ETV Bharat / state

ಹಾಸನದಲ್ಲಿ ರೌಡಿಶೀಟರ್​ ಬರ್ಬರ ಹತ್ಯೆ: ಹಣ, ಹಳೆ ದ್ವೇಷ ಶಂಕೆ - Hasan latest crime news

ನಗರದ ಶಾಂತಿಗ್ರಾಮ ಟೋಲ್ ಗೇಟ್ ಸಮೀಪವಿರುವ ಖಾಸಗಿ ಕೆಫೆ ಹಿಂದೆ ದುಷ್ಕರ್ಮಿಗಳು ರೌಡಿಶೀಟರ್​ ಒಬ್ಬನನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

rowdy sheeter murder
ಲೋಕಿ ಅಲಿಯಾಸ್​ ಕೆಂಚ
author img

By

Published : Dec 27, 2019, 9:54 PM IST

Updated : Dec 27, 2019, 11:01 PM IST

ಹಾಸನ/ಶಾಂತಿಗ್ರಾಮ: ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಾಂತಿಗ್ರಾಮ ಟೋಲ್ ಬಳಿ ನಡೆದಿದೆ.

ರೌಡಿಶೀಟರ್​ನ ಬರ್ಬರ ಕೊಲೆ

ಜಿಲ್ಲೆಯ ವಲ್ಲಭಾಯಿ ನಗರದ ನಿವಾಸಿ ಲೋಕಿ ಅಲಿಯಾಸ್​ ಕೆಂಚ (43) ಕೊಲೆಯಾದ ರೌಡಿಶೀಟರ್ ಎನ್ನಲಾಗಿದೆ. ಇಂದು ಸಂಜೆ 4 ಗಂಟೆಗೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಶಾಂತಿಗ್ರಾಮ ಟೋಲ್ ಗೇಟ್ ಸಮೀಪವಿರುವ ಖಾಸಗಿ ಕೆಫೆಯೊಂದರ ಹಿಂಭಾಗಕ್ಕೆ ಈತನನ್ನ ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಗೆ ರವಾನಿಸಲಾಗಿದ್ದು, ಈತನ ಮೇಲೆ ಹಾಸನದ ಪೆನ್ಷನ್ ಮೊಹಲ್ಲ, ಬಡಾವಣೆ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ, ಅತ್ಯಾಚಾರ, ದರೋಡೆ, ಕೊಲೆ ಮುಂತಾದ ಹಲವು ಪ್ರಕರಣ ದಾಖಲಾಗಿವೆ. ಇತ್ತೀಚೆಗಷ್ಟೆ ಜೈಲಿನಿಂದ ಬೇಲ್ ಪಡೆದು ಹೊರಬಂದಿದ್ದ ಎನ್ನಲಾಗಿದೆ.

ಇನ್ನು ಹಾಸನ ತಾಲೂಕಿನ ಸೌದ್ರಳ್ಳಿ ಗೂಂಡಾ ಗ್ಯಾಂಗ್​​ನವರೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಈತ, ಹಣ ಮತ್ತು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಹಾಸನ ನಗರ ಠಾಣೆಯಲ್ಲಿ ಮೃತನ ಸಂಬಂಧಿಕರು ದೂರು ದಾಖಲು ಮಾಡಿದ್ದಾರೆ.

Intro:ಹಾಸನ/ಶಾಂತಿಗ್ರಾಮ: ರೌಡಿ ಶೀಟರ್ ಓರ್ವನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದ ಶಾಂತಿಗ್ರಾಮ ಟೋಲ್ ಬಳಿ ನಡೆದಿದೆ.

ಲೋಕಿ@ಕೆಂಚ (43) ಕೊಲೆಯಾದ ರೌಡಿ ಶೀಟರ್ ಆಗಿದ್ದು, ಹಾಸನದ ವಲ್ಲಭಾಯಿ ನಗರದ ನಿವಾಸಿ ಎನ್ನಲಾಗಿದೆ. ಆತನ ಸಹಚರರೇ ಕೊಲೆ ಮಾಡಿರಬಹುದೆಂಬ ಅನುಮಾನವನ್ನ ಪೊಲೀಸರು ವ್ಯಕ್ತಪಡಿಸುತ್ತಿದ್ದು ಇಂದು ಸಂಜೆ 4 ಗಂಟೆಯಲ್ಲಿ ಕೆ.ಎ.40- 7800 ಎಂಬ ಆಟೋದಲ್ಲಿ ಬಂದ ದುಷ್ಕರ್ಮಿಗಳು ಶಾಂತಿಗ್ರಾಮ ಟೋಲ್ ಗೇಟ್ ಬಳಿಯ ಸಮೀಪವಿರುವ ಖಾಸಗಿ ಕೆಫೆಯೊಂದರ ಹಿಂಭಾಗಕ್ಕೆ ಈತನನ್ನ ಕರೆದೊಯ್ದು ಮಾರಾಕಾಸ್ತ್ರಗಳಿಂದ ಕೊಚ್ಚಿಕೊಲೆಗೈದು ಪರಾರಿಯಾಗಿದ್ದಾರೆ.

ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಅಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನು ಈತನ ಮೇಲೆ ಹಾಸನದ ಪೆನ್ಷನ್ ಮೊಹಲ್ಲ, ಬಡಾವಣೆ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ, ಅತ್ಯಾಚಾರ, ದರೊಡೆ, ಕೊಲೆ ಮುಂತಾದ ಹಲವು ಪ್ರಕರಣದ ದಾಖಲಾಗಿದ್ದು, ಇತ್ತೀಚೆಗಷ್ಟೆ ಜೈಲಿನಿಂದ ಬೇಲ್ ಪಡೆದು ಹೊರಬಂದಿದ್ದ ಎನ್ನಲಾಗಿದೆ. ಇನ್ನು ಹಾಸನ ತಾಲೂಕಿನ ಸೌದ್ರಳ್ಳಿ ಗಂಡು ಗ್ಯಾಂಗ್ ನವರೊಂದಿಗೆ ಒಡನಾಟ ಇಟ್ಟುಕೊಂಡಿದ್ದು, ಹಣ ಮತ್ತು ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆಯಾಗಿರಬಹುದು ಎನ್ನಲಾಗಿದೆ

ಇನ್ನು ಈತನ ಸ್ನೇಹಿತರೊಂದಿಗೆ ಆಟೋವೊಂದ ರಲ್ಲಿ ಬಂದು ಕೆಫೆ ಹಿಂಭಾಗ ಮಧ್ಯಪಾನ ಸೇವಿಸುತ್ತಿರುವಾಗ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದ ಹಿನ್ನಲೆಯಲ್ಲಿ ಕೊಲೆಯಾಗಿದ್ದು, ಕೊಲೆಯಾದ ಬಳಿಕ ದನಗಾಯಿಯೋರ್ವ ಇದನ್ನ ನೋಡಿ ತಕ್ಷಣ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾನೆ.

ಇನ್ನು ಈ ಸಂಬಂಧ ಸಂಬಂಧಿಕರು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Dec 27, 2019, 11:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.