ETV Bharat / state

ಅಶೋಕ್​​ ಲೈಲ್ಯಾಂಡ್​ ಗೂಡ್ಸ್​​ ವಾಹನಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಖದೀಮರ ಬಂಧನ

ಹಾಸನ ಜಿಲ್ಲೆಯ ಹಳೇಬೀಡು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಶೋಕ್​​ ಲೈಲ್ಯಾಂಡ್​ ಗೂಡ್ಸ್​​ ವಾಹನಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಕಳ್ಳರ ಗುಂಪನ್ನು ಸೆರೆ ಹಿಡಿದಿದ್ದಾರೆ.

Halebidu police arrested goods vehicle thieves
ಗೂಡ್ಸ್​ ವಾಹನ ಕಳ್ಳರ ಬಂಧನ
author img

By

Published : Jul 28, 2021, 5:33 PM IST

ಹಾಸನ: ಅಶೋಕ್​​ ಲೈಲ್ಯಾಂಡ್ ಕಂಪನಿಯ​ ಗೂಡ್ಸ್​​ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್​​ ಕಳ್ಳರ ಗುಂಪಿನ ಸದಸ್ಯರನ್ನು ಹಾಸನ ಜಿಲ್ಲೆಯ ಹಳೇಬೀಡು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೂಡ್ಸ್​​ ವಾಹನಗಳನ್ನು ಕಳ್ಳತನ ಮಾಡ್ತಿದ್ದ ಖದೀಮರ ಬಂಧನ

ಶಿವಮೊಗ್ಗದ ಸೊರಬ ಮೂಲದ​​ ಶಾಹಿದ್, ಶಿವಮೊಗ್ಗದ ಹಿದಾಯದ್, ಸೊರಬಾದ ಅಬ್ದುಲ್, ಕಲಬುರಗಿ ಮೂಲದ ಅಬ್ದುಲ್, ಕಲಬುರಗಿ ಖಾಜಾ ಮಹಮದ್, ಮಂಗಳೂರು ಮೂಲದ ಭಾಸ್ಕರ್ ಪೂಜಾರಿ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಕೋಟಿಗೂ ಅಧಿಕ ಬೆಲೆ ಬಾಳುವ 2 ಲಾರಿ ಸೇರಿದಂತೆ 10 ಅಶೋಕ್ ಲೈಲ್ಯಾಂಡ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮಹೀಂದ್ರಾ ಪಿಕ್​​ಅಪ್ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಸೀಜ್​ ಮಾಡಲಾಗಿದೆ.

Halebidu police
ಆರೋಪಿಗಳ ಜೊತೆಗೆ ಹಳೇಬೀಡು ಪೊಲೀಸರು

ಪ್ರಕರಣದ ಪ್ರಮುಖ ಆರೋಪಿ ಶಾಹಿದ್ ಐಟಿಐ ವ್ಯಾಸಂಗ ಮಾಡಿದ್ದು, ಗುಂಪು ಕಟ್ಟಿಕೊಂಡು ಕಳ್ಳತನ ಮಾಡಲು ಮುಂದಾಗಿದ್ದರು. ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನಗಳ ಲಾಕ್​ ಅನ್ನು ಸುಲಭವಾಗಿ ಓಪನ್ ಮಾಡಿ ಕದಿಯಬಹುದು ಎಂಬ ಕಾರಣಕ್ಕೆ ಇವುಗಳನ್ನು ಟಾರ್ಗೆಟ್ ಮಾಡಿ ರಾತ್ರಿ ಸಮಯದಲ್ಲಿ ವಾಹನಗಳ ರಿಪೇರಿ ಮಾಡೋ ಸೋಗಿನಲ್ಲಿ ಬಂದು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು.

ವಾಹನ ಕಳೆದುಕೊಂಡ ಮಾಲೀಕರೊಬ್ಬರು ಹಳೇಬೀಡು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆ ಕೈಗೊಂಡ ಪೊಲೀಸರು ಖದೀಮರನ್ನು ಮಟ್ಟ ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹಾಡಹಗಲೇ ಹರಿದ ನೆತ್ತರು.. ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಬರ್ಬರ ಕೊಲೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.