ETV Bharat / state

ಹಾಸನದಲ್ಲಿ ವ್ಯಾಪಾರಸ್ಥರ ಸ್ವಯಂ ಘೋಷಿತ ಲಾಕ್​​ಡೌನ್​ಗೆ ಉತ್ತಮ ಪ್ರತಿಕ್ರಿಯೆ - Hassan self-proclaimed lockdown of traders News

ಪ್ರತಿದಿನ ಮಧ್ಯಾಹ್ನ 2 ಗಂಟೆವರೆಗೂ ಅಂಗಡಿ ಮುಂಗಟ್ಟನ್ನು ತೆಗೆದು ವ್ಯಾಪಾರ ಮಾಡಬೇಕು. ನಂತರ ಲಾಕ್​​ಡೌನ್ ಮಾಡಲು ಹಾಸನದ ವ್ಯಾಪಾರಸ್ಥರು ಸೇರಿ ಸಭೆ ಮಾಡಿ ನಿರ್ಧರಿಸಿದಂತೆ ಉತ್ತಮ ಸ್ಪಂದನೆ ಸಿಕ್ಕಿದೆ.

ವ್ಯಾಪಾರಸ್ಥರ ಸ್ವಯಂ ಘೋಷಿತ ಲಾಕ್​ ಡೌನ್​ಗೆ ಉತ್ತಮ ಪ್ರತಿಕ್ರಿಯೆ

author img

By

Published : Jul 12, 2020, 9:37 AM IST

ಹಾಸನ: ವ್ಯಾಪಾರಸ್ಥರ ಸಲಹೆಯಂತೆ ವಾರದಲ್ಲಿ ಎರಡು ದಿನದ ಲಾಕ್​​ಡೌನ್ ಮಾಡಲು ಶಾಸಕರು ನೀಡಿದ ಆದೇಶಕ್ಕೆ ಶನಿವಾರದಂದು ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಮಾತ್ರ ತೆರೆದಿದ್ದು, ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಪ್ರತಿದಿನ ಮಧ್ಯಾಹ್ನ 2 ಗಂಟೆವರೆಗೂ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಬೇಕು. ನಂತರ ಲಾಕ್​​ಡೌನ್ ಮಾಡಲು ಹಾಸನದ ವ್ಯಾಪಾರಸ್ಥರು ಸೇರಿ ಸಭೆ ಮಾಡಿ ನಿರ್ಧರಿಸಿದಂತೆ ಉತ್ತಮ ಸ್ಪಂದನೆ ಸಿಕ್ಕಿದೆ.

ವ್ಯಾಪಾರಸ್ಥರ ಸ್ವಯಂ ಘೋಷಿತ ಲಾಕ್​​ಡೌನ್​ಗೆ ಉತ್ತಮ ಪ್ರತಿಕ್ರಿಯೆ

ರಾತ್ರಿ 8 ಗಂಟೆಯವರೆಗೆ ಮಾತ್ರ ವ್ಯಾಪಾರ-ವಹಿವಾಟು ನಡೆಸಿ ಭಾನುವಾರದಂದು ಸಂಪೂರ್ಣ ಲಾಕ್​​ಡೌನ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಶಾಸಕರ ಸೂಚನೆಗೆ ಇದು ಸೇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ಪಷ್ಟಪಡಿಸಿದ್ದಾರೆ.

ವಾರದ ಒಂದು ದಿವಸ ಮಾತ್ರ ಬಂದ್ ಇರುತ್ತದೆ. ಶನಿವಾರದ ಲಾಕ್​​ಡೌನ್ ಸೇರುವುದಿಲ್ಲ. ಆದರೆ ಶನಿವಾರದಂದು ಕೂಡ ಬಂದ್​ ಮಾಡುವಂತೆ ನಗರಸಭೆ ಮತ್ತು ಪೊಲೀಸರು ಒತ್ತಾಯ ಮಾಡುತ್ತಿದ್ದಾರೆ ಎಂದು ಕೆಲ ವ್ಯಾಪಾರಸ್ಥರು ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.