ಹಾಸನ: ಹಾಸನಾಂಬೆ ಬಾಗಿಲನ್ನು ಅಕ್ಟೋಬರ್ 17 ರಿಂದ 29ರ ವರೆಗೆ ತೆಗೆಯುವ ಹಿನ್ನೆಲೆಯಲ್ಲಿ ಅಂತರ್ಜಾಲ ತಾಣವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿ, 13 ದಿನಗಳ ಕಾಲ ಹಾಸನಾಂಬೆ ಬಾಗಿಲು ತೆಗೆಯುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಶ್ರೀ ಹಾಸನಾಂಬ ಡಾಟ್ ಕಾಮ್ (srihassanambe.com) ವೆಬ್ಸೈಟ್ ಹೆಸರು. ಇದರಲ್ಲಿ ಹಾಸನಾಂಬೆ ಉತ್ಸವದ ಮಾಹಿತಿಯನ್ನು ನೀಡಲಾಗಿದೆ. ಇಲ್ಲಿಗೆ ಬರುವ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಲ್ಲಿ ಮಾಹಿತಿಯನ್ನು ಕೊಡಲಾಗಿದೆ ಎಂದರು.
ಈ ಅಂರ್ತಜಾಲ ತಾಣದಲ್ಲಿ ಹಾಸನದಲ್ಲಿರುವ ಕುದುರಗುಂಡಿ ಶಾಸನ ಇದ್ದು, ಈ ಬಗ್ಗೆ ಮಾಹಿತಿಯನ್ನು ಅಳವಡಿಸಲಾಗಿದೆ. ಹಾಸನಾಂಬೆ ದೇವಾಲಯದ ಇತಿಹಾಸವನ್ನು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ತಿಳಿಸಲಾಗಿದೆ. ಹಾಸನಾಂಬೆ ದೇವಾಲಯದ ಬಾಗಿಲನ್ನು ಇದೆ ತಿಂಗಳು 17ರ ಗುರುವಾರ ಮದ್ಯಾಹ್ನ ತೆಗೆದು 13 ದಿವಸಗಳ ಕಾಲ ಸಾರ್ವಜನಿಕರ ದರ್ಶನದ ವೇಳ ಪಟ್ಟಿ ಇತ್ಯಾದಿಗಳನ್ನು ತಿಳಿಸಲಾಗಿದೆ.
ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಏನೇನು ಸೌಲಭ್ಯಗಳು ದೊರಯುತ್ತವೆ. ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಪ್ರಸಾದದ ವ್ಯವಸ್ಥೆ ಬಗ್ಗೆ ಮಾಹಿತಿ, ಹೊರಗಿನಿಂದ ಬರುವ ಭಕ್ತಾಧಿಗಳಿಗೆ ಹಾಸನ ಸುತ್ತ ಮುತ್ತ ಯಾವ ಪ್ರೇಕ್ಷಣಿಯ ಸ್ಥಳಗಳಿವೆ ಇದನ್ನು ಕೂಡ ವೆಬ್ಸೈಟ್ನಲ್ಲಿ ಮಾಹಿತಿ ಕೊಡಲಾಗಿದೆ.
ಒಟ್ಟಾರೆ ಹಾಸನಾಂಬೆ ದೇವಾಲಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡುವ ಅಂತರ್ಜಾಲ ತಾಣವಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.