ಹಾಸನ: ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭಾರೀ ಅಕ್ರಮ ನಡೆಯುತ್ತಿದ್ದು, ಖಾಸಗಿ ಲೇಔಟ್ದಾರರಿಗೆ ಮಣೆ ಹಾಕಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು 304 ಜನರಿಂದ ಎಕರೆಗೆ 4 ಲಕ್ಷ ದಂತೆ 10 ಲಕ್ಷ ಹಣ ತೆಗೆದುಕೊಂಡಿದ್ದು, 4 ವರ್ಷದಿಂದ ಅವರಿಗೆ ನಿವೇಶನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಲೇಔಟ್ ಹೆಸರಲ್ಲಿ ಜಿಲ್ಲೆಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ, ಕೆಲ ಅಧಿಕಾರಿಗಳು ಕೋಟಿಗಟ್ಟಲೆ ಲಂಚ ಪಡೆದು ಖಸಗಿ ಲೇಔಟ್ ಮಾಡುವವರಿಗೆ ಎನ್ಒಸಿ ನೀಡುತ್ತಿದ್ದಾರೆ, ಸಿಕ್ಕ ಸಿಕ್ಕ ಜಮೀನುಗಳಿಗೆಲ್ಲಾ ಕಲ್ಲು ನೆಟ್ಟು ಲೇಔಟ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದರು.
ಇನ್ನು ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಖಾಸಗೀಕರಣವಾಗುವುದು, ಕೇಂದ್ರ ಸರ್ಕಾರ ಇದೆ ರೀತಿ ಮುಂದುವರೆದರೆ ಸಂಪೂರ್ಣ ಖಾಸಗೀಕರಣವಾಗುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.