ETV Bharat / state

ಮೈತ್ರಿಯ ಹಿನ್ನೆಲೆ ಕ್ಷೇತ್ರ ಗೆಲ್ಲಬೇಕು ಎಂದಾಗ ಯಾರ ಬಳಿಯಾದರೂ ಮಾತನಾಡಲು ಸಿದ್ಧ: ಹೆಚ್​ಡಿಕೆ

ಮೈತ್ರಿಯ ವಿಷಯಕ್ಕೆ ಸಂಬಂಧಪಟ್ಟಂತೆ, 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ದೃಷ್ಟಿಯಿಂದ ಯಾರನ್ನು ಬೇಕಾದರೂ ಭೇಟಿ ಮಾಡಲು ಮುಕ್ತನಾಗಿದ್ದೇನೆ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

hdk
ಹೆಚ್​ಡಿಕೆ
author img

By ETV Bharat Karnataka Team

Published : Jan 10, 2024, 6:59 AM IST

Updated : Jan 10, 2024, 7:38 AM IST

ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ

ಹಾಸನ: ಮೈತ್ರಿಯ ವಿಷಯಕ್ಕೆ ಸಂಬಂಧಪಟ್ಟಂತೆ, 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ದೃಷ್ಟಿಯಿಂದ ಯಾರನ್ನು ಬೇಕಾದರೂ ಭೇಟಿ ಮಾಡಲು ಮುಕ್ತನಾಗಿದ್ದೇನೆ. ಹಾಗಾಗಿ ಮಾಜಿ ಸಚಿವ ವಿ ಸೋಮಣ್ಣ ಮತ್ತು ಮಾಜಿ ಶಾಸಕ ಸಿ ಟಿ ರವಿ ಮನೆಗೆ ಬಂದು ಮಾತನಾಡಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಹಾಸನದಲ್ಲಿ ಮಾತನಾಡಿದ ಅವರು, ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲು ವಿಚಾರದಲ್ಲಿ ಪ್ರತಿಭಟನೆ ಮಾಡಬಾರದು ಅಂತ ಇದೆಯಾ? ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ನಮ್ಮ‌ ದೇಶದ ಸಂವಿಧಾನ ವ್ಯವಸ್ಥೆಯಲ್ಲಿ ಯಾವುದೇ ಒಂದು ವಿಷಯಗಳನ್ನು ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಸಾರ್ವಜನಿಕರಿಗೆ ತೊಂದರೆ, ಕಾನೂನು ಬಾಹಿರವಾಗಿ ಪ್ರತಿಭಟನೆ ಮಾಡಿದರೆ ಕೇಸ್ ಹಾಕಲಿ. ಈ ಸರ್ಕಾರ ನಾವು ಸಂವಿಧಾನದ‌ ರಕ್ಷಕರು ಅಂತ ಜಾಗಟೆ ಹೊಡಿತಾರಲ್ಲ. ಈ ರೀತಿ ಕೇಸ್ ಹಾಕುವುದರಿಂದ‌ ಯಾವ ರೀತಿ ಸಂವಿಧಾನ ರಕ್ಷಣೆ ಮಾಡ್ತಾರೆ ಎಂದು ಟೀಕಿಸಿ, ಅದ್ಯಾವ ಆಧಾರದ ಮೇಲೆ ಕೇಸ್ ಹಾಕಿದ್ದಾರೋ ಗೊತ್ತಿಲ್ಲ ಎಂದರು.

ನಿಖಿಲ್ ಕುಮಾರಸ್ವಾಮಿ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ಎಂಪಿ ಚುನಾವಣೆಗೆ ಸ್ಪರ್ಧೆ ವಿಚಾರ ಅಯೋಧ್ಯೆಯಲ್ಲಿ ರಾಮಮಂದಿರ‌ ಉದ್ಘಾಟನೆಗೆ ಭಕ್ತಿಯನ್ನು ತೋರಿಸಲು ಕಾರ್ಯಕ್ರಮ ಹಮ್ಮಿಕೊಂಡಿರುವುದು ಅದು ಅವರವರಿಗೆ ಬಿಟ್ಟ ವಿಚಾರ ಎಂದ ಹೆಚ್​ಡಿಕೆ ಮುಂದಿನ‌ ಚುನಾವಣೆ ದೃಷ್ಟಿಯಿಂದ, ಬಿಜೆಪಿ-ಜೆಡಿಎಸ್​ ಮೈತ್ರಿ ಇದೆ. ಅದಕ್ಕೆ ಸಂಬಂಧಪಟ್ಟಂತೆ ಬಿಜೆಪಿಯಲ್ಲಿ ಇರುವ ಯಾರನ್ನು ಬೇಕಾದರೂ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ವಿ ಸೋಮಣ್ಣ ದೇವೇಗೌಡರ ಭೇಟಿ ಹಾಗೂ ಸಿ ಟಿ ರವಿ ಕುಮಾರಸ್ವಾಮಿ ಭೇಟಿ ವಿಚಾರವಾಗಿ, ಮೈತ್ರಿಯ ವಿಷಯಕ್ಕೆ ಸಂಬಂಧಪಟ್ಟಂತೆ, 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ದೃಷ್ಟಿಯಿಂದ ಯಾರನ್ನು ಬೇಕಾದರೂ ಭೇಟಿ ಮಾಡಲು ಮುಕ್ತನಾಗಿದ್ದೇನೆ ಎಂದು ಈ ವೇಳೆ ಹೇಳಿದರು.

ಮಂತ್ರಾಕ್ಷತೆ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮಂತ್ರಾಕ್ಷತೆ ಅಕ್ಕಿಯ ಬಗ್ಗೆ ರಾಜ್ಯದ ಉಪಮುಖ್ಯಂತ್ರಿಗಳ ಬಾಲಿಶ ಹೇಳಿಕೆ ಇದೆಯಲ್ಲಾ ಅದಕ್ಕೆ ಉತ್ತರ ಕೊಡಬೇಕಾದದ್ದು ಅನಾವಶ್ಯಕ. ಅನ್ನಭಾಗ್ಯ ಅಕ್ಕಿ ಅಂತ ಹೇಳಿದ್ದಾರೆ. ಈ ಸರ್ಕಾರ 10 ಕೆಜಿ ಅಕ್ಕಿ ಕೊಡುತ್ತೇನೆ ಅಂದರು. ನುಡಿದಂತೆ ನಡೆಯಬೇಕಿತ್ತು. ಈ ಕ್ಷಣದವರೆಗೂ ಅಕ್ಕಿಯನ್ನು ಕೊಡಲು ಆಗಿಲ್ಲ. ಪ್ರತಿ ತಿಂಗಳು ಹತ್ತು ಕೆಜಿ ಅಕ್ಕಿ ಎಲ್ಲಿಂದ ಕೊಟ್ಟಿದ್ದಾರೆ. ಮೂಲ ಹೇಳುವುದಾದರೆ ಮಂತ್ರಾಕ್ಷತೆ ಮಾಡಿರುವ ಅಕ್ಕಿಯನ್ನು ಬೆಳೆದಿರುವನು ರೈತ. ಕೃಷಿಕರು ಬೆಳೆದಿರುವ ಆ ಅಕ್ಕಿಯನ್ನು ಮಂತ್ರಾಕ್ಷತೆ ಮಾಡಿ ಮನೆ ಮನೆಗೆ ಕೊಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಅದರ ಬಗ್ಗೆ ಈ ರೀತಿ ಸಣ್ಣತನದಲ್ಲಿ ಮಾತನಾಡುವುದು ಅನಾವಶ್ಯಕ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಲೋಕ ಸಮರಕ್ಕೆ ತಾಲೀಮು ಆರಂಭ: ನಾಳೆ ಇಡೀ ದಿನ ರೆಸಾರ್ಟ್​ನಲ್ಲಿ ಬಿಜೆಪಿ ನಾಯಕರ ಸಭೆ

Last Updated : Jan 10, 2024, 7:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.