ETV Bharat / state

ಸ್ಕ್ಯಾನಿಂಗ್ ಸೆಂಟರ್​ಗೆ ದಿಢೀರ್​ ಭೇಟಿ ನೀಡಿದ ಡಿಸಿ ಮಾಡಿದ್ದೇನು? .. ಕೊಟ್ಟ ವಾರ್ನಿಂಗ್​ ಏನು?

author img

By

Published : Dec 3, 2019, 10:13 AM IST

ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿದ್ದರೂ ಕೂಡ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಬರೆದು ಕೊಟ್ಟ ಪ್ರಕರಣಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದು ಎಚ್ಚರಿಕೆ ನೀಡಿದರು.

District Collector Girish
ಜಿಲ್ಲಾಧಿಕಾರಿಯವರ ಪರಿಶೀಲನೆ

ಹಾಸನ: ನಗರದ ಯೂನಿಟಿ ಸ್ಕ್ಯಾನಿಂಗ್ ಸೆಂಟರ್​ಗೆ ಜಿಲ್ಲಾಧಿಕಾರಿ ಆರ್. ಗಿರೀಶ್‌ ಭೇಟಿ ನೀಡಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿದ್ದರೂ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಹೋಗಲು ಬರೆದು ಕೊಟ್ಟ ಪ್ರಕರಣಗಳನ್ನು ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದು ಎಚ್ಚರಿಕೆ ನೀಡಿದರು.

ಯೂನಿಟಿ ಸ್ಕ್ಯಾನಿಂಗ್ ಸೆಂಟರ್​ಗೆ ದಿಢೀರ್​ ಭೇಟಿ ನೀಡಿದ ಜಿಲ್ಲಾಧಿಕಾರಿ ಗಿರೀಶ್‌

ಜಿಲ್ಲಾಧಿಕಾರಿ ಆರ್. ಗಿರೀಶ್‌ರ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಹಾಸನ ತಾಲೂಕು ವೈದ್ಯಾಧಿಕಾರಿ ಡಾ ವಿಜಯ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಹಿರಣ್ಣಯ್ಯ ಅವರೊಂದಿಗೆ ನಗರದ ಯೂನಿಟಿ ಸ್ಕ್ಯಾನಿಂಗ್ ಸೆಂಟರ್​ಗೆ ಭೇಟಿ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಸರ್ಕಾರಿ ಆಸ್ಪತ್ರೆಯಿಂದ ಚೀಟಿ ಬರೆಸಿ ತಂದಿರುವ ರೋಗಿಗಳನ್ನು ವಿಚಾರಿಸಿ ವೈದ್ಯಾಧಿಕಾರಿಗಳಿಂದಲೂ ವಿವರಣೆ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸ್ಕ್ಯಾನ್ ಮಾಡಲು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ರೈತರ ಜೊತೆ ಸಭೆ ಮಾಡಿದಾಗ ಹೆಚ್ಚಿನ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಸ್ಕ್ಯಾನಿಂಗ್​ ಹಾಗೂ ಆಸ್ಪತ್ರೆಗೆ ಭೇಟಿ ಕೊಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲ ಕಡೆ ಟೆಕ್ನಿಶನ್​ಗಳ ಕೊರತೆ ಇದೆ. ನಮ್ಮಲ್ಲಿ ಸೌಲಭ್ಯಗಳು ಇದ್ದರೂ ಇಲ್ಲಿಗೆ ಬರೆದು ಕಳುಹಿಸಿದ್ದಾರೆ. ಕೊರತೆ ಇರುವ ನೌಕರರ ನೇಮಕಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಇದ್ದರೂ ಬೇರೆಡೆಗೆ ಬರೆದುಕೊಟ್ಟ ಪ್ರಕರಣದಲ್ಲಿ ಸಂಬಂಧ ಪಟ್ಟವರಿಂದ ವಿವರಣೆ ಪಡೆಯಲು ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

Intro:ಹಾಸನ: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿದ್ದರೂ ಕೂಡ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಬರೆದು ಕೊಟ್ಟ ಪ್ರಕರಣಗಳನ್ನು ಜಿಲ್ಲಾಧಿಕಾರಿಯವರು ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್‌ರವರು ಬಿ.ಎಂ. ರಸ್ತೆ ಬಳಿ ಇರುವ ಯೂನಿಟ್ ಸ್ಕ್ಯಾನ್ ಸೆಂಟರ್‌ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್,ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಹಾಸನ ತಾಲ್ಲೂಕು ವೈದ್ಯಾಧಿಕಾರಿ ಡಾ ವಿಜಯ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಹಿರಣ್ಣಯ್ಯ ಅವರೊಂದಿಗೆ ನಗರದ ಯೂನಿಟಿ ಸ್ಕ್ಯಾನಿಂಗ್ ಸೆಂಟರ್ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸರ್ಕಾರಿ ಆಸ್ಪತ್ರೆಯಿಂದ ಚೀಟಿ ಬರೆಸಿ ತಂದಿರುವ ರೋಗಿಗಳನ್ನು ವಿಚಾರಿಸಿ ವೈದ್ಯಾಧಿಕಾರಿ ಗಳಿಂದಲೂ ವಿವರಣೆ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸ್ಕ್ಯಾನ್ ಮಾಡಲು ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ರೈತರ ಜೊತೆ ಸಭೆ ಮಾಡಿದಾಗ ಹೆಚ್ಚಿನ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ದಿಡೀರ್ ಭೇಟಿ ಕೊಡಲಾಗಿದೆ. ಹಿಮ್ಸ್‌ನಲ್ಲಿ ಸೌಲಭ್ಯ ಇದ್ದರೂ ಕೂಡ ಮೂವರು ಯೂನಿಟ್ ಸ್ಕ್ಯಾನ್‌ನಲ್ಲಿ ಇರುವುದು ಕಂಡು ಬಂದಿದೆ. ಈಗಾಗಲೇ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಯಾವುದೇ ರೀತಿಯಲ್ಲೂ ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ಸ್ಕ್ಯಾನ್ ಹಾಗೂ ಇತರೆ ಸೌಲಭ್ಯಗಳು ಏನಿದೆ ಸಾರ್ವಜನಿಕರಿಗೆ ಅಲ್ಲೆ ಸಿಗಬೇಕು. ಅಲ್ಲಿ ಇಲ್ಲದಿರುವ ಸ್ಕ್ಯಾನ್ ಇತರೆಗಳು ಖಾಸಗಿಯಲ್ಲಿ ಮಾಡಿಸಿಕೊಳ್ಳಬಹುದು. ಈಗಾಗಲೇ ಸೂಚನೆ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಸ್ಕ್ಯಾನ್ ಸೆಂಟರ್ ಮೇಲೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಒಟ್ಟಾರೆ ಉದ್ದೇಶ ಸಾರ್ವಜನಿಕರಿಗೆ ಸರಕಾರಿ ಸೌಲಭ್ಯಗಳು ಲಭ್ಯವಾಗಬೇಕು. ಅದನ್ನು ದುರುಪಯೋಗಪಡಿಸಿಕೊಂಡು ಬೇರೆ ಸ್ಕ್ಯಾನಿಂಗ್ ಸೆಂಟರ್‌ಗಳು ಹೆಚ್ಚಿನ ಧರದಲ್ಲಿ ಸಾರ್ವಜನಿಕರಿಂದ ಪಡೆದು ಸ್ಕ್ಯಾನಿಂಗ್ ಮಾಡಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಕೆಲ ಕಡೆ ಟೆಕ್ನಿಶ್‌ಗಳ ಕೊರತೆ ಇದ್ದು, ನಮ್ಮಲ್ಲಿ ಇರುವ ಸೌಲಭ್ಯಗಳು ಇದ್ದರೂ ಕೂಡ ಇಲ್ಲಿಗೆ ಬರೆದು ಕಳುಹಿಸಿದ್ದಾರೆ. ಕೊರತೆ ಇರುವ ನೌಕರರನ್ನು ನೇಮಕಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಇದ್ದರೂ ಬೇರೆಡೆಗೆ ಬರೆದುಕೊಟ್ಟ ಪ್ರಕರಣದಲ್ಲಿ ಸಂಭಂದಪಟ್ಟವರಿಂದ ವಿವರಣೆ ಪಡೆಯಲು ಅವರು ಸೂಚಿಸಿದರು.Body:ಬೈಟ್ : ಆರ್. ಗಿರೀಶ್‌, ಜಿಲ್ಲಾಧಿಕಾರಿ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ‌.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.