ETV Bharat / state

ಕೊರೊನಾದಿಂದ ಪಾರಾಗಲು ನೆರೆಹೊರೆಯವರಿಗೆ ಉಚಿತ ಕಷಾಯ ಹಂಚಿಕೆ - Corona drug

ಕೊರೊನಾದಿಂದ ಜನತೆ ಆತಂಕಕ್ಕೊಳಗಾಗಿರುವ ನಡುವೆ ಉಚಿತವಾಗಿ ನೆರೆಹೊರೆಯವರಿಗೆ ಕಷಾಯ ನೀಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಕಷಾಯ ತಯಾರಿಕೆಗೆ ಬೇಕಾದ ಗಿಡಮೂಲಿಕೆಗಳನ್ನು ತಮ್ಮ ಮನೆಯ ಹಿಂಭಾಗದಲ್ಲೇ ಬೆಳೆದಿದ್ದು, ಇವರೀಗ ಹಾಸನದಲ್ಲಿ ಮನೆ ಮಾತಾಗಿದ್ದಾರೆ.

Distribution of free decoction to neighbors to prevent from  corona
ಕೊರೊನಾದಿಂದ ಪಾರಾಗಲು ನೆರೆಹೊರೆಯವರಿಗೆ ಉಚಿತ ಕಷಾಯ ಹಂಚಿಕೆ
author img

By

Published : Jul 23, 2020, 10:52 PM IST

ಹಾಸನ: ಕೊರೊನಾ ರೋಗ ಬಂದಾಗಿನಿಂದ ಸಣ್ಣ-ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಓಡುತ್ತಿದ್ದವರು ಮನೆಯಲ್ಲಿಯೇ ಔಷಧಿ ತಯಾರಿಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಹಾಸನ ಮೂಲದ ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಸದ್ಯ ಅಂತಿಮ ವರ್ಷದ ಆಯುರ್ವೇದ ಅಧ್ಯಯನ ಮಾಡುತ್ತಿರುವ ಸಿಂಧುಶ್ರೀ ಎಂ. ಅತ್ರೇಯ ಲಾಕ್​​​​ಡೌನ್​ ಬಳಿಕ ಮರಳಿ ಹಾಸನಕ್ಕೆ ಬಂದು ನೆರೆ ಹೊರೆಯವರಿಗೆ ಕಷಾಯ ನೀಡುವ ಮೂಲಕ ನೆರವಾಗುತ್ತಿದ್ದಾರೆ.

ಕೊರೊನಾದಿಂದ ಪಾರಾಗಲು ನೆರೆಹೊರೆಯವರಿಗೆ ಉಚಿತ ಕಷಾಯ ಹಂಚಿಕೆ

ಅಕ್ಕಪಕ್ಕದ ಮನೆಯವರಿಗೆ ಉಚಿತವಾಗಿ ಕಷಾಯವನ್ನು ನೀಡುವ ಮೂಲಕ ಕೊರೊನಾ ಸಂದರ್ಭದಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ. ಇನ್ನು ಅಗಸ್ತ್ಯ ಲಿಂಗೇಶ್ವರ ಟ್ರಸ್ಟ್ ಮೂಲಕ ಕುಟುಂಬದವರು ಕಷಾಯ ತಯಾರಿಸುತ್ತಿದ್ದು, ತಮ್ಮ ಮನೆಯ ಹಿತ್ತಲಲ್ಲಿ ಕಷಾಯಕ್ಕೆ ಬೇಕಾದಂತಹ ಎಲ್ಲಾ ಗಿಡ ಮೂಲಿಕೆಗಳನ್ನು ಬೆಳೆಸಿದ್ದಾರೆ.

ಸರ್ಕಾರವೂ ಕೂಡ ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ಲವಂಗ, ಚೆಕ್ಕೆ ಮುಂತಾದವುಗಳನ್ನು ಹೆಚ್ಚು ಬಳಸಿ ಎಂದು ಸಲಹೆ ನೀಡುತ್ತಲೇ ಬಂದಿದೆ. ಅವುಗಳನ್ನು ಕೂಡ ಬಳಸಿ ಉತ್ತಮ ರೀತಿಯ ಕಷಾಯವನ್ನು ತಯಾರಿಸಿ ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಸುಲಭ ಮಾರ್ಗವನ್ನು ತೋರಿಸುತ್ತಿದ್ದಾರೆ.

ಇನ್ನು ಆಯುರ್ವೇದದಲ್ಲಿ ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡುತ್ತಿರುವ ಸಿಂಧುಶ್ರೀ ಕಷಾಯವನ್ನು ಮಾಡುವ ಬಗೆಯನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.