ಅರಕಲಗೂಡು: ಲಾಕ್ಡೌನ್ ನಡುವೆ ಮಾತು ಬಾರದ ಯುವ ಜೋಡಿಯೊಂದು, ವೈವಾಹಿಕ ಜೀವನಕ್ಕೆ ಕಾಲಿರಿಸಿದೆ.
ಬಾಯಿ ಮಾತಿಗಿಂತ ಹೃದಯದ ಮಾತೇ ಮುಖ್ಯವೆಂದು ಪಟ್ಟಣದ ಶಾರದ ಮತ್ತು ದಿ. ಮಾಳಿಗೆ ಅವರ ಪುತ್ರ ಅಭಿಲಾಷ್ (ಲೋಕೇಶ್) ಮತ್ತು ಲಕ್ಷ್ಮಿ ಮತ್ತು ರವಿ ಅವರ ಪುತ್ರಿ ಪೂರ್ಣಿಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇವರಿಬ್ಬರೂ ಹುಟ್ಟಿನಿಂದಲೇ ಮಾತು ಬಾರದವರಾಗಿದ್ದು, ಅಭಿಲಾಷ್ ಏಳನೇ ತರಗತಿವರೆಗೆ ಓದಿ ಟೈಲರ್ ವೃತ್ತಿ ಮಾಡುತ್ತಿದ್ದಾರೆ. ಪೂರ್ಣಿಮಾ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ಎರಡು ಕುಟುಂಬದ ಹಿರಿಯರು ಇವರಿಬ್ಬರಿಗೂ ವಿವಾಹ ಮಾಡಲು ನಿಶ್ಚಯಿಸಿ ಮಾತುಕತೆ ನಡೆಸಿ, ಮೇ 4 ರಂದು ವಿವಾಹ ನೆರವೇರಿಸಲು ನಿಗದಿಪಡಿಸಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆ ವಿವಾಹ ಸಾಧ್ಯವಾಗಿರಲಿಲ್ಲ. ಭಾನುವಾರ ಮನೆಯಲ್ಲಿ ಸರಳವಾಗಿ ವಿವಾಹ ನೆರವೇರಿಸಲಾಯಿತು.