ಹಾಸನ: ಫೇಸ್‌ಬುಕ್ ಮೂಲಕ ಯುವತಿಯರ ಮಾನ ಹರಾಜು ಹಾಕಿ ಹಣ ಸಂಪಾದನೆಗೆ ಇಳಿದಿದ್ದ ಯುವಕನೊಬ್ಬ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕು ಕೇಡಿಗೆ ಗ್ರಾಮದ ಪ್ರಶಾಂತ್ ರಾಜಶೇಖರ ವಾಮ (24) ಬಂಧಿತ ಆರೋಪಿ. ಕೇಡಿಗೆ ಗ್ರಾಮದಲ್ಲಿ ಕಾರು ಚಾಲಕ ವೃತ್ತಿ ಮಾಡಿಕೊಂಡಿರುವ ಪ್ರಶಾಂತ್, ಫೇಸ್‌ಬುಕ್‌ನಲ್ಲಿ ಯುವತಿಯರ ಫೋಟೊ ಕದ್ದು ಫೋಟೊಶಾಪ್ ಮೂಲಕ ಅವರನ್ನು ಬೆತ್ತಲೆಯಾಗಿಸಿ ನಂತರ ಡಿಲೀಟ್ ಮಾಡಲು ಹಣದ ಬೇಡಿಕೆಯಿಡುತ್ತಿದ್ದ. ಈ ವಂಚಕನನ್ನು ಹಾಸನ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ..