ETV Bharat / state

ಪ್ರಸಿದ್ಧ ಹಾಸನಾಂಬೆ ದೇವಿ ಜಾತ್ರೆ ಅ.17ರಿಂದ ಆರಂಭ..!

ಅಶ್ವಯುಜ ಮಾಸದ ಹುಣ್ಣಿಮೆಯ ಬಳಿಕ ಬರುವ ಮೊದಲ ಗುರುವಾರ ಬಾಗಿಲು ತೆರೆದು, ಬಲಿಪಾಡ್ಯಮಿ ಹಬ್ಬದ ಮೂರನೆಯ ದಿನ ದೇಗುಲದ ಬಾಗಿಲು ಮುಚ್ಚಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಸಿದ್ಧ ಹಾಸನಾಂಬೆ ದೇವಿ ಜಾತ್ರೆ
author img

By

Published : Sep 19, 2019, 4:13 AM IST

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್​​​​ 17ರಿಂದ 29ರ ವರೆಗೆ ನಡೆಯಲಿದೆ.

ಅಕ್ಟೋಬರ್​​ 17ರಂದು ಮಧ್ಯಾಹ್ನ 12.30ಕ್ಕೆ ಹಾಸನಾಂಬೆ ದೇವಾಲಯ ಬಾಗಿಲು ತೆಗೆದು, 29ರಂದು 12 ಗಂಟೆ ನಂತರ ಬಾಗಿಲು ಮುಚ್ಚಲಾಗುತ್ತದೆ.

ಅಶ್ವಯುಜ ಮಾಸದ ಹುಣ್ಣಿಮೆಯ ಬಳಿಕ ಬರುವ ಮೊದಲ ಗುರುವಾರ ಬಾಗಿಲು ತೆರೆದು, ಬಲಿಪಾಡ್ಯಮಿ ಹಬ್ಬದ ಮೂರನೆಯ ದಿನ ದೇಗುಲದ ಬಾಗಿಲು ಮುಚ್ಚಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆಗಸ್ಟ್ 18ರಿಂದ ಪ್ರತಿದಿನ ದೇವಿಗೆ ಮಧ್ಯಾಹ್ನ 1 ರಿಂದ 3ರವರೆಗೆ ನೈವೇದ್ಯ ಪೂಜಾ ಸಮಯ ಇರುವುದರಿಂದ ಭಕ್ತರಿಗೆ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ 11:30 ರವರೆಗೆ ದರ್ಶನ ಇದೆ 23, 25 ಮತ್ತು 27ರಂದು ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ದೇವಿಯ ವಿಶೇಷ ಪೂಜೆ ಇರಲಿದೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಆರ್ ಗಿರೀಶ್

ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ, ದೇವಾಲಯದ ಸಂಪರ್ಕ, ರಸ್ತೆ ದುರಸ್ತಿ, ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡ್ ಅಳವಡಿಕೆ, ಆರೋಗ್ಯ ನೈರ್ಮಲ್ಯ ಮತ್ತು ಶೌಚಾಲಯಗಳ ಬಗ್ಗೆ ತಯಾರಿ ಮಾಡಲಾಗುತ್ತದೆ. ಜನಪ್ರತಿನಿಧಿಗಳಿಗೆ ಆಹ್ವಾನ ನೀಡುವುದರ ಜೊತೆಗೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಸುಗಮ ದರ್ಶನಕ್ಕೆ ಎರಡು ಸಾಲು ಮಾಡಲಾಗುವುದು. ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಪ್ರವೇಶ ದ್ವಾರ, ದೇವಾಲಯದ ಹಿಂಭಾಗ ವಿಶೇಷ ದರ್ಶನ ಹಾಗೂ ಟಿಕೆಟ್ ಕೌಂಟರ್ ಹತ್ತಿರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ‌. ಧರ್ಮ ದರ್ಶನ ಹಾಗೂ ವಿಶೇಷ ದರ್ಶನಕ್ಕಾಗಿ ಕ್ರಮವಾಗಿ 300, 1000 ನಿಗದಿ ಮಾಡಲಾಗಿದ್ದು, ಧರ್ಮದರ್ಶನ ಟಿಕೆಟ್ ಜೊತೆ 2 ಲಾಡು, ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 4 ಲಾಡು ಪ್ರಸಾದ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ನುಡಿದರು.

ದೇವಾಲಯದ ಬಾಗಿಲು ತೆರೆಯುವ ದಿನ ಜಿಲ್ಲೆಯ ವಿವಿಧ ಪ್ರಕಾರಗಳ ಕಲಾ ತಂಡಗಳನ್ನು ಕರೆಸಿ ಸಾಂಪ್ರದಾಯಿಕ ಮೆರವಣಿಗೆ ಉತ್ಸವ ನಡೆಸಲಾಗುವುದು. 29ರ ಮಧ್ಯಾಹ್ನ 2ರಿಂದ ರಾತ್ರಿಯವರೆಗೆ ವಿವಿಧ ಪ್ರಕಾರದ ಕಲಾವಿದರಿಂದ ಹಾಸನಾಂಬ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ ಎಂದರು.

ಬಗೆಹರಿಯದ ಅರ್ಚಕರ ವಿವಾದ :
ಹಾಸನಾಂಬ ದೇವಿ ಪೂಜೆ ಮಾಡುವ ವಿಚಾರಕ್ಕೆ ಅರ್ಚಕ ಕುಟುಂಬದ ಸಹೋದರರ ನಡುವಿನ ವಿವಾದ ಬಗೆಹರಿದಿದೆ. ಶಾಸಕ ಪ್ರೀತಂ ಗೌಡ ಸಮ್ಮುಖದಲ್ಲಿ ಸಹೋದರರ ಜೊತೆ ಚರ್ಚೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಸೂಚಿಸಲಾಗಿದೆ. ಇಬ್ಬರೂ ಪೂಜೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಿಂಗಳ ಅಂತ್ಯಕ್ಕೆ ರಸ್ತೆ ದುರಸ್ತಿ :
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ದುರಸ್ತಿ ಗುಂಡಿ ಮುಚ್ಚುವ ಕಾರ್ಯ ಕೆಲಸವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ. ಮಳೆ ಕಾರಣಕ್ಕೆ ಕೆಲಸ ಸ್ವಲ್ಪ ವಿಳಂಬವಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Intro:ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಆಗಸ್ಟ್ 17 ರಿಂದ 29ರ ವರೆಗೆ ನಡೆಯಲಿದೆ.

ಆಗಸ್ಟ್ 17ರಂದು ಮಧ್ಯಾಹ್ನ 12 ಮೂವತ್ತಕ್ಕೆ ಹಾಸನಾಂಬೆ ದೇವಾಲಯ ಬಾಗಿಲು ತೆಗೆದು, 29ರಂದು 12 ರ ನಂತರ ಬಾಗಿಲು ಮುಚ್ಚಲಾಗುತ್ತದೆ. ಆಶ್ವಯುಜ ಮಾಸದ ಹುಣ್ಣಿಮೆಯ ಬಳಿಕ ಬರುವ ಮೊದಲ ಗುರುವಾರ ಭಾಗಿಲು ತೆರೆದು, ಬಲಿಪಾಡ್ಯಮಿ ಹಬ್ಬದ ಮೂರನೆಯ ದಿನ ದೇಗುಲದ ಬಾಗಿಲು ಮುಚ್ಚಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಗಸ್ಟ್ 18ರಿಂದ ಪ್ರತಿದಿನ ದೇವಿಗೆ ಮಧ್ಯಾಹ್ನ 1 ರಿಂದ 3 ರವರೆಗೆ ನೈವಿದ್ಯ ಪೂಜಾ ಸಮಯ ಇರುವುದರಿಂದ ಭಕ್ತರಿಗೆ ದರ್ಶನ ಇರುವುದಿಲ್ಲ. ಉಳಿದ ಅವಧಿಯಲ್ಲಿ 11:30 ರವರೆಗೆ ದರ್ಶನ ಇದೆ 23 25 ಮತ್ತು 27ರಂದು ರಾತ್ರಿ 11 ರಿಂದ 6:00 ವರೆಗೆ ದೇವಿಯ ವಿಶೇಷ ಪೂಜೆ ಇರುತ್ತದೆ ಎಂದರು.

ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ, ದೇವಾಲಯದ ಸಂಪರ್ಕ, ರಸ್ತೆ ದುರಸ್ತಿ, ಪೊಲೀಸ್ ಬಂದೋಬಸ್ತ್, ಬ್ಯಾರಿಕೇಟ್ ಅಳವಡಿಕೆ, ಆರೋಗ್ಯ ನೈರ್ಮಲ್ಯ ಮತ್ತು ಶೌಚಾಲಯಗಳ ಬಗ್ಗೆ ತಯಾರಿ ಮಾಡಲಾಗುತ್ತದೆ. ಜನಪ್ರತಿನಿಧಿಗಳಿಗೆ ಆಹ್ವಾನ ನೀಡುವುದರ ಜೊತೆಗೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಸುಗಮ ದರ್ಶನಕ್ಕೆ ಎರಡು ಸಾಲು ಮಾಡಲಾಗುವುದು. ಸರದಿ ಸಾಲಿನಲ್ಲಿ ಬರುವ ಭಕ್ತರಿಗೆ ಪ್ರವೇಶ ದ್ವಾರ, ದೇವಾಲಯದ ಹಿಂಭಾಗ ವಿಶೇಷ ದರ್ಶನ ಹಾಗೂ ಟಿಕೆಟ್ ಕೌಂಟರ್ ಹತ್ತಿರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ‌. ಧರ್ಮ ದರ್ಶನ ಹಾಗೂ ವಿಶೇಷ ದರ್ಶನಕ್ಕಾಗಿ ಕ್ರಮವಾಗಿ 300, 1000 ನಿಗಧಿ ಮಾಡಲಾಗಿದ್ದು, ಧರ್ಮದರ್ಶನ ಟಿಕೆಟ್ ಜೊತೆ 2 ಲಾಡು, ವಿಶೇಷ ದರ್ಶನ ಟಿಕೆಟ್ ಪಡೆದವರಿಗೆ 4 ಲಾಡು ಪ್ರಸಾದ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ನುಡಿದರು.

ಭಕ್ತರಿಗೆ ದರ್ಶನದ ನಂತರ ಪ್ರಸಾದ ವಿತರಣೆ ವ್ಯವಸ್ಥೆಯನ್ನು ಚೆನ್ನಕೇಶವ ದೇವಾಲಯದ ಸಮುದಾಯ ಭವನದಲ್ಲಿ ಮಾಡಲಾಗುತ್ತದೆ. ಮಹೋತ್ಸವದ ವೇಳೆ ಎಲ್ಇಡಿ ಪರದೆ, ಆಯಾಕಟ್ಟಿನ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ವಾಹನ ನಿಲುಗಡೆಗೆ ನಗರಸಭೆ ಅವರಣ ಮತ್ತು ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

ದೇವಾಲಯದ ಬಾಗಿಲು ತೆರೆಯುವ ದಿನ ಜಿಲ್ಲೆಯ ವಿವಿಧ ಪ್ರಕಾರ ಗಳ ಕಲಾ ತಂಡಗಳನ್ನು ಕರೆಸಿ ಸಾಂಪ್ರದಾಯಿಕ ಮೆರವಣಿಗೆ ಉತ್ಸವ ನಡೆಸಲಾಗುವುದು. 29ರ ಮಧ್ಯಾಹ್ನ 2ರಿಂದ ರಾತ್ರಿಯವರೆಗೆ ವಿವಿಧ ಪ್ರಕಾರದ ಕಲಾವಿದರಿಂದ ಹಾಸನಾಂಬ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ ಎಂದರು.

ಬಗೆಹರಿಯದ ಅರ್ಚಕರ ವಿವಾದ :
ಹಾಸನಾಂಬ ದೇವಿ ಪೂಜೆ ಮಾಡುವ ವಿಚಾರಕ್ಕೆ ಅರ್ಚಕ ಕುಟುಂಬದ ಸಹೋದರರ ನಡುವಿನ ವಿವಾದ ಬಗೆಹರಿದಿದೆ. ಶಾಸಕ ಪ್ರೀತಂ ಗೌಡ ಸಮ್ಮುಖದಲ್ಲಿ ಸಹೋದರರ ಜೊತೆ ಚರ್ಚೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಸೂಚಿಸಲಾಗಿದೆ. ಇಬ್ಬರೂ ಪೂಜೆ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಗಿರೀಶ್ ತಿಳಿಸಿದರು.

ತಿಂಗಳ ಅಂತ್ಯಕ್ಕೆ ರಸ್ತೆ ದುರಸ್ತಿ :
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ದುರಸ್ತಿ ಗುಂಡಿ ಮುಚ್ಚುವ ಕಾರ್ಯ ಕೆಲಸವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ. ಮಳೆ ಕಾರಣಕ್ಕೆ ಕೆಲಸ ಸ್ವಲ್ಪ ವಿಳಂಬವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಪ್ರಭಾವಿ ಎಚ್ಚೆನ್ ನಾಗರಾಜ್ ಮುಜರಾಯಿ ತಾಶೀಲ್ದಾರ್ ಶಾರದಾಂಬ ಹಾಜರಿದ್ದರು.

ಬೈಟ್ 1 : ಆರ್ ಗಿರೀಶ್, ಜಿಲ್ಲಾಧಿಕಾರಿ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.