ಹಾಸನ : ಬೇಲೂರು ತಾಲೂಕಿನ ಹಳೇಬೀಡು ಕೆರೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಕಾಡು ಬಿಟ್ಟು ನಾಡಿನಲ್ಲೇ ವಾಸ ಆರಂಭಿಸಿರುವ ಗಜಪಡೆ, ಘೀಳಿಡುತ್ತಾ ಓಡಾಡುವುದು ಕಳೆದ ಕೆಲವು ದಿನಗಳಿಂದ ಸರ್ವೇ ಸಾಮಾನ್ಯವಾಗಿದೆ. ಹಲವು ವರ್ಷಗಳ ಬಳಿಕ ತುಂಬಿದ ಕೆರೆಗೆ ಬಂದ ಗಜರಾಜನ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರು ಕಡೆಯಿಂದ ಬೇಲೂರಿನ ಬಂದಿರುವ ಕಾಡಾನೆ ಕೆರೆಯಲ್ಲಿ ವಿಹರಿಸುತ್ತಿರುವುದರಿಂದ, ಜನರಲ್ಲಿ ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ.
ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸರ್ಕಾರ ವಿಫಲವಾಗಿದೆ ಎಂದು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಅರಣ್ಯಾಧಿಕಾರಿಗಳು ಕಾಡಾನೆಯನ್ನು ಸಂಜೆಯ ನಂತರ ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ.