ETV Bharat / state

ಅರಕಲಗೂಡು: ಆಡುಗಳಿಗೆ ಸೊಪ್ಪು ಕತ್ತರಿಸಲು ಮರ ಹತ್ತಿದ ರೈತ ವಿದ್ಯುತ್​ ಶಾಕ್​ನಿಂದ ಸಾವು - ಕರೆಂಟ್​ ಶಾಕ್​

ಸೊಪ್ಪು ಕತ್ತರಿಸಲು ಮರದ ಮೇಲೆ ಹತ್ತಿದ್ದ ರೈತನೋರ್ವ ವಿದ್ಯುತ್ ತಂತಿ ತಗುಲಿ ಮರದ ಮೇಲೆಯೇ ಮೃತಪಟ್ಟಿದ್ದಾರೆ.

man death
ರೈತ ಸಾವು
author img

By

Published : Sep 7, 2020, 6:29 PM IST

ಅರಕಲಗೂಡು: ಕುರಿ ಮತ್ತು ಆಡುಗಳಿಗೆ ಸೊಪ್ಪು ಕತ್ತರಿಸಲು ಮರದ ಮೇಲೆ ಹತ್ತಿದ್ದ ರೈತನೋರ್ವ ವಿದ್ಯುತ್ ತಂತಿ ತಗುಲಿ ಮರದ ಮೇಲೆಯೇ ಮೃತ ಪಟ್ಟಿದ್ದಾರೆ.

ವಿದ್ಯುತ್​ ತಂತಿ ತಗುಲಿ ರೈತ ಸಾವು

ಮೃತಪಟ್ಟಿರುವ ವ್ಯಕ್ತಿಯು ತಾಲ್ಲೂಕಿನ ರಾಮನಾಥಪುರ ಹೋಬಳಿ ರಾಗಿ ಮರೂರು ಗ್ರಾಮದವರಾಗಿದ್ದು, ವ್ಯವಸಾಯದ ಜೊತೆಗೆ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಪ್ರತಿ ದಿನ ಜೀಪ್ ಓಡಿಸಲು ಹೋಗುತ್ತಿದ್ದ ಅವರು ಭಾನುವಾರ ರಜೆಯಾಗಿದ್ದರಿಂದ ಮನೆಯಲ್ಲಿಯೇ ಇದ್ದರು. ಈ ವೇಳೆ ತಾನೇ ಕುರಿ ಮತ್ತು ಆಡು ಮೇಯಿಸಲು ಹೋದ ವೇಳೆ ಈ ಅವಘಡ ಸಂಭವಿಸಿದೆ.

ಮೃತರಿಗೆ ಪತ್ನಿ ,ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕೊಣನೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.