ಹಾಸನ: ಜಿಲ್ಲೆಯಲ್ಲಿಂದು 25 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದರು.
ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಇದುವರೆಗೂ 711 ಪ್ರಕರಣ ವರದಿಯಾಗಿದ್ದು, 455 ಜನ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. 236 ಜನ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೇ ಇದುವರೆಗೂ 21 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮಾತನಾಡಿದರು ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ತಲಾ 4, ಹಾಸನದಲ್ಲಿ 12, ಹೊಳೆನರಸೀಪುರ 3, ಆಲೂರು ಹಾಗೂ ಸಕಲೇಶಪುರದಲ್ಲಿ 1. ಸೇರಿ ಒಟ್ಟು 25 ಪ್ರಕರಣ ದಾಖಲಾಗಿದೆ ಎಂದ ಅವರು, ಮನೆಯಿಂದ ಹೊರ ಬಂದ ವೇಳೆ ತಪ್ಪದೆ ಮಾಸ್ಕ್ ಧರಿಸಬೇಕು. ಸಭೆ ಸಮಾರಂಭ ಆದಷ್ಟು ಕಡಿಮೆ ಮಾಡಬೇಕು. ಅಗತ್ಯವಿಲ್ಲದೇ ಹೊರಗಡೆ ಬರುವುದನ್ನ ತಡೆಯಬೇಕು. ಕೋವಿಡ್ ತಡೆಯಲು ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.ತಾಲ್ಲೂಕುವಾರು ಕೋವಿಡ್ ಪ್ರಕರಣಗಳು: 1. ಆಲೂರು - 31.2. ಅರಕಲಗೂಡು- 28.3. ಅರಸೀಕೆರೆ- 95.4. ಬೇಲೂರು -15.5. ಚನ್ನರಾಯಪಟ್ಟಣ- 243.6. ಹಾಸನ -199.7. ಹೊಳೆನರಸೀಪುರದಲ್ಲಿ- 84.8. ಸಕಲೇಶಪುರ- 11. 9. ಇತರ 5 ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಒಟ್ಟು 711 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.