ETV Bharat / state

ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ: ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಡಿಸಿ ಸೂಚನೆ

author img

By

Published : Jan 3, 2020, 10:15 AM IST

ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದ್ದು, ಗಣತಿಗೆ ಸಹಕರಿಸಬೇಕೆಂದು ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

pressmeet
ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ

ಹಾಸನ : ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದ್ದು, ಗಣತಿಗೆ ಸಹಕರಿಸಬೇಕೆಂದು ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ 7ನೇ ಆರ್ಥಿಕ ಗಣತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ್ರು. ರೈತರು, ಸಾರ್ವಜನಿಕರು, ವ್ಯಾಪಾರಿಗಳು, ಉದ್ಯಮದಾರರು ತಮ್ಮ ಆರ್ಥಿಕ ಚಟುವಟಿಕೆಗಳ ಕುರಿತ ಮಾಹಿತಿಯನ್ನು ನೀಡಿ ಗಣತಿಗೆ ಸಹಕರಿಸಬೇಕೆಂದು ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾಸನ ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ

7ನೇ ಆರ್ಥಿಕ ಗಣತಿ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ 6ನೇ ಗಣತಿಯ ಮಾಹಿತಿ ಪ್ರಕಾರ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1,12,014, ನಗರ ಪ್ರದೇಶಗಳಲ್ಲಿ 28,962 ಸೇರಿದಂತೆ ಒಟ್ಟು 1,40,976 ಉದ್ಯಮಗಳಿದ್ದು, ಅವುಗಳಲ್ಲಿ ಕೇವಲ 7,000 ಉದ್ಯಮಗಳ ಗಣತಿ ಕಾರ್ಯ ನಡೆದಿದ್ದು, ಮಾರ್ಚ್‌ ಅಂತ್ಯದೊಳಗೆ ನಿಗದಿತ 1.5 ಲಕ್ಷ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕು ಕಚೇರಿಗಳಲ್ಲಿ ಪಿಡಿಒ ಹಾಗೂ ಗ್ರಾಮಲೆಕ್ಕಿಗರಿಗೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಆರ್ಥಿಕ ಗಣತಿಯ ಕುರಿತು ತರಬೇತಿ ಕಾರ್ಯಾಗಾರ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದ್ರು. ಗ್ರಾಮಗಳ ಗಡಿ ಗುರುತುಗಳು ಹಾಗೂ ಕಂದಾಯ ಗ್ರಾಮಗಳಿಗೆ ಹೊಂದಿಕೊಂಡಿರುವ ದಾಖಲೆ ಗ್ರಾಮಗಳ ಬಗ್ಗೆ ಸ್ಥಳೀಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತೆರಿಗೆ ವಸೂಲಿಗಾರರು ಗಣತಿದಾರರಿಗೆ ಸಹಾಯ ಮಾಡಬೇಕೆಂದು ನಿರ್ದೇಶನ ನೀಡಿದರು.

ಬೆಳೆ ಉತ್ಪನ್ನ ಹಾಗೂ ಪ್ಲಾಂಟೇಷನ್ ಬೆಳೆ ಬೆಳೆಯುವವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಮಟ್ಟದ ಸಾರ್ವಜನಿಕ ಆಡಳಿತ ಮಾಡುವ ಎಲ್ಲಾ ಸಚಿವಾಲಯಗಳು ಮತ್ತು ಕಚೇರಿಗಳು, ಕಾನೂನು ಬಾಹಿರವಾಗಿ ನಡೆಸಲಾಗುವ ಜೂಜಾಟ ಇತ್ಯಾದಿಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳಾದ ಯುನೈಟೆಡ್ ನೇಷನ್ ಮತ್ತು ಅವುಗಳ ಏಜೆನ್ಸಿ ಹಾಗೂ ರಾಯಭಾರಿ ಕಚೇರಿ ಇತ್ಯಾದಿಗಳನ್ನು ಹೊರತುಪಡಿಸಿ ಗಣತಿ ಕಾರ್ಯ ನಡೆಯಲಿದೆ ಎಂದು ಹೇಳಿದರು.

Intro:ಹಾಸನ : ಜಿಲ್ಲಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದ್ದು, ರೈತರು, ಸಾರ್ವಜನಿಕರು, ವ್ಯಾಪಾರಿಗಳು, ಉದ್ಯಮದಾರರು ತಮ್ಮ ಆರ್ಥಿಕ ಚಟುವಟಿಕೆಗಳ ಕುರಿತ ಮಾಹಿತಿಯನ್ನು ನೀಡಿ ಗಣತಿಗೆ ಸಹಕರಿಸಬೇಕೆಂದು ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
         ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ 7ನೇ ಆರ್ಥಿಕ ಗಣತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, 7ನೇ ಆರ್ಥಿಕ ಗಣತಿ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳೆದ 6ನೇ ಗಣತಿಯ ಮಾಹಿತಿ ಪ್ರಕಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 1,12,014, ನಗರ ಪ್ರದೇಶಗಳಲ್ಲಿ 28,962 ಸೇರಿದಂತೆ ಒಟ್ಟು 1,40,976 ಉದ್ಯಮಗಳಿದ್ದು, ಅವುಗಳಲ್ಲಿ ಕೇವಲ 7000 ಉದ್ಯಮಗಳ ಗಣತಿ ಕಾರ್ಯ ನಡೆದಿದ್ದು, ಮಾಚ್ ಅಂತ್ಯದೊಳಗೆ ನಿಗದಿತ 1.5 ಲಕ್ಷ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಣತಿದಾರರಿಗೆ ಮೊಬೈಲ್ ಆ್ಯಪ್ ಮೂಲಕ ಗಣತಿ ನಡೆಸುವ ಬಗ್ಗೆ ತರಬೇತಿ ನೀಡುವಂತೆ ಸೂಚಿಸಿದರಲ್ಲದೆ, ಸಾರ್ವಜನಿಕರಿಗೆ ಗಣತಿದಾರರನ್ನು ಗುರುತಿಸಲು ಅನುಕೂಲವಾಗುವಂತೆ ನಿಗದಿತ ಸಮವಸ್ತ್ರ, ಗುರುತಿನ ಕಾರ್ಡ್ ಹಾಗೂ ದೃಢೀಕರಣ ಪತ್ರದೊಂದಿಗೆ ಕಾರ್ಯಕ್ಷೇತ್ರಕ್ಕೆ ತೆರಳುವಂತೆ ಹೇಳಿದರು.
ತಾಲ್ಲೂಕು ಕಚೇರಿಗಳಲ್ಲಿ ಪಿ.ಡಿ.ಓ ಹಾಗೂ ಗ್ರಾಮಲೆಕ್ಕಿಗರಿಗೆ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಆರ್ಥಿಕ ಗಣತಿಯ ಕುರಿತು ತರಬೇತಿ ಕಾರ್ಯಗಾರ ನಡೆಸಿ ಮಾಹಿತಿ ನೀಡಿರೆಂದು ಹೇಳಿದರಲ್ಲದೆ, ಗ್ರಾಮಗಳ ಗಡಿ ಗುರುತುಗಳು ಹಾಗೂ ಕಂದಾಯ ಗ್ರಾಮಗಳಿಗೆ ಹೊಂದಿಕೊಂಡಿರುವ ದಾಖಲೆ ಗ್ರಾಮಗಳ ಬಗ್ಗೆ ಸ್ಥಳೀಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತೆರಿಗೆ ವಸೂಲಿಗಾರರು ಗಣತಿದಾರರಿಗೆ ಸಹಾಯ ಮಾಡಬೇಕೆಂದು ನಿರ್ದೇಶನ ನೀಡಿದರು.
ಅದರಂತೆ ಪಟ್ಟಣ ಪ್ರದೇಶಗಳಲ್ಲಿ ಕಂದಾಯ ನಿರೀಕ್ಷಕರು ಮತ್ತು ತೆರಿಗೆ ವಸೂಲಿಗಾರರು ಈಗಾಗಲೇ ರಚಿಸಿರುವ ಬ್ಲಾಕ್‍ಗಳ ಗಡಿಗಳನ್ನು ಗಣತಿದಾರರಿಗೆ ಗುರುತಿಸಿಕೊಡಲು ಸಹಕರಿಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು ಎಂದರು.
ಜಂಟಿ ಕೈಗಾರಿಕಾ ನಿರ್ದೇಶಕರು ಅಥವಾ ವಾಣಿಜ್ಯ ತೆರಿಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಗಣತಿದಾರರು ಗಣತಿ ನಡೆಸಲು ಬಂದಾಗ ಸರಿಯಾದ ಮಾಹಿತಿ ನೀಡಿ, ಸಹಕರಿಸಲು ಸೂಚನೆ ನೀಡಿ ಎಂದು ಹೇಳಿದರು.
ಬೆಳೆ ಉತ್ಪನ್ನ ಹಾಗೂ ಪ್ಲಾಂಟೇಷನ್ ಬೆಳೆ ಬೆಳೆಯುವವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಮಟ್ಟದ ಸಾರ್ವಜನಿಕ ಆಡಳಿತ ಮಾಡುವ ಎಲ್ಲಾ ಸಚಿವಾಲಯಗಳು ಮತ್ತು ಕಚೇರಿಗಳು, ಕಾನೂನು ಬಾಹಿರವಾಗಿ ನಡೆಸಲಾಗುವ ಜೂಜಾಟ ಇತ್ಯಾದಿಗಳು ಹಾಗೂ ಅಂತರಾಷ್ಟ್ರೀಯ ಸಂಘಟನೆಗಳಾದ ಯುನೈಟೆಡ್ ನೇಷನ್ ಮತ್ತು ಅವುಗಳ ಏಜೆನ್ಸಿ ಹಾಗೂ ರಾಯಭಾರಿ ಕಚೇರಿ ಇತ್ಯಾದಿಗಳನ್ನು ಹೊರತುಪಡಿಸಿ ಗಣತಿ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಬೈಟ್ : ಆರ್. ಗಿರೀಶ್, ಜಿಲ್ಲಾಧಿಕಾರಿ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:೦

Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.