ಹಾಸನ: ಕೊರೊನಾ ಹಿನ್ನೆಲೆ ಗಣೇಶ ಮೂರ್ತಿ ತಯಾರಿಯನ್ನೇ ನಂಬಿದ್ದ ಕಲಾವಿದರು ಸಂಕಷ್ಟದಲ್ಲಿದ್ದಾರೆ.
ಕಳೆದ ವರ್ಷ ಈ ವೇಳೆಗೆ ಭರ್ಜರಿ ವ್ಯಾಪಾರ ಆಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಕರಿ ನೆರಳು ವಿಘ್ನ ನಿವಾರಕ ಗಣೇಶನನ್ನು ಬಿಡುತ್ತಿಲ್ಲ. ಆದರೂ ಕೂಡ ಗೌರಿ-ಗಣೇಶ ವಿಗ್ರಹ ತಯಾರಕರು ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಬಾರಿ ಆರು ತಿಂಗಳಿಗೆ ಮುನ್ನವೇ ವಿಗ್ರಹಗಳನ್ನು ಸಜ್ಜುಗೊಳಿಸಿ, ಮೂರ್ತಿ ತಯಾರಕರು ಒಂದಷ್ಟು ಹಣ ಗಳಿಸುತ್ತಿದ್ದರು.
ಆದರೆ ಈ ಬಾರಿ ಆಗಸ್ಟ್ ಆರಂಭವಾದರೂ ಗಣೇಶ ಮೂರ್ತಿಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಗಣೇಶ ಮೂರ್ತಿ ತಯಾರಕರಾದ ವಿಶ್ವನಾಥ್ ಹಾಗೂ ಗಣೇಶ್ ಹೇಳುತ್ತಾರೆ.