ETV Bharat / state

ಅಧಿಕಾರಿಗಳ ವಿರುದ್ಧ ಗುಡುಗಿ, ಶಾಸಕರ ಮೇಲೆ ಹರಿಹಾಯ್ದ ಮಂಜು - Former Minister A.Manju outraged against MLA

ರೈತರ ಜಮೀನಿಗೆ ಸರ್ಕಾರದ ಜಮೀನೆಂದು ತಂತಿ ಬೇಲಿ ಹಾಕಲು ಬಂದಿದ್ದ ಅಧಿಕಾರಿಗಳನ್ನ ಮಾಜಿ ಸಚಿವ ಎ.ಮಂಜು ತರಾಟೆಗೆ ತೆಗೆದುಕೊಂಡಿದ್ದು, ಶಾಸಕ ಎ.ಟಿ.ರಾಮಸ್ವಾಮಿ ವಿರುದ್ಧವೂ ಹರಿಹಾಯ್ದಿದ್ದಾರೆ.

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಎ.ಮಂಜು
author img

By

Published : Oct 20, 2019, 6:22 AM IST

ಹಾಸನ: ರಾಜಕಾರಣಿಗಳು ಸ್ಥಾನವೂ ಶಾಸ್ವತವಲ್ಲ. ನಿಮ್ಮಂತ ಅಧಿಕಾರಿಗಳ ಹುದ್ದೆಯೂ ಶಾಶ್ವತವಲ್ಲ. ತಪ್ಪು ಮಾಡಿದವನು ಯಾರೇ ಆಗಲೀ ಅದು ತಪ್ಪೇ. ಎಂದು ಅಧಿಕಾರಿಗಳನ್ನು ಮಾಜಿ ಶಾಸಕ ಎ.ಮಂಜು ತರಾಟೆಗೆ ತೆಗುದುಕೊಂಡಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಅರಸೀಕಟ್ಟೆ ಗ್ರಾಮದಲ್ಲಿನ ತಿಮ್ಮೇಗೌಡರ ಕುಟುಂಬ 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ದೇವಾಲಯದ ಸಮೀಪವಿರುವ ಸರ್ವೆ ನಂ. 18/2 ರಲ್ಲಿರುವ 1. 22ಗುಂಟೆ ಜಮೀನು ಸರ್ಕಾರಿ ಜಮೀನೆಂದು ಅಧಿಕಾರಿಗಳು ತಂತಿ ಬೇಲಿ ಹಾಕಲು ಮುಂದಾಗಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಗುವಳಿದಾರರ ಮೇಲೆ ಅಧಿಕಾರಿಗಳು ಮಾತಿನ ಚಕಮಕಿ ಆರಂಭಿಸಿದ್ದರು.

ಇದೇ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ಎ.ಮಂಜು ವಿಚಾರವನ್ನ ತಿಳಿದುಕೊಂಡ ಬಳಿಕ ಅಧಿಕಾರಿಗಳಿಗೆ ಚಾಟಿ ಬೀಸಿ ಅವನ್ಯಾರೋ ಹೇಳಿದ ತಕ್ಷಣ ಬಂದು ತಂತಿಬೇಲಿ ಹಾಕಲು ಮುಂದಾಗಿದ್ದೀರಲ್ಲಾ ಎನ್ನುವ ಮೂಲಕ ಎ.ಟಿ.ರಾಮಸ್ವಾಮಿ ವಿರುದ್ದ ಹರಿಹಾಯ್ದಿದ್ದಾರೆ.

ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಎ.ಮಂಜು

ಸರ್ಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಅಭಿವೃದ್ಧಿ ನೆಪದಲ್ಲಿ ರೈತರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರೋ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರೋ ಆ ಮನುಷ್ಯನ ಹಿಂಬಾಲಕರು ಮಠದ ಆಸ್ತಿಯನ್ನ ಅಕ್ರಮವಾಗಿ ಸಾಗುವಳಿ ಮಾಡ್ತಿದ್ದಾರಲ್ಲ ಮೊದಲು ಅದನ್ನ ತೆರವುಗೊಳಿಸಿ ಎಂದು ಅಧಿಕಾರಿಗಳ ವಿರುದ್ದವೂ ಮಂಜು ಗುಡುಗಿದ್ರು.

ವಾಸೀಂ ಪಾಷರ ಜಮೀನು ಮತ್ತು ಚಿಕ್ಕಬೊಮ್ಮನಹಳ್ಳಿ ಆದಿಚುಂಚನಗಿರಿಯ ಮಠದ ಸುಮಾರು 75 ಎಕರೆ ಭೂಮಿಯನ್ನು ಕೂಡಾ ಶಾಸಕರ ಆಪ್ತರು, ಹಿಂಬಾಲಕರು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲು ಯಾಕೆ ಮುಂದಾಗಿಲ್ಲ. ಪಾಪದ ರೈತರು ಕಣ್ಣಿಗೆ ಕಾಣುವ ನಿಮಗೆ, ಇಂತಹವರು ಮಾಡಿರುವ ಅಕ್ರಮಗಳು ಕಾಣೋದಿಲ್ವ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಚಿವ ಎ.ಮಂಜು, ನಿಮ್ಮ ಶಾಸಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ನಾನು ಸಹ ಶಾಸಕ ಮತ್ತು ಮಂತ್ರಿಯಾಗಿದ್ದೆ. ನನ್ನ ಅಧಿಕಾರದ ಅವಧಿಯಲ್ಲಿ ನಾನೆಂದು ಈ ತರಹದ ಸಣ್ಣತನದ ರಾಜಕಾರಣ ಮಾಡಲಿಲ್ಲ ಎಂದು ಕಿಡಿಕಾರಿದರು.

Intro:ಹಾಸನ: ರಾಜಕಾರಣಿಗಳು ಸ್ಥಾನವೂ ಶಾಸ್ವತವಲ್ಲ. ನಿಮ್ಮಂತ ಅಧಿಕಾರಿಗಳ ಹುದ್ದೆಯೂ ಶಾಶ್ವತವಲ್ಲ. ತಪ್ಪು ಮಾಡಿದವನು ಯಾರೇ ಆಗಲೀ ಅದು ತಪ್ಪು;ತಪ್ಪೇ. ಈ ಹಿಂದೆ ಸರ್ಕಾರದ ಒತ್ತುವರಿ ಸಮಿತಿಯಲ್ಲಿದ್ದವರು ತಾನೇ ? ತಾವು ಅತ್ಯಂತ ಪ್ರಾಮಾಣಿಕ ರಾಜಕಾರಣಿ ಎಂದು ಹೇಳಿಕೊಳ್ಳುವ ಇವರು ರಾಜ್ಯದಲ್ಲೇ ಒಂದು ರೀತಿಯಲ್ಲಿ, ಸ್ಥಳೀಯವಾಗಿ ಇನ್ನೊಂದು ರೀತಿಯಲ್ಲಿ ಮಾಡುವುದು ಶೋಭೆ ತರುವುದಿಲ್ಲ. ಎಂದು ಪರೋಕ್ಷವಾಗಿ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಹೆಸರನ್ನ ಪ್ರಸ್ತಾಪಿಸದೇ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಏರುಧನಿಯಲ್ಲಯೇ ಗರಂ ಆದ ಮಾಜಿ ಸಚಿವ ಎ.ಮಂಜು ಸಾರ್ವಜನಿಕರೆದ್ರು ಮಾತಿನ ಮೂಲಕ ಹರಿಯಾಯ್ದದ್ರು.

ಹೌದು ಇಂಥಹ ಒಂದು ಘಟನೆ ನಡೆದಿದ್ದು, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ. ತಾಲ್ಲೂಕಿನ ಅರಸೀಕಟ್ಟೆ ಗ್ರಾಮದಲ್ಲಿನ ತಿಮ್ಮೇಗೌಡರ ಕುಟುಂಬದವರು ೪೦ವರ್ಷದಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ದೇವಾಲಯದ ಸಮೀಪವಿರುವ ಸರ್ವೆ ನಂ. 18/2 ರಲ್ಲಿರುವ 1. 22ಗುಂಟೆ ಜಮೀನು ಸರ್ಕಾರಿ ಜಮೀನೆಂದು ಅಧಿಕಾರಿಗಳು ತಂತಿಬೇಲಿಯಾಕಲು ಮುಂದಾಗಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಗುವಳಿ ಮಾಡಿಕೊಂಡು ಬರುತ್ತಿರೋ ತಿಮ್ಮೇಗೌಡರ ಕುಟುಂಬ ಸದಸ್ಯರ ಮೇಲೆ ಅಧಿಕಾರಿಗಳು ಮಾತಿನ ಚಕಮಕಿ ಆರಂಭಿಸಿದ್ರು.

ಇದೇ ಸಮಯಕ್ಕೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ಎ.ಮಂಜು ವಿಚಾರವನ್ನ ತಿಳಿದುಕೊಂಡ ಬಳಿಕ ಅಧಿಕಾರಿಗಳಿಗೆ ಚಾಟಿ ಬೀಸಿ ಅವನ್ಯಾರೋ ಹೇಳಿದ ತಕ್ಷಣ ಬಂದು ತಂತಿಬೇಲಿ ಹಾಕಲು ಮುಂದಾಗಿದ್ದಿರಲ್ಲ ಎನ್ನುವ ಮೂಲಕ ಎ.ಟಿ.ರಾಮಸ್ವಾಮಿ ವಿರುದ್ದ ಹರಿಯಾಯ್ದರು. ಅಲ್ರಿ, ಸರ್ಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಅಭಿವೃದ್ಧಿ ನೆಪದಲ್ಲಿ ಪಾಪದ ರೈತರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರೋ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರೋ ಆ ಮನುಷ್ಯನ ಹಿಂಬಾಲಕರು ಮಠದ ಆಸ್ತಿಯನ್ನ ಅಕ್ರಮವಾಗಿ ಸಾಗುವಳಿ ಮಾಡ್ತಿದ್ದಾರಲ್ಲ ಮೊದಲು ಅದನ್ನ ತೆರವುಗೊಳಿಸಿ ಎಂದು ಅಧಿಕಾರಿಗಳ ವಿರುದ್ದವೂ ಗುಡುಗಿದ್ರು.

ಅಷ್ಟೆಯಲ್ದೆ, ಶಾಸಕರ ಆಪ್ತ ಮಗ್ಗೆ ರಂಗಸ್ವಾಮಿ ಎಂಬಾತ ದೊಡ್ಡಮಗ್ಗೆ ಗ್ರಾಮದಲ್ಲಿನ ಎಚ್.ಆರ್.ಪಿ.ಮುಳುಗಡೆ ಜಮೀನನ್ನು ಒತ್ತುವರಿ ಮಾಡಿಕೊಂಡು ಜೊತೆಗೆ 75ಲಕ್ಷ ಪರಿಹಾರವನ್ನ ಪಡೆದಿದ್ದು, ಆತನ ಸಹೋದರ ಜಿಲ್ಲಾಧಿಕಾರಿ ಎಂಬ ಕಾರಣಕ್ಕೆ ಅವನು ಒತ್ತುವರಿ ಮಾಡಿಕೊಂಡಿರೋ ಜಮೀನನ್ನ ಖಾಲಿ ಮಾಡಿಸಲು ಸಾಧ್ಯವಾಗದೇ, ಪಾಪದ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಅಧಿಕಾರಿಗಳ ಮೂಲಕ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ರು.

ವಾಸೀಂ ಪಾಷರ ಜಮೀನು ಮತ್ತು ಚಿಕ್ಕಬೊಮ್ಮನಹಳ್ಳಿ ಆದಿಚುಂಚನಗಿರಿಯ ಮಠದ ಸುಮಾರು ೭೫ ಎಕರೆ ಭೂಮಿಯನ್ನು ಕೂಡಾ ಶಾಸಕರ ಆಪ್ತರು ಹಿಂಬಾಲಕರು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಲು ಯಾಕೆ ಮುಂದಾಗಿಲ್ಲ ಪಾಪದ ರೈತರು ಕಣ್ಣಿಗೆ ಕಾಣುವ ನಿಮಗೆ ಇಂತಹವರು ಮಾಡಿರುವ ಅಕ್ರಮಗಳು ಕಾಣೋದಿಲ್ವ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಚಿವ ಎ.ಮಂಜು ನಿಮ್ಮ ಶಾಸಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ನಾನು ಸಹ ಶಾಸಕ ಮತ್ತು ಮಂತ್ರಿಯಾಗಿದ್ದೆ ನನ್ನ ಅಧಿಕಾರದ ಅವಧಿಯಲ್ಲಿ ನಾನೆಂದು ಸಣ್ಣತನದ ರಾಜಕಾರಣವನ್ನು ಮಾಡಲಿಲ್ಲ. ಮಾನವೀಯತೆಯ ಆಧಾರದ ಮೇಲೆ ಸುಮ್ಮನಿದ್ದೆ. ಆದರೆ ಈಗ ಶಾಸಕರು ಮಾಡುತ್ತಿರುವುದು ಏನು? ಗುಡುಗಿದ್ರು.

ಬೈಟ್: ಎ.ಮಂಜು, ಮಾಜಿ ಸಚಿವ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.