ETV Bharat / state

ಹಾಸನಾಂಬೆ ವಾರ್ಷಿಕ ದರ್ಶನೋತ್ಸವಕ್ಕೆ ತೆರೆ: ಇಂದು ಮಧ್ಯಾಹ್ನ 12ಕ್ಕೆ ದೇಗುಲದ ಬಾಗಿಲು ಬಂದ್‌ - 2022ರ ದರ್ಶನ ಉತ್ಸವ

ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನ ಜಿಲ್ಲೆಯ ಹಾಸನಾಂಬೆ ದೇವಾಯಲಯದ ಬಾಗಿಲನ್ನು ಇಂದು ಮಧ್ಯಾಹ್ನ 12 ರ ನಂತರ ಮುಚ್ಚಲಾಗುವುದು.

hasanamba
ಹಾಸನಾಂಬೆ
author img

By

Published : Oct 27, 2022, 11:13 AM IST

Updated : Oct 27, 2022, 3:29 PM IST

ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ದೇವಾಲಯದ ಬಾಗಿಲನ್ನು ಅಕ್ಟೋಬರ್ 13 ರಿಂದ ತೆರೆಯಲಾಗಿದ್ದು, ಸಾಗರೋಪಾದಿಯಲ್ಲಿ ಭಕ್ತರ ಸಂಖ್ಯೆ ಹರಿದು ಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತನಕ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು.

ಆಶ್ವಿಜ ಮಾಸದ ಮೊದಲ ಗುರುವಾರ ಪ್ರತಿವರ್ಷ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತೆ. ಬಲಿಪಾಡ್ಯಮಿಯ ಮಾರನೆಯ ದಿನ ದೇವಿಯ ಬಾಗಿಲನ್ನ ಮುಚ್ಚಲಾಗುತ್ತದೆ. ಇಂದು ಮಧ್ಯಾಹ್ನ ಹಾಸನಾಂಬೆ ಬಾಗಿಲು ಹಾಕುವುದರಿಂದ ಬೆಳಗ್ಗೆ 10 ಗಂಟೆಯ ತನಕ ದೇವಿ ದರ್ಶನ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿತ್ತು. ನಿನ್ನೆ ಸಂಜೆ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಕೆಂಡೋತ್ಸವ ಇದ್ದ ಕಾರಣ ಸಂಜೆ ನಾಲ್ಕು ಗಂಟೆಗೆ ಬಾಗಿಲನ್ನು ಮುಚ್ಚಲಾಗಿತ್ತು. ಹೀಗಾಗಿ, ದೇವಿ ದರ್ಶನಕ್ಕೆ ಬಂದ ಭಕ್ತಾದಿಗಳು ದರ್ಶನ ಸಿಗದೇ ಕಾದು ಕಾದು ಸುಸ್ತದರು.

ಇದನ್ನೂ ಓದಿ: ಪರಸ್ಪರ ವಾಗ್ದಾಳಿ ಬಳಿಕ ಒಟ್ಟಿಗೆ ಹಾಸನಾಂಬೆ ದರ್ಶನ ಪಡೆದ ಶಾಸಕರಾದ ಪ್ರೀತಂ ಗೌಡ, ಎಲ್.ನಾಗೇಂದ್ರ

ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 10 ಗಂಟೆಯ ತನಕ ಭಕ್ತಾದಿಗಳ ಕೋರಿಕೆ ಮೇಲೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು 10:00 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ತೆರೆ ಬಿದ್ದ ನಂತರ ದೇವಿಗೆ ಹಾಕಲಾಗಿರುವ ಒಡವೆ ತೆಗೆಯುವುದು, ಅಲಂಕಾರ ವಿಸರ್ಜನೆ ಸೇರಿದಂತೆ ಇತರ ಚಟುವಟಿಕೆ ಮಾಡಿದ ಬಳಿಕ ಮಧ್ಯಾಹ್ನ 12 ರ ನಂತ್ರ ಸಂಪೂರ್ಣವಾಗಿ ಈ ವರ್ಷದ ದರ್ಶನೊತ್ಸವಕ್ಕೆ ತೆರೆ ಬೀಳಲಿದೆ.

ಹಾಸನಾಂಬೆ ವಾರ್ಷಿಕ ದರ್ಶನೋತ್ಸವಕ್ಕೆ ತೆರೆ

ಇದನ್ನೂ ಓದಿ: ಹಾಸನಾಂಬೆ ದರ್ಶನ ವಿಚಾರ: ಶಾಸಕ ನಾಗೇಂದ್ರ ಬಳಿ ಬಹಿರಂಗ ಕ್ಷಮೆ ಕೇಳಿದ ಪ್ರೀತಂ ಗೌಡ

ಅವಧಿ ವಿಸ್ತರಣೆ ಮಾಡಿದ ಕಾರಣ ದೇವಿ ದರ್ಶನ ಪಡೆಯಲು ರಾತ್ರಿಯಿಂದ ಬೆಳಗಿನ ಜಾವದ ತನಕ ಸಾಗರೋಪಾದಿಯಲ್ಲಿ ಭಕ್ತಾದಿಗಳ ದಂಡೇ ಹೊರಗೆ ಹರಿದು ಬಂದಿತ್ತು. ಈ ವೇಳೆ ಭಕ್ತನೊಬ್ಬ ಕುಸಿದು ಬಿದ್ದ ಘಟನೆ ನಡೆಯಿತು.

2022ರ ದರ್ಶನ ಉತ್ಸವಕ್ಕೆ ಸುಮಾರು 6 ಲಕ್ಷಕ್ಕೂ ಅಧಿಕ ಮಂದಿ ಭಕ್ತ ಗಣ ಆಗಮಿಸಿ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಜೊತೆಗೆ ಈ ವರ್ಷ 15 ದಿನಗಳ ಕಾಲ ದೇವಿ ದರ್ಶನ ನೀಡಿದ್ದು ಮತ್ತೊಂದು ವಿಶೇಷ.

Last Updated : Oct 27, 2022, 3:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.