ಹಾಸನ: ರಾಜ್ಯದ ಬಿಜೆಪಿ ಎಂಪಿಗಳು ನರಸತ್ತವುಗಳು. ಕೇಂದ್ರಕ್ಕೆ ಯಾವುದೇ ಬೇಡಿಕೆ ಸಲ್ಲಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿ ನೋಡಿದರೆ ಬೇಸರವಾಗುತ್ತದೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಮಾತಿನ ಮೂಲಕ ಹರಿಹಾಯ್ದರು.
ರಾಜ್ಯದಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿ ಜಿಲ್ಲೆಗೆ ಅಥವಾ ತಮ್ಮ ಕ್ಷೇತ್ರಕ್ಕೆ ಇಂತಿಷ್ಟು ಹಣ ನೀಡಬೇಕೆಂದು ಕೇಂದ್ರಕ್ಕೆ ಮನವಿ ಸಲ್ಲಿಸಲು ನಿಷ್ಪ್ಪಯೋಜಕರಾಗಿದ್ದಾರೆ. ಎಂಪಿಗಳು ಮೋದಿ ಮುಂದೆ ನಿಂತು ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರು ಸಂಸತ್ ಅಧಿವೇಶನದಲ್ಲಿ ಹಾಜರಾಗಿ ಕೈ ಎತ್ತುವ ಮೂಲಕ ಹಾಜರಾತಿ ಹಾಕಿ ಬರುವುದಕ್ಕೆ ಅಷ್ಟೇ ಸೀಮಿತವಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸುಮಾರು 70 ಸೋಂಕಿತರು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4,898 ಸಕ್ರಿಯ ಪ್ರಕರಣಗಳಿದ್ದು, ಇಂದು ಕೂಡ 499 ಪ್ರಕರಣಗಳು ಪತ್ತೆಯಾಗಿದೆ. ಇನ್ನು ಹಾಸನ ಜಿಲ್ಲಾಸ್ಪತ್ರೆ ಸೇರಿದಂತೆ 7 ತಾಲೂಕು ಆಸ್ಪತ್ರೆ ಸೇರಿ 15 ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ತಾಲೂಕುಗಳನ್ನು ಹೊರತುಪಡಿಸಿ ಇನ್ನುಳಿದಂತೆ ಯಾವುದೇ ಸಮುದಾಯ ಕೇಂದ್ರಗಳಲ್ಲಿ ಸೋಂಕಿತರ ವ್ಯಕ್ತಿಗಳನ್ನು ದಾಖಲು ಮಾಡಿಕೊಂಡಿಲ್ಲ ಇದು ಆಸ್ಪತ್ರೆಯ ಬೇಜವಾಬ್ದಾರಿತನ ಅಂತ ಕಿಡಿಕಾರಿದರು.
ಇದನ್ನೂ ಓದಿ: 14 ದಿನಗಳ ಕರ್ಫ್ಯೂ.. ರೈಲ್ವೆ ಸೀಟ್ ರಿಸರ್ವೇಷನ್ ಸೆಂಟರ್ ಬಂದ್..
ಕುಮಾರಸ್ವಾಮಿ ಸರ್ಕಾರದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 750 ಹಾಸಿಗೆಗೆ ಮೇಲ್ದರ್ಜೆಗೇರಿಸಿ ಕಾಮಗಾರಿ ಮಾಡಿದ್ದು, ಕೇವಲ ನಮ್ಮ ಪಕ್ಷದವರು ದಾಖಲಾಗಲಿ ಎಂದಲ್ಲ, ದೂರದೃಷ್ಟಿ ಇಟ್ಟುಕೊಂಡು ಆಸ್ಪತ್ರೆಯನ್ನು ಕುಮಾರಸ್ವಾಮಿ ಕಟ್ಟಿದರು ಅದನ್ನ ಬಿಜೆಪಿ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಇವತ್ತು ಇಂತಹ ದೊಡ್ಡ ಆಸ್ಪತ್ರೆ ಇಲ್ಲದಿದ್ದರೆ ಹಾಸನದಲ್ಲಿ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿತ್ತು, ಅದನ್ನು ಸರ್ಕಾರ ಗಮನ ಹರಿಸಬೇಕು ಎಂದರು.
ಹಾಸನದಲ್ಲಿ ಎರಡು ದಿನ ಕಳೆದರೆ ನಿತ್ಯ 2,000 ಕೋವಿಡ್ ಸೋಂಕಿತರು ಪತ್ತೆಯಾಗುತ್ತಾರೆ. ಹೀಗಾಗಿ ನಿತ್ಯ 4000 ದಷ್ಟು ಚುಚ್ಚುಮದ್ದುಗಳು ಬೇಕಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತಿವೆ. ದಯಮಾಡಿ ಸರ್ಕಾರ ನಿರ್ಲಕ್ಷ್ಯ ಮಾಡದೇ ಜಿಲ್ಲೆಗೆ ಚುಚ್ಚುಮದ್ದು ಪೂರೈಕೆ ಮಾಡಿ ಎಂದು ಮನವಿ ಮಾಡಿದ್ರು.
ಇದನ್ನೂ ಓದಿ: ಇನ್ನೆರಡು ತಿಂಗಳು ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ಬ್ರೇಕ್ : ಸಚಿವ ಆರ್ ಅಶೋಕ್