ಹಾಸನ(ಹೊಳೆನರಸೀಪುರ): ಕೊರೊನಾ ಸೋಂಕಿನ ಹಿನ್ನೆಲೆ ಮೊದಲ ಬಾರಿಗೆ ಒಂದೇ ದಿನಕ್ಕೆ ಗಣೇಶ ಮೂರ್ತಿ ನಿಮಜ್ಜನ ಮಾಡಲಾಗುತ್ತಿದೆ. ಮುಂದಿನ ವರ್ಷದ ಹೊತ್ತಿಗೆ ಕೊರೊನಾ ದೂರವಾಗಲಿ ಎಂದು ಮಾಜಿ ಹೆಚ್.ಡಿ.ರೇವಣ್ಣ ಪ್ರಾರ್ಥಿಸಿದರು.
ಇಲ್ಲಿನ ಗಣೇಶನ ಪ್ರತಿಷ್ಠಾಪನೆಗೆ ಚಾಲನೆ ನೀಡಿ ಮಾತನಾಡಿದ ಅವರು, 63 ವರ್ಷದಿಂದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಒಂದೂವರೆ ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ನಂತರ ಮೂರ್ತಿ ನಿಮಜ್ಜನೆಯನ್ನು ಅದ್ದೂರಿಯಾಗಿ ಮಾಡಲಾಗುತ್ತಿತ್ತು ನೆನಪಿಸಿಕೊಂಡರು.
ಆದ್ರೆ ಈ ಬಾರಿ ಕೊರೊನಾದಿಂದ ಎಲ್ಲ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ರೋಗವನ್ನು ಹಿಮ್ಮೆಟ್ಟಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾರ್ವಜನಿಕರು ಸರಳ ರೀತಿಯಾಗಿ ಹಬ್ಬ ಆಚರಿಸಬೇಕು ಎಂದರು.
ಮಹಾ ಗಣಪತಿ ಮಹೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಹೆಚ್.ವಿ.ಪುಟ್ಟರಾಜು, ಕಾರ್ಯಾಧ್ಯಕ್ಷ ಎ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ವೈ.ವಿ.ಚಂದ್ರಶೇಖರ್, ಪುರಸಭಾ ಮಾಜಿ ಹಾಗೂ ಹಾಲಿ ಸದಸ್ಯರು ಇದ್ದರು.