ. ನಂತರ ಸಹಾಯಕ ಉಪನಿಬಂಧಕರು ಬಂದ ಬಳಿಕ ಅವರ ಸಮ್ಮುಖದಲ್ಲಿ ಹಾಲನ್ನ ಪಡೆದಿದ್ದೇವೆ. ಇದನ್ನು ತಪ್ಪು ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಸಕಲೇಶಪುರದ ಎಆರ್ ಒಬ್ಬ 10 ಸೊಸೈಟಿಗೆ ಪ್ರಭಾವಿಯಾಗಿ ಕೆಲಸ ಮಾಡುತ್ತಿದ್ದಾನೆ. ಶಿವನನ್ನ ಬಿಟ್ಟು ಬೇರೆ ಯಾರೂ ಇಲ್ಲವೇ ಎನ್ನುವ ಮೂಲಕ ಹೆಸರನ್ನು ಹೇಳದೇ ಸಿಟ್ಟಾಗಿ ಮಾತನಾಡಿ, ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಗುಂಡಾ ರೀತಿ ವರ್ತನೆ ಮಾಡುತ್ತಿದ್ದಾರೆ. ಇವರುಗಳಿಂದ ಹಾಲು ಉತ್ಪಾದಕರ ಸಂಘದ ಸದಸ್ಯರುಗಳಿಗೆ ತೊಂದರೆಯಾದರೆ ಇದಕ್ಕೆ ಜಿಲ್ಲಾಧಿಕಾರಿಗಳೇ ನೇರವಾಗಿ ಹೊಣೆ ಆಗಬೇಕಾಗುತ್ತದೆ. ಹಾಗಾಗಿ ಇಂತಹ ವ್ಯಕ್ತಿಗಳನ್ನು ಜಿಲ್ಲಾಧಿಕಾರಿಗಳು ಕಂಟ್ರೋಲ್ ಮಾಡಬೇಕು ಎಂದರು.

ಇನ್ನು ಘಟನೆ ಸಂಬಂಧ ಹಲ್ಲೆಗೊಳಗಾಗಿದ್ದ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ವಿ.ಸುನಿಲ್ ಮತ್ತು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ನಾರಾಯಣ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕೂಡ ಬೃಹತ್ ಪ್ರತಿಭಟನೆ ನಡೆಸಿ ಕೂಡಲೇ ಇಬ್ಬರನ್ನು ಅಮಾನತುಪಡಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.