ETV Bharat / state

6 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾಗಲಿದೆ: ಗೋಪಾಲಸ್ವಾಮಿ ಭವಿಷ್ಯ - Gopalaswamy's outrage against BJP in hassan

ಈಗಾಗಲೇ ಯಡಿಯೂರಪ್ಪ ಅವರನ್ನು ಕೆಳಗಿಸಲು ಅವರ ಪಕ್ಷದಲ್ಲೇ ಒಂದು ಸಂಘಟನೆ ಇದೆ. ಸರ್ಕಾರ ಬೀಳಿಸಲು ಬಿಜೆಪಿಯವರೇ ಸಿದ್ಧತೆ ನಡೆಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಹೇಳಿದ್ದಾರೆ.

gopalaswamys
ಗೋಪಾಲಸ್ವಾಮಿ
author img

By

Published : Sep 28, 2020, 7:07 PM IST

ಹಾಸನ: ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಇನ್ನು ಆರು ತಿಂಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಭವಿಷ್ಯ ನುಡಿದಿದ್ದಾರೆ.

6 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾಗಲಿದೆ: ಗೋಪಾಲಸ್ವಾಮಿ ಭವಿಷ್ಯ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿದೆ. ಈ ಸರ್ಕಾರ ಬೀಳಿಸುವುದೇ ನಮ್ಮ‌ ಉದ್ದೇಶವಾಗಿದೆ. ರೈತರು ಹಾಗೂ ಕಾರ್ಮಿಕರ ವಿರೋಧ ಕಟ್ಟಿಕೊಂಡರೆ ಈ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಯಡಿಯೂರಪ್ಪ ಅವರನ್ನು ಕೆಳಗಿಸಲು ಅವರ ಪಕ್ಷದಲ್ಲೇ ಒಂದು ಸಂಘಟನೆ ಇದೆ. ಸರ್ಕಾರ ಬೀಳಿಸಲು ಬಿಜೆಪಿಯವರೇ ಸಿದ್ಧತೆ ನಡೆಸುತ್ತಿದ್ದಾರೆ. ನಮ್ಮ‌ ಪಕ್ಷದಿಂದ ಬಿಜೆಪಿಗೆ ಹೋದವರಿಗೆ ಮನವಿ ಮಾಡುತ್ತೇನೆ. ಈ ಕಾಯ್ದೆ ವಿರೋಧಿಸಿ ದಯವಿಟ್ಟು ನಮ್ಮ ಪಕ್ಷಕ್ಕೆ ವಾಪಸ್ ಬನ್ನಿ. ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ. ಇನ್ನು ಕೇವಲ ಆರು ತಿಂಗಳಲ್ಲಿ‌ಈ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.