ETV Bharat / state

ಹಾಸನದಲ್ಲಿ ಭಾರಿ ಮಳೆಗೆ ನೆಲಕ್ಕುರುಳಿದ ವಿದ್ಯುತ್​ ಕಂಬ

ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಸೀಗೆ-ಕಡದರವಳ್ಳಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದ್ದು, ಎರಡು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದ ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

Electric polls fall due to heavy rains: Negligence of Chesscom officers
ಭಾರಿ ಮಳೆಗೆ ನೆಲಕ್ಕುರುಳಿದ ವಿದ್ಯುತ್​ ಕಂಬ: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ
author img

By

Published : May 23, 2020, 9:16 AM IST

ಹಾಸನ: ಭಾರಿ ಮಳೆ ಮತ್ತು ಬಿರುಗಾಳಿಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿರುವ ಘಟನೆ ಜಿಲ್ಲೆಯ ಸಾಲಗಾಮೆ ಹೋಬಳಿಯಲ್ಲಿ ನಡೆದಿದೆ.

ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಸೀಗೆ-ಕಡದರವಳ್ಳಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದ್ದು, ಎರಡು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದ ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ವಿದ್ಯುತ್ ತಂತಿಗಳು ರಸ್ತೆಯಲ್ಲಿ ಹರಡಿಕೊಂಡು ಬಿದ್ದಿದ್ದರಿಂದ ವಾಹನ ಸವಾರರಿಗೆ, ಜನರಿಗೆ ಕೆಲಕಾಲ ಆತಂಕವಾಗಿತ್ತು.

ಭಾರಿ ಮಳೆಗೆ ನೆಲಕ್ಕುರುಳಿದ ವಿದ್ಯುತ್​ ಕಂಬ

ಘಟನಾ ಸಂಬಂಧ ಸ್ಥಳೀಯರ ಪಾತ್ರ ಇಲ್ಲಿ ನಿರ್ಣಾಯಕವಾಗಿತ್ತು. ಯಾಕಂದ್ರೆ ಸ್ಥಳೀಯರು ಸ್ವಇಚ್ಛೆಯಿಂದ ಸ್ಥಳದಲ್ಲೇ ನಿಂತು ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಂಡರು. ಈ ದಾರಿಯ ಮೂಲಕ ಬರುವ ವಾಹನ ಸವಾರರಿಗೆ ಪರ್ಯಾಯ ಮಾರ್ಗದಲ್ಲಿ ಹೋಗುವಂತೆ ಸೂಚನೆ ನೀಡುತ್ತಿದ್ದರು. ಈ ಮಧ್ಯೆ ಘಟನೆ ನಡೆದ ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಬಾರದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.