ETV Bharat / state

ಈ ಬಾರಿ ಆನ್​​ಲೈನ್​​​ನಲ್ಲಿಯೇ ಹಾಸನಾಂಬೆಯ ದರ್ಶನ: ಸಚಿವ ಕೆ. ಗೋಪಾಲಯ್ಯ ಮಾಹಿತಿ

ಈ ಬಾರಿ ನವೆಂಬರ್ 5 ರಿಂದ 16ರ ವರೆಗೆ ದೇವಿ ದರ್ಶನಕ್ಕೆ ದಿನಾಂಕ ನಿಗದಿಯಾಗಿದೆ. ಬಾಗಿಲು ತೆಗೆಯುವ ಮೊದಲ ದಿನದ ವೀಕ್ಷಣೆಯನ್ನು ಹಾಸನ ನಗರದ ಹಲವೆಡೆ ಎಲ್ಇಡಿ ಪರದೆ ಮೂಲಕ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

k-gopalaiah
ಸಚಿವ ಕೆ ಗೋಪಾಲಯ್ಯ
author img

By

Published : Oct 8, 2020, 7:42 PM IST

ಹಾಸನ: ಕೊರೊನಾ ಹೆಚ್ಚಾಗಿರುವುದರಿಂದ ಈ ವರ್ಷ ಸಾರ್ವಜನಿಕರಿಗೆ ಹಾಸನಾಂಬೆಯ ನೇರ ದರ್ಶನದ ಭಾಗ್ಯವಿಲ್ಲ. ಎಲ್​​​​​ಇಡಿ ಪರದೆ ಹಾಕಿ ದೈಹಿಕ ಅಂತರದೊಂದಿಗೆ ಆನ್​​​​ಲೈನ್​ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಹಾಸನಾಂಬ ಜಾತ್ರೆಯ ಕುರಿತು ಸಚಿವ ಕೆ ಗೋಪಾಲಯ್ಯ ಮಾಹಿತಿ

ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಹಾಸನಾಂಬ ಜಾತ್ರೆಯ ಕುರಿತು ಅಧಿಕಾರಿಗಳೊಂದಿಗೆ ಚಿರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಹಾಸನಾಂಬೆಯ ದರ್ಶನಕ್ಕೆ ಈ ಬಾರಿ ಕೊರೊನಾ ಅಡ್ಡಿ ಬಂದಿರುವ ಹಿನ್ನೆಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದರು.

ಈ ಬಾರಿ ನವೆಂಬರ್ 5 ರಿಂದ 16ರ ವರೆಗೆ ದೇವಿ ದರ್ಶನಕ್ಕೆ ದಿನಾಂಕ ನಿಗದಿಯಾಗಿದೆ. ಬಾಗಿಲು ತೆಗೆಯುವ ಮೊದಲ ದಿನದ ವೀಕ್ಷಣೆಯನ್ನು ಹಾಸನ ನಗರದ ಹಲವೆಡೆ ಎಲ್ಇಡಿ ಪರದೆ ಹಾಕಿ ದೈಹಿಕ ಅಂತರದೊಂದಿಗೆ ಆನ್​​ಲೈನ್​ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ವರ್ಷ ಹಾಸನಾಂಬೆ ದರ್ಶನಕ್ಕೆ ನೇರ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಮೊದಲ ದಿನ ಬಾಗಿಲು ತೆಗೆಯೋ ವೇಳೆ ಸಿಎಂರನ್ನು ಉದ್ಘಾಟನೆಗೆ ಆಹ್ವಾನಿಸುತ್ತೇವೆ. ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಕೊಡಲಾಗುವುದು ಎಂದರು.

ಸಭೆಯಲ್ಲಿ ಶಾಸಕ ಪ್ರೀತಮ್ ಜೆ.ಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಇತರರು ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.