ETV Bharat / state

ಬಿಜೆಪಿ ನಾಯಕರಿಗೆ ಬೇಕಾದ ರೀತಿ ಗ್ರಾಪಂ ಮೀಸಲಾತಿ ನಿಗದಿ : ಹೆಚ್‌ ಡಿ ರೇವಣ್ಣ ಆರೋಪ - ಚುನಅವಣಾ ಆಯೋಗ

ಈಗಾಗಲೇ ನಾನು ಮೂರು-ನಾಲ್ಕು ಚುನಾವಣೆಗಳ ಮೀಸಲಾತಿ ಬಿಡುಗಡೆಯಾಗಿದ್ದ ದಾಖಲಾತಿಗಳನ್ನು ಪಡೆದುಕೊಂಡಿದ್ದೇನೆ ಮತ್ತು ನಿವೃತ್ತಿ ಹೊಂದಿರುವ ಚುನಾವಣಾ ಅಧಿಕಾರಿಗಳ ಸಲಹೆ ಪಡೆದು ಮೀಸಲಾತಿಯನ್ನ ಹೇಗೆ ನಿಗದಿ ಮಾಡುತ್ತಾರೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ತಯಾರಿಸಲು ಕೂಡ ಅವರ ಬಳಿ ವಿನಂತಿಸಿದ್ದೇನೆ..

HD Revanna
ಮಾಜಿ ಸಚಿವ ಹೆಚ್.ಡಿ ರೇವಣ್ಣ
author img

By

Published : Jan 4, 2021, 6:42 PM IST

ಹಾಸನ : ಗ್ರಾಮ ಪಂಚಾಯತ್‌ ಮೀಸಲು ಪಟ್ಟಿ ಪ್ರಕಟಿಸುವುದಕ್ಕೆ ಬಿಜೆಪಿ ಕಾನೂನುಬಾಹಿರ ಚಟುವಟಿಕೆ ಮಾಡುತ್ತಿದೆ. ಸದ್ಯದಲ್ಲಿಯೇ ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಒಪ್ಪಿಸುತ್ತೇನೆ ಮತ್ತು ಇದರ ಬಗ್ಗೆ ಉಗ್ರ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಿಜೆಪಿ ವಿರುದ್ಧ ಹರಿಹಾಯ್ದರು.

ಹಾಸನದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿಚಾರದಲ್ಲಿ ಕೆಲ ಬಿಜೆಪಿ ನಾಯಕರು ತಮಗೆ ಬೇಕಾದ ಹಾಗೆ ಮೀಸಲಾತಿ ನಿಗದಿ ಮಾಡಿಸಲು ಮುಂದಾಗಿದ್ದಾರೆ. ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಕರೆ ಮಾಡಿ ಬಿಜೆಪಿಗೆ ಬೆಂಬಲ ನೀಡಿದ್ರೆ ಮೀಸಲಾತಿಯನ್ನು ನಿಮ್ಮ ಕಡೆ ಬರುವ ಹಾಗೆ ಮಾಡಿಸಿಕೊಳ್ಳುತ್ತೇವೆ.

ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಎಂದು ದೂರವಾಣಿ ಸಂಪರ್ಕದ ಮೂಲಕ ಒತ್ತಡ ಹೇರುತ್ತಿದ್ದಾರೆ. ಅವರು ಮಾತನಾಡಿರುವ ಆಡಿಯೋಗಳು ಕೂಡ ನನ್ನ ಬಳಿ ಇದೆ. ಸಾಕ್ಷಿ ಬೇಕೆಂದ್ರೆ ನ್ಯಾಯಾಲಯದ ಸಮ್ಮುಖದಲ್ಲಿಯೇ ಅದನ್ನ ಬಹಿರಂಗಪಡಿಸುತ್ತೇನೆ ಎಂದು ಗಂಭೀರವಾಗಿ ಆರೋಪಿಸಿದರು.

ಪಂಚಾಯತ್ ರಾಜ್ ತಿದ್ದುಪಡಿ ಮಾಡುವ ಸಂದರ್ಭದಲ್ಲಿಯೇ ಚುನಾವಣೆಗೂ ಮುನ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟ ಮಾಡಬೇಕು ಎಂಬ ನಿಯಮವಿದ್ದರೂ ಚುನಾವಣಾ ಆಯೋಗ ಪ್ರಕಟಿಸದೇ ಸರ್ಕಾರದ ಏಜೆಂಟ್ ಆಗಿ ವರ್ತಿಸುತ್ತದೆ.

ಬಿಜೆಪಿ ನಾಯಕರಿಗೆ ಬೇಕಾದ ರೀತಿ ಗ್ರಾಪಂ ಮೀಸಲಾತಿ ನಿಗದಿ : ಹೆಚ್‌ ಡಿ ರೇವಣ್ಣ ಆರೋಪ

ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಮೀಸಲಾತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದು ಕಾನೂನು ಬಾಹಿರ, ಇದರ ವಿರುದ್ಧ ಉಗ್ರ ಹೋರಾಟ ಮಾಡುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದರು.

ಈಗಾಗಲೇ ನಾನು ಮೂರು-ನಾಲ್ಕು ಚುನಾವಣೆಗಳ ಮೀಸಲಾತಿ ಬಿಡುಗಡೆಯಾಗಿದ್ದ ದಾಖಲಾತಿಗಳನ್ನು ಪಡೆದುಕೊಂಡಿದ್ದೇನೆ ಮತ್ತು ನಿವೃತ್ತಿ ಹೊಂದಿರುವ ಚುನಾವಣಾ ಅಧಿಕಾರಿಗಳ ಸಲಹೆ ಪಡೆದು ಮೀಸಲಾತಿಯನ್ನ ಹೇಗೆ ನಿಗದಿ ಮಾಡುತ್ತಾರೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ತಯಾರಿಸಲು ಕೂಡ ಅವರ ಬಳಿ ವಿನಂತಿಸಿದ್ದೇನೆ.

ಅದರ ಪ್ರಕಾರವೇ ಮೀಸಲಾತಿ ಪ್ರಕಟಿಸುತ್ತಾರೆ ಅಥವಾ ಕಾನೂನುಬಾಹಿರವಾಗಿ ಪ್ರಕಟಿಸುತ್ತಾರೆಯೇ ಎಂಬುದು ಗೊತ್ತಾಗಲಿದೆ. ಹಾಗಾಗಿ, ಕಾನೂನುಬಾಹಿರವಾಗಿ ಮೀಸಲಾತಿ ಪ್ರಕಟ ಮಾಡಿದ್ರೆ ಸುಮ್ಮನೆ ಕೂರುವುದಿಲ್ಲ, ಉಗ್ರ ಹೋರಾಟದ ಜೊತೆಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದರು.

ಇದನ್ನೂ ಓದಿ: ಎಸ್​ಸಿಪಿ & ಟಿಎಸ್​ಪಿ ಟೆಂಡರ್ ಬಗ್ಗೆ ಸಿಎಂ ತನಿಖೆಗೆ ಆದೇಶಿಸಬೇಕು: ಹೆಚ್.ಡಿ.ರೇವಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.