ಚನ್ನರಾಯಪಟ್ಟಣ: ಕೊರೊನಾ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಇಲ್ಲಿನ ಸಂತೆ ಶಿವರ ಡೈರಿಯಲ್ಲಿ ಹಾಲಿನ ಗುಣಮಟ್ಟ ಸರಿಯಿಲ್ಲ ಎಂದು ಡೈರಿ ಬಾಗಿಲು ಹಾಕಲಾಗಿದೆ.
ಪ್ರತಿ ದಿನ ಎಂಟು ನೂರು ಲೀಟರ್‌ಗೂ ಅಧಿಕ ಹಾಲು ಸಂಗ್ರಹವಾಗುತ್ತಿರುವ ಈ ಡೈರಿಯಲ್ಲಿ ಮೂರು ದಿನದಿಂದ ಹಾಲು ಸಂಗ್ರಹಿಸದೆ ಕಾರ್ಯದರ್ಶಿ ನಾಪತ್ತೆಯಾಗಿದ್ದಾನೆ. ಹಾಲಿನಲ್ಲಿ ಫ್ಯಾಟ್ ಬರುತ್ತಿಲ್ಲ ಎಂದು ಒಂದು ಲೀಟರ್ಗೆ ಕೇವಲ ಒಂಭತ್ತು ರೂಪಾಯಿ ನೀಡಲು ಮುಂದಾಗಿದ್ದನಂತೆ. ಇದರಿಂದ ರೈತರು ಆತನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದರಿಂದ ಕೋಪಗೊಂಡ ಸೆಕ್ರೆಟರಿ, ನಿಮ್ಮ ಹಾಲನ್ನು ಯಾರಿಗೆ ಕೊಡ್ತೀರೋ ಕೊಡಿ ಎಂದು ಹಾಲಿನ ಡೈರಿಗೆ ಬೀಗ ಹಾಕಿಕೊಂಡು ಹೊಗಿದ್ದಾನೆ ಎಂದು ರೈತರು ಆರೋಪಿಸಿದ್ದಾರೆ.
ಇದೀಗ ರೈತರು ಹಗಲು ರಾತ್ರಿ ಎನ್ನದೆ ಹಾಲಿನ ಡೈರಿ ಮುಂಭಾಗ ಕಾದು ನಿಂತಿದ್ದಾರೆ. ಕೊರೊನಾ ಸಮಯದಲ್ಲಿ ನಮಗೆ ಮತ್ತಷ್ಟು ಕಷ್ಟ ಕೊಡಬೇಡಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.