ETV Bharat / state

ಹಾಸನ: ನಾಲ್ವರು ಅಂತರ್ ರಾಜ್ಯ ಕಳ್ಳರ ಬಂಧನ

ವಾಹನ ತಪಾಸಣೆ ವೇಳೆ ಕಳ್ಳತನದ ವಾಹನ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಹಾಸನ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

four interstate thieves arrested in Hassa
ನಾಲ್ವರು ಅಂತರ್ ರಾಜ್ಯ ಕಳ್ಳರ ಬಂಧನ
author img

By

Published : Jul 9, 2022, 4:34 PM IST

ಹಾಸನ: ವಾಹನಗಳ ಕಳವು ಮಾಡುತ್ತಿದ್ದ ನಾಲ್ಕು ಜನ ಅಂತರ್ ರಾಜ್ಯ ಕಳ್ಳರ ಬಂಧಿಸಿ ಅವರಿಂದ 4 ಲಕ್ಷ ನಗದು ಮತ್ತು 21 ಲಕ್ಷ ಮೌಲ್ಯದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಶಂಕರ್ ಮಂಜುಗೌಡ ಮತ್ತು ಮುನ್ನಾ ಕೋಟ್ಯಾನ್, ತಮಿಳುನಾಡಿನ ಅಬ್ದುಲ್ ರಜಾಕ್ ಹಾಗೇ ಹಾಸನದ ವಿಜಯ್ ಕುಮಾರ್​ ಬಂಧಿತ ಆರೋಪಿಗಳು.

ಅರಸೀಕೆರೆ ಉಪ ವಿಭಾಗದ ಪೊಲೀಸರು ವಾಹನ ತಪಾಸಣೆ ಮಾಡುವ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದಾಗ ದಾಖಲಾತಿಗಳನ್ನು ಪರಿಶೀಲಿಸಿದಾಗ ಕಳ್ಳತನದ ವಾಹನ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಾಹನದಲ್ಲಿದ್ದವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಇವರು ಹಲವಾರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇವರ ಇತರ ಇನ್ನೂ 12 ಕೇಸ್​ಗಳು ಬೆಳಕಿಗೆ ಬಂದಿದೆ.

ನಾಲ್ವರು ಅಂತರ್ ರಾಜ್ಯ ಕಳ್ಳರ ಬಂಧನ

ಬಂಧಿತರಿಂದ ಟಾಟಾ ಸುಮೋ, ಅಶೋಕ್ ಲೇಲ್ಯಾಂಡ್, ದೋಸ್ತ್ ಗುಡ್ಸ್, ಒಂದು ಬುಲೆರೋ, ರಾಯಲ್ ಎನ್ ಫಿಲ್ಡ್ ಮತ್ತು ಲಕ್ಷ ನಗದನ್ನು ವಶಪಡಿಸಿ ಕೊಳ್ಳಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.