ETV Bharat / state

ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಮಾಂಗಲ್ಯ ಉಳಿಯಬೇಕಾದರೆ ಮದ್ಯದಂಗಡಿ ಮುಚ್ಚಿಸಿ: ಎಚ್.ಡಿ.ರೇವಣ್ಣ - ಹಾಸನ ಲೇಟೆಸ್ಟ್ ನ್ಯೂಸ್

ಜಿಲ್ಲಾಡಳಿತ ನೈಟ್​ ಕರ್ಫ್ಯೂ ಜಾರಿಗೆ ತರುತ್ತಿದ್ದಂತೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಮದ್ಯ ಸಂಗ್ರಹಿಸಲು ಬಾರ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದಲ್ಲದೇ, ಗ್ರಾಮೀಣ ಭಾಗದಲ್ಲಿ ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಮದ್ಯ ಮಾರಾಟ ಮಳಿಗೆಗಳನ್ನು ಪ್ರಾರಂಭ ಮಾಡಿರುವುದರಿಂದ ಹೆಣ್ಣುಮಕ್ಕಳು ಮಾಂಗಲ್ಯ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Hassan
ಮಾಜಿ ಸಚಿವ ಎಚ್.ಡಿ.ರೇವಣ್ಣ
author img

By

Published : Apr 24, 2021, 1:48 PM IST

ಹಾಸನ: ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಮಾಂಗಲ್ಯ ಉಳಿಯಬೇಕಾದರೆ ಹಳ್ಳಿ- ಹಳ್ಳಿಗಳಲ್ಲಿರುವ ಮದ್ಯದಂಗಡಿಯನ್ನು ಬಂದ್ ಮಾಡಿಸಿ ಎಂದು ಜಿಲ್ಲಾಡಳಿತಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಮಾಂಗಲ್ಯ ಉಳಿಯಬೇಕಾದರೆ ಮದ್ಯದಂಗಡಿ ಮುಚ್ಚಿಸಿ: ಎಚ್.ಡಿ.ರೇವಣ್ಣ

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಹೆಮ್ಮಾರಿ ಕೊರೊನಾ ಉಲ್ಬಣಗೊಳ್ಳುತ್ತಿದೆ. ಜಿಲ್ಲಾಡಳಿತ ನೈಟ್​ ಕರ್ಫ್ಯೂ ಜಾರಿಗೆ ತರುತ್ತಿದ್ದಂತೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಮದ್ಯ ಸಂಗ್ರಹಿಸಲು ಬಾರ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಇದಲ್ಲದೇ, ಗ್ರಾಮೀಣ ಭಾಗದಲ್ಲಿ ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಮದ್ಯ ಮಾರಾಟ ಮಳಿಗೆಗಳನ್ನು ಪ್ರಾರಂಭ ಮಾಡಿರುವುದರಿಂದ ಹೆಣ್ಣುಮಕ್ಕಳು ಮಾಂಗಲ್ಯ ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ.

ಹೊಳೆನರಸೀಪುರ ತಾಲೂಕಿನ ಚಿಕ್ಕಬ್ಯಾಗಹಳ್ಳಿ ಸುತ್ತಮುತ್ತ 20ಕ್ಕೂ ಅಧಿಕ ಮದ್ಯದಂಗಡಿಗಳಿವೆ. ಅವುಗಳನ್ನು ಮುಚ್ಚಿಸಿ ಎಂದು ಮಹಿಳೆಯರು ಕೈ-ಕಾಲು ಹಿಡಿಯುತ್ತಿದ್ದಾರೆ. ಮದ್ಯಪಾನ ಸೇವಿಸಲು ಹೆಂಡತಿಯ ಮಾಂಗಲ್ಯಸರ ಅಡವಿಡಲು ಮುಂದಾಗುತ್ತಿದ್ದಾರೆ. ಹೀಗಾಗಿ, ನಮ್ಮ ಮಾಂಗಲ್ಯ ಉಳಿಸಿಕೊಡಿ ಎಂದು ಕಣ್ಣೀರಿಡುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣ ಇಂತಹ ಮದ್ಯದಂಗಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದರು.

ಮದ್ಯದಂಗಡಿಗಳಲ್ಲಿ ಪ್ರತಿನಿತ್ಯ ಪಿಗ್ಮಿ ಸಂಗ್ರಹದ ರೀತಿ ಅಬಕಾರಿ ಇಲಾಖೆಯವರು ಚಂದಾ ವಸೂಲಿ ಮಾಡುತ್ತಿದ್ದಾರೆ. ಇಂತಹದ್ದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಇನ್ನು, ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಅಂಗಡಿ ಮಳಿಗೆಗಳನ್ನು ತೆಗೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ, ಜನಜಂಗುಳಿ ಹೆಚ್ಚಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದರು.

ಓದಿ: ಅಣ್ಣನ ಮದುವೆಯಲ್ಲಿ ಅಪ್ರಾಪ್ತೆಯೊಂದಿಗೆ ತಮ್ಮನ ಮದುವೆಗೆ ಸಿದ್ದತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.