ಹಾಸನ: ಪಕ್ಕೆಲುಬ, ನಪುಂಸಕಲಿಂಗ ಪದ ತಪ್ಪು ಉಚ್ಛಾರಣೆ ಬಳಿ ಪುಳಿಯೋಗರೆ ಪದದ ಸರದಿಯಾಗಿದೆ.ಸಕಲೇಶಪುರ ಪಟ್ಟಣದ ಹೊರವಲಯದ ಕಾಫಿ ಬೆಳೆಗಾರರ ಸಂಘದ ಸಮೀಪವಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪುಳಿಯೋಗರೆ ಪದ ಉಚ್ಚಾರಣೆಗೆ ವಿದ್ಯಾರ್ಥಿನಿಯೊಬ್ಬಳು ತಡವರಿಸಿದ ವಿಡಿಯೋ ವೈರಲ್ ಆಗಿದೆ.
ಶಿಕ್ಷಕರೊಬ್ಬರು ಶಾಲೆಯ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಬಳಿ ಪುಳಿಯೋಗರೆ ಎಂಬ ಪದವನ್ನು ಹೇಳಿಸುವ ವೇಳೆ ವಿಡಿಯೋ ಮಾಡಿಸಿ ಹರಿಯಬಿಟ್ಟಿದ್ದಾನೆ.
ಪುಳಿಯೋಗರೆ ಎಂಬ ಪದವನ್ನು ತಪ್ಪುತಪ್ಪಾಗಿ ಉಚ್ಚರಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಇನ್ನು ಈ ಪ್ರಕರಣದ ಸಂಬಂಧ ಸ್ಥಳೀಯರು ಶಿಕ್ಷಕನನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರಿಗೆ ಶಿಕ್ಷಕ ಬೆದರಿಕೆಯೊಡ್ಡಿದ್ದಾನೆಂದು ಹೇಳಲಾಗ್ತಿದೆ.
ತಾನೊಬ್ಬ ದಲಿತ ಶಿಕ್ಷಕ ಎಂದು ಹೇಳಿಕೊಂಡಿರುವ ನಿರ್ವಾಣಯ್ಯ, ನನ್ನ ವಿರುದ್ಧ ನೀವು ದನಿಯೆತ್ತಿದರು ನಿಮ್ಮ ವಿರುದ್ಧವೇ ಪ್ರಕರಣ ದಾಖಲಿಸುವೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿಕ್ಷಕನ ವಿರುದ್ಧ ಈಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನ ಅಮಾನತು ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಕೂಡಲೇ ಈ ವಿಡಿಯೋ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಶಿಕ್ಷಕನಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.