ETV Bharat / state

ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡೋಣ: ಶಾಸಕ ಪ್ರೀತಂ ಜೆ.ಗೌಡ - ಹಾಸನ

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ. ಇಲ್ಲಿ ಸರ್ವರೂ ಸಮಾನರು ಹಾಗೂ ಸಹೋದರತೆಯ ವಾತಾವರಣ ಇದೆ. ಆ ಉತ್ತಮ ಪರಿಸರವನ್ನು ಹಾಳು ಮಾಡದಂತೆ ಕಾಪಾಡೋಣ ಎಂದು ಶಾಸಕ ಪ್ರೀತಂ ಜೆ.ಗೌಡ ಮನವಿ ಮಾಡಿದರು.

ಶಾಸಕ ಪ್ರೀತಂ ಜೆ.ಗೌಡ
author img

By

Published : Sep 3, 2019, 1:16 AM IST

Updated : Sep 3, 2019, 2:45 AM IST

ಹಾಸನ: ಧಾರ್ಮಿಕ ದಿನಗಳಲ್ಲಿ ಎಲ್ಲಾ ಸಮುದಾಯದವರು ಶಾಂತಿ ಸೌಹಾರ್ದತೆ ಕಾಪಾಡೋಣ ಎಂದು ಶಾಸಕ ಪ್ರೀತಂ ಜೆ.ಗೌಡ ಕರೆ ನೀಡಿದ್ರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಗಣೇಶ ಮತ್ತು ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ. ಇಲ್ಲಿ ಸರ್ವರೂ ಸಮಾನರು ಹಾಗೂ ಸಹೋದರತೆಯ ವಾತಾವರಣ ಇದೆ. ಆ ಉತ್ತಮ ಪರಿಸರವನ್ನು ಹಾಳು ಮಾಡದಂತೆ ಕಾಪಾಡೋಣ ಎಂದು ಮನವಿ ಮಾಡಿದರು.

ಶಾಸಕ ಪ್ರೀತಂ ಜೆ.ಗೌಡ

ಮುಂದಿನ ಧಾರ್ಮಿಕ ಆಚಣೆಗಳ ಸಂಬಂಧ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದು, ಆಯಾ ವ್ಯಾಪ್ತಿಯ ಎಸ್ಐ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಈ ಬಗ್ಗೆ ಕ್ರಮವಹಿಸಲಿದ್ದಾರೆ. ಶಾಂತಿ ಸುವ್ಯವಸ್ಥೆಯುನ್ನು ಕಾಪಾಡಲು ಅಧಿಕಾರಿಗಳೊಂದಿಗೆ ಎಲ್ಲರೂ ಕೈ ಜೋಡಿಸೋಣ ಎಂದರು.

Intro:ಹಾಸನ: ಧಾರ್ಮಿಕ ದಿನಗಳಲ್ಲಿ ಎಲ್ಲಾ ಸಮುದಾಯದವರು ಶಾಂತಿ ಸೌಹಾರ್ಧತೆಯನ್ನು ಕಾಪಾಡೋಣ ಎಂದು ಶಾಸಕರಾದ ಪ್ರೀತಂ ಜೆ.ಗೌಡ ಕರೆ ನೀಡಿದ್ರು.
Body:ನಗರದ ಅಂಬೇಡ್ಕರ್ ಭವನದಲ್ಲಿಂದು ನಡೆದ ಗಣೇಶ ಮತ್ತು ಮೊಹರಂ ಹಬ್ಬದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮುಗಲಭೆಗಳು ನಡೆದಿಲ್ಲ ಇಲ್ಲಿ ಸರ್ವರೂ ಸಮಾನರಂತೆ ಸಹೋದರತೆಯ ವಾತಾವರಣ ಇದೆ. ಆ ಉತ್ತಮ ಪರಿಸರವನ್ನು ಹಾಳು ಮಾಡದಂತೆ ಕಾಪಾಡೋಣ, ಮುಂದಿನ ಧಾರ್ಮಿಕ ಆಚಣೆಗಳ ಸಂಬಂಧ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದು ಆಯಾ ವಾರ್ಡ್‌ಗಳ ಎಸ್.ಐ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಈ ಬಗ್ಗೆ ಕ್ರಮವಹಿಸಿದ್ದಾರೆ. ಶಾಂತಿ ಸುವ್ಯವಸ್ಥೆಯುನ್ನು ಕಾಪಾಡಲು ಅಧಿಕಾರಿಗಳೊಂದಿಗೆ ಎಲ್ಲರೂ ಕೈ ಜೋಡಿಸೋಣ ಎಂದ್ರು.
ಬೈಟ್-1 : ಪ್ರೀತಂ ಜೆ ಗೌಡ, ಶಾಸಕ. ( ಹಸಿರು ಕಲ್ಲರ್ ಶರ್ಟ್ )
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ನಿವಾಸ್ ಸೆಫೆಟ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎರಡು ಹಬ್ಬಗಳಲ್ಲಿ ಸಂಭ್ರಮತೆಯಿರಲಿ, ಸಾರ್ವಜನಿಕರಿಗೆ ಸಹಕಾರ ಕಲ್ಪಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಸಂಪೂರ್ಣವಾದ ಬಂದೋಬಸ್ತ್ ನೀಡಲಾಗುವುದು. ಇದಕ್ಕೆ ಸಾರ್ವಜನಿಕರೆಲ್ಲರೂ ಸಹಕಾರ ನೀಡಬೇಕು, ಕೆಲ ದುಷ್ಕರ್ಮಿಗಳು ಶಾಂತಿ ಕದಡುವ ಕೆಲಸ ಮಾಡಲು ಇಂತಹ ಸನ್ನೀವೇಶಗಳನ್ನೇ ಕಾಯ್ದುಕೊಂಡು ಸಮಾಜದ ಮೇಲೆ ವ್ಯತಿರೀಕ್ತವಾದ ಪರಿಣಾಮ ಬೀರುವಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಇದರ ಬಗ್ಗೆ ತಮ್ಮ ತಮ್ಮ ಮನೆಗಳಲ್ಲಿಯೇ ಪೋಷಕರು ಮಕ್ಕಳಿಗೆ ತಿಳುವಳಿಕೆ ಮೂಡಿಸಬೇಕು. ಅಂತಹ ಘಟನೆಗಳು ನಡೆಯುತ್ತಿದ್ದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕೆಂದ್ರು.
ಬೈಟ್-2 : ಡಾ. ರಾಮ್ ನಿವಾಸ್ ಸೆಪೆಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
Conclusion:ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್, ನಗರಸಭೆಯ ಪೌರಾಯುಕ್ತ ಬಿ.ಎ.ಪರಮೇಶ್, ಉಪವಿಭಾಗಾಧಿಕಾರಿ ಹಾಗೂ ಪ್ರಭಾರಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ಡಿವೈಎಸ್‌ಪಿ.ಪುಟ್ಟಸ್ವಾಮಿಗೌಡ ವಿವಿಧ ಸಂಘದ ಮುಖ್ಯಸ್ಥರು ಹಾಜರಿದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Last Updated : Sep 3, 2019, 2:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.