ETV Bharat / state

ಹಾಸನ: ಗೋದಾಮಿನ ಮೇಲೆ ಆನೆ ದಾಳಿ, ಅಪಾರ ಪ್ರಮಾಣದ ಅಕ್ಕಿ ಹಾನಿ - ಹಾಸನದ ಗೋದಾಮಿನ ಮೇಲೆ ಆನೆ ದಾಳಿ

ಹಾಸನ ಜಿಲ್ಲೆಯ ಸಕಲೇಶಪುರದ ಆಲೂರು ಭಾಗದಲ್ಲಿದ್ದ ಆನೆ ಹಾವಳಿ ಈಗ ಅರೆಮಲೆನಾಡು ಭಾಗವಾಗಿರುವ ಬೇಲೂರು ತಾಲೂಕಿಗೂ ಬಂದಿದೆ.

ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಗೋದಾಮಿನಲ್ಲಿ ಅಕ್ಕಿ ಹಾನಿ

author img

By

Published : Apr 22, 2022, 5:02 PM IST

ಹಾಸನ: ಅನ್ನಭಾಗ್ಯದ ಗೋದಾಮಿನ ಮೇಲೆ ಆನೆ ದಾಳಿ ನಡೆಸಿರುವ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ. ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಘಟನೆ ನಡೆದಿದೆ. ಆಹಾರ ಅರಸಿ ಕಾಡಿನಿಂದ ಈಗ ಆನೆಗಳು ನಾಡಿನತ್ತ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸಕಲೇಶಪುರ ಆಲೂರು ಭಾಗದಲ್ಲಿದ್ದ ಆನೆ ಹಾವಳಿ ಈಗ ಅರೆಮಲೆನಾಡು ಭಾಗವಾಗಿರುವ ಬೇಲೂರು ತಾಲೂಕಿಗೂ ಬಂದಿದೆ. ಹಸಿದ ಆನೆಯೊಂದು ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಗೋದಾಮಿನ ಮೇಲೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಅಕ್ಕಿ ಹಾಳುಗೆಡವಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬೇಲೂರು ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಷ್ಟ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕುಮಾರ್ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: 3ನೇ ಅಲೆ ಬಂದ್ರೂ ದೇಶದಲ್ಲಿ ಸಾವು-ನೋವು ಸಂಭವಿಸಲಿಲ್ಲ.. ಮೋದಿ ಬದ್ಧತೆಯೇ ಇದಕ್ಕೆ ಕಾರಣ.. ಸಚಿವ ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.