ETV Bharat / state

ಪರಿಸರ ಸಂರಕ್ಷಣೆಯ ಹೊಣೆ ಹೊರಲು ಸಿದ್ಧರಾಗಿ: ಶಾಸಕ ರಾಮಸ್ವಾಮಿ ಕರೆ

ನಮ್ಮ ಅರಿವಿನ ಕೊರತೆ ಅಥವಾ ಸ್ವಾರ್ಥದಿಂದ ಪರಿಸರ ವಿನಾಶದ ಅಂಚಿಗೆ ಬಂದು ನಿಂತಿದೆ. ಮುಂದಿನ ಪೀಳಿಗೆಗೂ ಉತ್ತಮವಾದ ಪರಿಸರದ ನೀಡಬೇಕಿದೆ. ಮಾನಸಿಕ ಹಾಗೂ ದೈಹಿಕವಾಗಿ ನಾವು ಸದೃಢವಾಗಲು ಪರಿಸರ ರಕ್ಷಿಸುವ ಹೊಣೆಗಾರಿಕೆ ಹೊರೆಬೇಕಿದೆ ಎಂದು ಶಾಸಕ ಡಾ.ಎ.ಟಿ. ರಾಮಸ್ವಾಮಿ ಹೇಳಿದರು.

-ramanathapura
ಶಾಸಕ ಡಾ.ಎ.ಟಿ.ರಾಮಸ್ವಾಮಿ
author img

By

Published : Jun 5, 2020, 9:28 PM IST

ರಾಮನಾಥಪುರ (ಹಾಸನ): ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸುವ ಉದ್ದೇಶದಿಂದ ಪ್ರತಿಯೊಬ್ಬರೂ ಪ್ರಕೃತಿ ರಕ್ಷಣೆಯ ಜವಾಬ್ದಾರಿ ಹೊರಲು ಸಿದ್ಧರಾಗಬೇಕು ಎಂದು ಶಾಸಕ ಡಾ.ಎ.ಟಿ. ರಾಮಸ್ವಾಮಿ ಕರೆ ನೀಡಿದರು.

ರಾಮನಾಥಪುರ ಹೋಬಳಿ ಬಸವಪಟ್ಟಣದ ಮಲ್ಲಣ್ಣಶೆಟ್ಟಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಅರಿವಿನ ಕೊರತೆ ಅಥವಾ ಸ್ವಾರ್ಥದಿಂದ ಪರಿಸರ ವಿನಾಶದ ಅಂಚಿಗೆ ಬಂದು ನಿಂತಿದೆ. ಮುಂದಿನ ಪೀಳಿಗೆಗೂ ಉತ್ತಮವಾದ ಪರಿಸರದ ನೀಡಬೇಕಿದೆ. ಮಾನಸಿಕ ಹಾಗೂ ದೈಹಿಕವಾಗಿ ನಾವು ಸದೃಢವಾಗಲು ಪರಿಸರ ರಕ್ಷಿಸುವ ಹೊಣೆಗಾರಿಕೆ ಹೊರೆಬೇಕಿದೆ. ಅರಣ್ಯ ಸಂರಕ್ಷಣೆಯ ಜೊತೆಗೆ ವೈವಿಧ್ಯತೆಯ ಪರಿಸರವನ್ನೂ ಬೆಳೆಸೋಣ ಎಂದರು.

ಗ್ರಾಮ ಪಂಚಾಯಿತಿ‌ ಅಧ್ಯಕ್ಷೆ ನಾಗರತ್ನ ಮಹೇಂದ್ರಕುಮಾರ್, ಉಪಾಧ್ಯಕ್ಷ ವಸಂತ್ ‌ಕುಮಾರ್, ಡಾ. ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭಾಗೀರಥಿ, ಅರಣ್ಯ ವಲಯ ಅಧಿಕಾರಿ ಅರುಣ್, ಪ್ರಾಂಶುಪಾಲ ದೇವರಾಜ್ ಸೇರಿದಂತೆ ಇತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.